ಮತ್ತೆ ಹಳೆಯದಕ್ಕೆ ವಿದಾಯ ಹೇಳಿ ಹೊಸದನ್ನು ಸ್ವಾಗತಿಸುವ ಸಮಯ ಬಂದಿದೆ. ಈಗಾಗಲೇ 2023ರ ಕೊನೆಯ ಪುಟದ ಅಂತಿಮ ಸಾಲಿನಲ್ಲಿರುವ ನಾವು 2024ರ ಹೊಸ ಪುಟವನ್ನು ತೆರೆಯಲಿದ್ದೇವೆ. ಪ್ರತಿಯೊಂದು ವರ್ಷದಲ್ಲಿಯೂ ನಾವು ಕಲಿಕೆಗಳ ಸಾಗರಕ್ಕೆ ದುಮೂಕಿ ಈಜಾಡಿ ಹೊಸ ವರ್ಷವೆಂಬ ದಡಕ್ಕೆ ಬಂದು ಸೇರುವುದು ಸಹಜವಾದ್ದು. ಜೀವನ ಅನ್ನೋದು ಯುಗಾದಿಯ ತರ ಕಹಿ ಸಿಹಿ ಮಿಶಿತವಾದದ್ದು. ಆಗಾಗ ಕಹಿ ನೆನಪುಗಳು ಬಂದರೆ ಮಾತ್ರ ಸಿಹಿ ನೆನಪಿನ ಮೌಲ್ಯ ತಿಳಿಯುವುದು. ಸದಾ ಜೀವನದ ತಕ್ಕಡಿಗೆ ನೆನಪುಗಳ ರಾಶಿಯನ್ನು ಸುರಿದು ಕಹಿ ಸಿಹಿ ನೆನಪಿನ ಅಳತೆ ಮಾಡವುದು ಮಾನವರ ಜೀವನಕ್ಕೆ ಪರಮಾತ್ಮ ನೀಡಿರುವ ವ್ಯವಹಾರವೇ ಆಗಿದೆ.
ಪ್ರತೀ ವರ್ಷ ಮುಗಿಯುವಾಗಲು ಮುಂದಿನ ವರ್ಷಕ್ಕೆ ನಿರೀಕ್ಷೆಗಳ ಸಂಖ್ಯೆ ಏರುತ್ತಿರುತ್ತದೆ. ನಾ ಈ ವರ್ಷ ಇದನ್ನು ಮಾಡಿದೆ, ಇದನ್ನು ಮಾಡಬೇಕಿತ್ತು, ಹೀಗೆ ಆಸೆ, ಕನಸುಗಳು ಕಾಡುತಿರುತ್ತದೆ. ಈ ವರ್ಷ ಪಡೆಯಲಾರದನ್ನು ಮುಂದಿನ ವರ್ಷ ಪಡೆಯುವ ನಿರೀಕ್ಷೆ, ತಿಳಿದುಕೊಂಡಿದ್ದನ್ನು ಇನ್ನೊಬ್ಬರಿಗೆ ತಿಳಿಸುವ ನಿರೀಕ್ಷೆ ಹೆಚ್ಚಿನದನ್ನು ಕಲಿಯುವ ನಿರೀಕ್ಷೆ. ಹೀಗೆ ವರ್ಷ ಕಳೆದರು ನಿರೀಕ್ಷೆಗಳಿಗೆ ಮಿತಿಯಿರುವುದಿಲ್ಲ. ನೆನಪಿನ ಬುತ್ತಿಯನ್ನು ಒಂದೊಂದಾಗೆ ಬಿಚ್ಚಿದಾಗಲೇ ತಿಳಿಯುವುದು ವರ್ಷದ ನೆನಪುಗಳು ಹೇಗಿದ್ದವೆಂದು. ಇಟ್ಟುಕೊಂಡ ನಿರೀಕ್ಷೆ ಹುಸಿಯಾದಾಗ ಬಂದ ಕಣ್ಣೀರು. ಅನಿರೀಕ್ಷಿತವಾಗಿ ನಮ್ಮನ್ನೆ ಹುಡುಕಿಕೊಂಡು ಬಂದ ಸಂತೋಷ. ನೀ ಪ್ರೀತಿಸುವವರೇ ನಿನ್ನನ್ನು ತೊರೆದ ಕ್ಷಣ. ನಿನ್ನದಲ್ಲದವರು ನಿನ್ನ ಬೆಂಬಲಕ್ಕೆ ನಿಂತು ಸಂತೈಸಿದ ಕ್ಷಣ. ಜೀವನಾನೇ ಹಾಗೆ ಇಲ್ಲಿ ಯಾವುದೋ ಒಂದನ್ನು ಕಳೆದುಕೊಂಡರೆ. ಇನ್ನೊಂದು ಯಾವುದೋ ನಮಗಾಗಿ ಕಾಯುತಿರುತ್ತದೆ.
