Advertisement

ITF Tennis: ಫೈನಲ್ ಪ್ರವೇಶಿಸಿದ ಭಾರತದ ರಾಮಕುಮಾರ್ ರಾಮನಾಥನ್

12:02 PM Dec 02, 2023 | Team Udayavani |

ಕಲಬುರಗಿ: ಇಲ್ಲಿ ನಡೆಯುತ್ತಿರುವ US $25000 ಡಾಲರ್ ಮೊತ್ತದ ಐಟಿಎಫ್ ಕಲಬುರಗಿ ಓಪನ್- 23 ಪುರುಷರ ಪಂದ್ಯಾವಳಿ ಫೈನಲ್ ಹಂತಕ್ಕೆ ಭಾರತದ  ರಾಮಕುಮಾರ ರಾಮನಾಥನ್ ಪ್ರವೇಶಿಸಿದ್ದಾರೆ.

Advertisement

ಶನಿವಾರ ನಡೆದ ಸಿಂಗಲ್ಸ್ ಸೆಮಿ ಪೈನಲ್ ಪಂದ್ಯದಲ್ಲಿ ಭಾರತದ ರಾಮಕುಮಾರ ರಾಮನಾಥನ್ ಅವರು ಜಪಾನಿನ ಟಗೂಚಿ ರೊಟಾರೋ ಅವರನ್ನು 6-2, 6-1 ಸೆಟ್ ನಿಂದ ಸೋಲಿಸಿ ಪೈನಲ್ ಪ್ರವೇಶಿಸಿದರು.

ಮಹತ್ವದ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ 7-ಡೇವಿಡ್ ಪಿಚ್ಲರ್ (ಆಸ್ಟ್ರಿಯನ್) ಅವರು 2-ಮತ್ಸುದಾ ರ‌್ಯೂಕಿ (ಜಪಾನ್) ಅವರನ್ನು 6-2; 6-4 ಅಂತರದಿಂದ ಸೋಲಿಸಿ ಫೈನಲ್ ಗೆ ಲಗ್ಗೆ ಇಟ್ಟರು.

ಸಿಂಗಲ್ಸ್ ಪೈನಲ್ ಪಂದ್ಯ ಭಾನುವಾರ ಡಿ.‌3ರಂದು ನಡೆಯಲಿದೆ. ಕಳೆದ ನ.‌25 ರಂದು ಪಂದ್ಯಾವಳಿ ಶುಭಾರಂಭಗೊಂಡಿದ್ದು, 26 ಹಾಗೂ 27 ರಂದು ಅರ್ಹತಾ ಪಂದ್ಯಗಳು ನಡೆದವು. ‌

ಪ್ರತಿ ವರ್ಷ ಟೂರ್ನಿ ಆಯೋಜಿಸಲು ಯೋಜನೆ: ಕಲಬುರಗಿಯಲ್ಲಿ ನಡೆಯುತ್ತಿರುವ ಐ.ಟಿ.ಎಫ್ ಟೂರ್ನಿಗೆ ಉತ್ತಮ‌ ನಿಟ್ಟಿನಲ್ಲಿ ಸ್ಪಂದನೆ ವ್ಯಕ್ತವಾಗಿದೆ. ಬೆಂಗಳೂರು, ಮುಂಬೈ ನಡೆತುವ ಟೂರ್ನಿಗೆ ಬೆರಳಣಿಕೆಯಲ್ಲಿಯೂ ಪ್ರೇಕ್ಷಕರ ಇರಲ್ಲ. ಆದರೆ ಕಲಬುರಗಿಯಲ್ಲಿ ವಿಭಿನ್ನ ಸ್ಥಿತಿ ಕಂಡಿದ್ದೇವೆ. ಆಟಗಾರರನ್ನು ಹುರಿದುಬಿಸಲು ನೂರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಬರುತ್ತಿದ್ದು, ಟೆನಿಸ್ ಬೆಳವಣಿಗೆಯ ನಿರೀಕ್ಷೆ ಗರಿಗೆದರಿದೆ. ಟೂರ್ನಿಯ ಅಯೋಜನೆಗೆ ಜಿಲ್ಲಾಡಳಿತ ಆತಿಥ್ಯ, ಸಹಕಾರ ಎಲ್ಲವು ಅಚ್ಚುಕಟ್ಟಾಗಿ ಮಾಡಿದೆ. ಮುಂದಿನ ದಿನದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಟೆನಿಸ್ ಬೆಳವಣಿಗೆಗೆ ಕಲಬುರಗಿಯೇ ನಮಗೆ ಬೇಸ್ ಪಾಯಿಂಟ್ ಆಗಿದೆ. ಪ್ರತಿ ವರ್ಷ ಇದೇ ರೀತಿಯ ಸಹಕಾರ ದೊರೆತಲ್ಲಿ ಐ.ಟಿ‌.ಎಫ್ ಮತ್ತು ಆಲ್ ಇಂಡಿಯಾ  ರ‌್ಯಾಂಕಿಂಗ್ ಜ್ಯೂನಿಯರ್ ಟೂರ್ನಿ ಆಯೋಜಿಸಲು ಯೋಜನೆ ಹೊಂದಲಾಗಿದೆ  ಎಂದು ಕೆ.ಎಸ್.ಎಲ್‌.ಟಿ.ಎ ಗೌರವ ಜಂಟಿ ಕಾರ್ಯದರ್ಶಿ ಸುನೀಲ ಯಜಮಾನಾ ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next