Advertisement

Ahmedabad: ಪಾರ್ಕಿಂಗ್‌ ಏರಿಯಾದಲ್ಲಿ ಆಡುತ್ತಿದ್ದ ಒಂದು ವರ್ಷದ ಮಗುವಿನ ಮೇಲೆ ಹರಿದ ಕಾರು

01:31 PM Apr 14, 2024 | Team Udayavani |

ಅಹಮದಾಬಾದ್: ಹೌಸಿಂಗ್‌ ಸೊಸೈಟಿಯ ಪಾರ್ಕಿಂಗ್ ಪ್ರದೇಶದಲ್ಲಿ ಆಡುತ್ತಿದ್ದ ಒಂದು ವರ್ಷದ ಮಗುವಿನ ಮೇಲೆ ಕಾರು ಹರಿದು ಮೃತಪಟ್ಟಿರುವ  ಘಟನೆ ಶುಕ್ರವಾರ (ಏ.12 ರಂದು) ಅಹಮದಾಬಾದ್‌ನ ನೆಹರು ನಗರ ಪ್ರದೇಶದಲ್ಲಿ ನಡೆದಿದೆ.

Advertisement

ಹೌಸಿಂಗ್ ಸೊಸೈಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಮಹಾವೀರ್ ಅವರ ಒಂದು ವರ್ಷದ ಮಗು ಪಾರ್ಕಿಂಗ್‌ ಏರಿಯಾದಲ್ಲಿ ಆಡುತ್ತಿತ್ತು. ಈ ವೇಳೆ ಅಲ್ಲಿ ಕಾರು ಬಂದು ನಿಂತಿದೆ. ಪುಟ್ಟ ಮಗು ಆಡುತ್ತಾ ಮೆಲ್ಲನೆ ನಿಂತು ಕಾರಿನ ಎಡ ಚಕ್ರದ ಬಳಿ ಬಂದಿದೆ. ಈ ವೇಳೆ ಕಾರು ಮುಂದಕ್ಕೆ ಚಲಿಸಿದ್ದು, ಚಕ್ರದಡಿ ಮಗು ಸಿಲುಕಿಕೊಂಡಿದೆ.

ಕೂಡಲೇ ತಾಯಿ ಬಂದು ಮಗುವನ್ನು ಎಳೆದಿದ್ದಾರೆ. ಆದರೆ ಚಕ್ರ ಹರಿದ ಪರಿಣಾಮ ಮಗು ಮೃತಪಟ್ಟಿದೆ. ಭೀಕರ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾರು ಚಲಾಯಿಸುತ್ತಿದ್ದ ಕನಕ್ ಲಿಡಿಯಾ (45) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕ ಅಹಮದಾಬಾದ್‌ನ ಅಂಬಾವಾಡಿ ಪ್ರದೇಶದ ನಿವಾಸಿಯಾಗಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next