Advertisement

ಕೈರನ್‌ ಪೊಲಾರ್ಡ್‌ ಜತೆ ಕೃಣಾಲ್‌ ಪಾಂಡ್ಯ ವಿಚಿತ್ರ ವರ್ತನೆ!

08:13 AM Apr 26, 2022 | Team Udayavani |

ಮುಂಬಯಿ: ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ಆಟಗಾರ ಕೃಣಾಲ್‌ ಪಾಂಡ್ಯ ವಿಚಿತ್ರ ವರ್ತನೆಯ ಮೂಲಕ ವೈರಲ್‌ ಆಗಿದ್ದಾರೆ.

Advertisement

ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಆಟಗಾರನಾಗಿರುವ ಕೃಣಾಲ್‌, ರವಿವಾರದ ಮುಂಬೈ ಎದುರಿನ ಪಂದ್ಯದಲ್ಲಿ ಕೈರನ್‌ ಪೊಲಾರ್ಡ್‌ ಅವರ ಬಿಗ್‌ ವಿಕೆಟ್‌ ಉಡಾಯಿಸಿದ್ದರು. ಆದರೆ ಅವರು ಈ ವಿಕೆಟ್‌ ಪಡೆದ ಬಳಿಕ ವರ್ತಿಸಿದ ರೀತಿ ಕ್ರಿಕೆಟ್‌ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೃಣಾಲ್‌ ಪಾಂಡ್ಯ ಪಂದ್ಯದ ಅಂತಿಮ ಓವರ್‌ ಎಸೆಯಲು ಬಂದಾಗ ಆಗಲೇ ಮುಂಬೈ ಸೋಲು ಖಾತ್ರಿಯಾಗಿತ್ತು. ಕೈರನ್‌ ಪೊಲಾರ್ಡ್‌ ಕ್ರೀಸಿನಲ್ಲಿದ್ದರೂ ಪವಾಡ ಸಾಧ್ಯವಿರಲಿಲ್ಲ.

ಪಾಂಡ್ಯ ಎಸೆದ ಮೊದಲ ಎಸೆತ ವೈಡ್‌ ಆಗಿತ್ತು. ಮರು ಎಸೆತದಲ್ಲಿ ಪೊಲಾರ್ಡ್‌ ವಿಕೆಟ್‌ ಬಿತ್ತು. 19 ರನ್‌ ಮಾಡಿದ ಅವರು ದೀಪಕ್‌ ಹೂಡಾಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಇದನ್ನೂ ಓದಿ:ನಾನು ತಂಡವನ್ನು ಪ್ರೀತಿಸುತ್ತೇನೆ: ರೋಹಿತ್‌ ಶರ್ಮ

Advertisement

ಔಟಾದ ನಿರಾಸೆಯಲ್ಲಿ ಪೊಲಾರ್ಡ್‌ ಹೆಜ್ಜೆ ಹಾಕುತ್ತಿದ್ದಾಗ ಹಿಂದಿನಿಂದ ಬಂದ ಕೃಣಾಲ್‌ ಪಾಂಡ್ಯ ಅವರ ಮೇಲೆ ಹಾರಿ, ತಬ್ಬಿಕೊಂಡು ತಲೆಗೆ ಮುತ್ತಿಕ್ಕಿದ್ದಾರೆ. ಸಾಮಾನ್ಯವಾಗಿ ಇಂಥ ಸಂದರ್ಭದಲ್ಲಿ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದ ಪೊಲಾರ್ಡ್‌ ಇಲ್ಲಿ ಸಿಟ್ಟನ್ನು ನಿಗ್ರಹಿಸಿಕೊಂಡರು. ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸದೆ ಅಂಗಳ ತೊರೆದರು.

ಕೃಣಾಲ್‌ ಪಾಂಡ್ಯ ಅವರ ಈ ರೀತಿಯ ಸಂಭ್ರಮಾಚರಣೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next