Advertisement

ದಿಲ್ಲಿಯಲ್ಲಿ ರಂಜಿಸಿದ ಅರೆಭಾಷೆ ಸಂಭ್ರಮ

02:48 PM Apr 28, 2017 | |

ಮಡಿಕೇರಿ: ರಾಜಧಾನಿ ದಿಲ್ಲಿಯ ಕರ್ನಾಟಕ ಸಂಘದಲ್ಲಿ ಇತ್ತೀಚೆಗೆ ಕೊಡವ-ಅರೆಭಾಷೆ ಸಂಭ್ರಮ ಕಾರ್ಯಕ್ರಮ ನಡೆಯಿತು. ಭಾಗಮಂಡಲದ ಅಭಿನಯ ಕಲಾಮಿಲನ ಚಾರಿಟೆಬಲ್‌ ಟ್ರಸ್ಟ್‌ನ ಕಲಾವಿದರ ಕೊಡಗು ಮತ್ತು ದಕ್ಷಿಣ ಕನ್ನಡದ ಗೌಡರ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದರಲ್ಲಿ ಕೊಡಗಿನ ಹುತ್ತರಿ, ಹರಿಸೇವೆ, ಕೈಲು ಮುಹೂರ್ತ, ನಾಟಿ ಸಂಭ್ರಮ, ಭತ್ತ ನೆಡುವುದು, ಸೋಬಾನೆ ಇತ್ಯಾದಿಗಳು ಮತ್ತು ದ.ಕ. ಜಿಲ್ಲೆಯ ಬಲೀಂದ್ರ ಪೂಜೆ, ಕಂಗೀಲು ಕುಣಿತ, ಚೆನ್ನುಕುಣಿತ, ಆಟಿ ಕಳೆಂಜ  ಮುಂತಾದ ಕಲಾಪ್ರದರ್ಶನಗಳು ವೀಕ್ಷಕರ ಮನತಣಿಸಿತು.

Advertisement

ಅನಂತರ ಕುಶಾಲನಗರದ ಆಟಿಟ್ಯೂಡ್‌ ತಂಡದಿಂದ ಮನಮೋಹಕ ನೃತ್ಯಗಳು ಮೂಡಿಬಂದವು. ಸ್ಥಳೀಯ ಕಲಾವಿದರಿಂದ ಗಾಯನ ಕಾರ್ಯಕ್ರಮಗಳು ನಡೆಯಿತು. ಇದಕ್ಕೂ ಮುಂಚೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊಡಗು ಪ್ರತ್ಯೇಕತೆಯ ಕೂಗುಗಳು ನಿಲ್ಲಬೇಕೆಂದರೆ ಕೊಡಗಿನ ಬೇಡಿಕೆಗಳಿಗೆ ಸರಕಾರವು ಸ್ಪಂದಿಸಬೇಕು. ಕೊಡಗಿಗೆ ವಿಶೇಷ ಪ್ರಾತಿನಿಧ್ಯ ನೀಡಬೇಕೆಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅರೆಭಾಷೆ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್‌ ಕೊಡವ ಮತ್ತು ಅರೆಭಾಷೆಯ ಅಭಿವೃದ್ಧಿಗೆ ಸರಕಾರದ ಜೊತೆ ಜೊತೆಗೆ ಜನಾಂಗದವರೂ ಕೂಡ ಸೇರಿ ದುಡಿಯಬೇಕೆಂದು ಕರೆ ನೀಡಿದರು. ಸಮಾರಂಭ ದಲ್ಲಿ ಸಂಘಟಕ ದೇವಂಗೋಡಿ ಹರೀಶ್‌, ಖ್ಯಾತ ಸಾಹಿತಿ ನಾಗತಿಹಳ್ಳಿ ರಮೇಶ, ಕೊಡವ ಸಮಾಜದ ಅಧ್ಯಕ್ಷರಾದ ಎಂ. ಕಾರ್ಯಪ್ಪ ಅಪ್ಪಯ್ಯ ಉಪಸ್ಥಿತರಿದ್ದರು. ಸಂಘದ ಜಂಟಿ ಕಾರ್ಯದರ್ಶಿ ತಡಿಯಪ್ಪನ ಪಿ. ಬೆಳ್ಯಪ್ಪ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜು ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next