Advertisement

ಆಗಸದಿಂದ ಕಪ್ಪು ಬಣ್ಣದ, ಬೆಳ್ಳಿಯ ಲೋಹ ಉದುರಿದಾಗ!

07:58 AM May 17, 2022 | Team Udayavani |

ಅಹ್ಮದಾಬಾದ್‌: ಇತ್ತೀಚೆಗೆ ದೇಶದ ಒಂದಲ್ಲ ಒಂದು ಕಡೆ ಆಗಸದಿಂದ ಲೋಹದ ತುಣುಕುಗಳು ಉದುರುವುದು ಪತ್ತೆಯಾಗುತ್ತಲೇ ಇವೆ.

Advertisement

ಈಗ ಗುಜರಾತ್‌ ಸರದಿ. ಅಲ್ಲಿನ ಮೂರು ಜಿಲ್ಲೆಗಳಲ್ಲಿ ಕಪ್ಪು ಬಣ್ಣದ, ಬೆಳ್ಳಿಯ ಲೋಹದ ಚೆಂಡುಗಳೇ ಆಗಸದಿಂದ ಉರುಳಿವೆ. ನೆಲದ ಮೇಲೆ ಬಿದ್ದ ರಭಸಕ್ಕೆ ಒಡೆದು ಚೆಲ್ಲಾಪಿಲ್ಲಿಯಾಗಿವೆ.

ಅವುಗಳೇನೆಂದು ತಿಳಿಯದ ಜನ ದಿಗ್ಭ್ರಾಂತರಾಗಿದ್ದಾರೆ! ಸುರೇಂದ್ರ ನಗರ ಜಿಲ್ಲೆಯ ಸಾಯ್ಲಾ ಹಳ್ಳಿಯಲ್ಲಿ ಲೋಹದ ಚೆಂಡೊಂದು ಪತ್ತೆಯಾಗಿದೆ.

ಖೇಡ ಜಿಲ್ಲೆಯ ಉಮ್ರೆತ್‌, ನದಿಯಾಡ್‌ನ‌ಲ್ಲೂ ಇಂತಹದ್ದೇ ವಿಚಿತ್ರ ವಸ್ತುಗಳು ಪತ್ತೆಯಾಗಿವೆ. ಆನಂದ ಜಿಲ್ಲೆಯ 3 ಹಳ್ಳಿಗಳಲ್ಲೂ ಇಂತಹದ್ದೇ ಘಟನೆಗಳು ನಡೆದಿವೆ. ಸದ್ಯ ಗುಜರಾತ್‌ನ ಬಾಹ್ಯಾಕಾಶ ಸಂಶೋಧನಾ ಘಟಕ ಆ ವಸ್ತುಗಳನ್ನು ಪರಿಶೀಲಿಸಿವೆ.

ಇದುವರೆಗಿನ ಮಾಹಿತಿ ಪ್ರಕಾರ ಅವು, ಉಪಗ್ರಹದ ಅವಶೇಷಗಳೆಂದು ಊಹಿಸಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next