ಹೊಸ ಆರಂಭ ಎಂಬುದು ಯಾವುದೇ ಕೆಲಸ ಆರಂಭಿಸಲು ಶುಭ ಸಂಕೇತವಾಗಿದೆ. ಪ್ರತೀ ವರ್ಷದ ಆರಂಭವು ಸಾಕಷ್ಟು ಧನಾತ್ಮಕ ಚಿಂತನೆಗಳು ಹಾಗೂ ಉತ್ತಮ ಶಕ್ತಿಯ ಅಂಶ ಒದಗಿಸುತ್ತದೆ. ಹೊಸ ಉತ್ಸಾಹವನ್ನು ಮೈಗುಡಿಸಿವಂತೆ ಮಾಡುತ್ತದೆ. ವರ್ಷ ಕೊನೆಗೂಳುತ್ತಿದಂತೆಯೇ ಜನರು ಹೊಸ ಹೊಸ ಭರವಸೆಗಳು ಹಾಗೂ ಹೊಸ ಆರಂಭದತ್ತ ಮುಖ ಮಾಡುವುದು ವಾಡಿಕೆ. ನಮ್ಮ ಗುರಿಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ನಿರ್ಧಾರಗಳನ್ನು ಈ ಸಮಯದಲ್ಲಿ ಮಾಡುವುದು ಅತ್ಯುತ್ತಮವಾಗಿದೆ. ಆಸೆ, ನಿರೀಕ್ಷೆ, ಕನಸುಗಳಿಗೆ ಹೊಸ ರೂಪ ನೀಡಿ ಬದುಕಿನ ಬಂಡಿಯನ್ನು ಮುಂದೂಡಬೇಕಿದೆ. ಎಷ್ಟೋ ಜನಕ್ಕೆ ಸಿಗದ ಅವಕಾಶ, ಹೊಸ ವರ್ಷಕ್ಕೆ ಕಾಲಿಡುವ ಯೋಗ ನನಗೆ ದೊರೆತಿದೆ ಎಂದು ತಿಳಿದು ಹೊಸ ಚೈತನ್ಯವನ್ನು ಬಾಳಲ್ಲಿ ಬೆಳಗಬೇಕು. ಪ್ರತೀವರ್ಷವು ನಮಗೆ ಹೊಸ ರೆಕ್ಕೆಗಳು ಮೂಡುತ್ತವೆ ನಮ್ಮೊಳಗಿನ ಎಲ್ಲ ಗಡಿಗಳನ್ನು ಮೀರಿ ಹೊಸ ಲೋಕದತ್ತ ಹಾರಲು. ಒಂದು ಮಾತಿದೆ ದೇವರು ವರವನ್ನು ಕೊಡುವುದಿಲ್ಲ, ಶಾಪವನ್ನು ಕೊಡುವುದಿಲ್ಲ, ಬದಲಾಗಿ ಅವಕಾಶಗಳನ್ನು ಕೊಡುತ್ತಾರೆ. ಆ ಅವಕಾಶವನ್ನು ವರ ಅಥವಾ ಶಾಪವಾಗಿಸುವುದು ನಮ್ಮ ಕೈಯಲ್ಲಿದೆ. ಹಾಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಹೊಸವರ್ಷಕ್ಕೆ ಹೆಜ್ಜೆ ಇಡೋಣ.
-ದಿವ್ಯ ದೇವಾಡಿಗ
ಎಸ್.ಡಿ.ಎಂ., ಕಾಲೇಜು ಉಜಿರೆ