Advertisement

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

04:38 PM Apr 24, 2024 | Team Udayavani |

“ಇತ್ಯಾದಿ’ ಎಂಬ ಸಿನಿಮಾವೊಂದು ಈ ವಾರ ತೆರೆಕಾಣುತ್ತಿದೆ. ಈ ಚಿತ್ರದ ಮೂಲಕ ನವನಟ ವಿಕ್ರಮ್‌ ನಾಯಕರಾಗಿ ಎಂಟ್ರಿಕೊಡುತ್ತಿದ್ದಾರೆ.

Advertisement

ಮಧ್ಯಮ ಕುಟುಂಬದ ಹಿನ್ನೆಲೆಯ ವಿಕ್ರಮ್‌ ಬಾಲ್ಯದಿಂದಲೇ ಸಿನಿಮಾದ ಕಡೆಗೆ ಆಸಕ್ತಿ ಬೆಳೆಸಿಕೊಂಡ ಹುಡುಗ. ಕಾಲೇಜಿನಲ್ಲಿ ಓದುತ್ತಿರುವಾಗಲೇ ಸಿನಿಮಾ, ಮಾಡೆಲಿಂಗ್‌ ನಂಟು ಬೆಳೆಸಿಕೊಂಡ ವಿಕ್ರಮ್, ತನ್ನ 21ನೇ ವಯಸ್ಸಿನಲ್ಲೇ ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಪ್ರತಿಭೆ. ಆರಂಭದಲ್ಲಿ ಒಂದಷ್ಟು ಧಾರಾವಾಹಿಗಳು, ಸಿನಿಮಾಗಳು, ಆಲ್ಬಂಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡ ವಿಕ್ರಮ್‌ ಇದೀಗ “ಇತ್ಯಾದಿ’ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಅಂದಹಾಗೆ, ಮರ್ಡರ್‌ ಮಿಸ್ಟ್ರಿ ಕಥಾಹಂದರ ಹೊಂದಿರುವ “ಇತ್ಯಾದಿ’ ಸಿನಿಮಾದಲ್ಲಿ ವಿಕ್ರಮ್‌ ಮೊದಲ ಬಾರಿಗೆ ಖಡಕ್‌ ಖಾಕಿ ತೊಟ್ಟು ಪೊಲೀಸ್‌ ಅಧಿಕಾರಿ ಗೆಟಪ್‌ ನಲ್ಲಿ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಂಬರಲಿರುವ

“ಡ್ಯೂಡ್‌’ ಸಿನಿಮಾದಲ್ಲೂ ವಿಕ್ರಮ್‌ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಇದೊಂದು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಶೈಲಿಯ ಸಿನಿಮಾ. ಇದರಲ್ಲಿ ವಿಶೇಷ ಪೊಲೀಸ್‌ ತನಿಖಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ತನ್ನ ಸ್ವಂತ ಊರಿಗೆ ಪೊಲೀಸ್‌ ಅಧಿಕಾರಿಯಾಗಿ ಬರುವ ನಾಯಕ ಊರಿನಲ್ಲಿ ನಡೆದಿರುವ ಕ್ರೈಂನ ಹಿಂದಿರುವ ಕಾಣದ ಕೈಗಳನ್ನು ಹೇಗೆ ಹುಡುಕುತ್ತಾನೆ ಎಂಬುದು ನನ್ನ ಪಾತ್ರ’ ಎನ್ನುತ್ತಾರೆ ವಿಕ್ರಮ್‌.

 

Advertisement
Advertisement

Udayavani is now on Telegram. Click here to join our channel and stay updated with the latest news.

Next