Advertisement

Tennis Tournaments: ನ.26ರಿಂದ ಕಲಬುರಗಿಯಲ್ಲಿ ಐಟಿಎಫ್ ಪುರುಷರ ಟೆನ್ನಿಸ್ ಪಂದ್ಯಾವಳಿ

01:16 PM Nov 24, 2023 | Team Udayavani |

ಕಲಬುರಗಿ: ವಿಶ್ವ ಟೆನ್ನಿಸ್ ಪಂದ್ಯಾವಳಿ ಆತಿಥ್ಯ ವಹಿಸಲು ಕಲಬುರಗಿ ನಗರ ಸಜ್ಜಾಗಿದ್ದು, ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಇದೇ ನ.‌26 ರಿಂದ ಡಿಸೆಂಬರ್ 3ರ ವರೆಗೆ ಅಲ್ಟ್ರಾ ಟೆಕ್ ಸಿಮೆಂಟ್ಸ್ ಎಟಿಎಫ್ ಪುರುಷರ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ.‌

Advertisement

8 ವರ್ಷಗಳ ನಂತರ ಕಲಬುರಗಿ ನಗರದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಜಗತ್ತಿನ 9 ದೇಶಗಳ ಕ್ತೀಡಾಪಟುಗಳು ಪಾಲ್ಗೊಳ್ಳುತ್ತಿದ್ದು, 65ನೇ ವಿಶ್ವ ಶ್ರೇಯಾಂಕಿತ ಆಟಗಾರ ಎವ್ಜೆನಿ ಡಾನ್ ಸ್ಕಾಯ್ , ಜರ್ಮನಿಯ ಲೂಯಿಸ್ ವೆಸೆಲ್ಸ್, ಉಕ್ರೇನ್ ನ ವ್ಲಾಡಸ್ಲ್ಯಾವ್, ಒರಲ್ಲೋವ್ ಮತ್ತು ಭಾರತದ ದಿಗ್ವಿಜಯಸಿಂಗ್ ಹಾಗೂ ಇತ್ತೀಚಿಗೆ ಧಾರವಾಡದಲ್ಲಿ ನಡೆದ ಐಟಿಎಫ್ ಓಪನ್ ಪಂದ್ಯಾವಳಿಯ ವಿಶೇಷ ರಾಮಕುಮಾರ ರಾಮನಾಥನ್ ಸೇರಿದಂತೆ ಇತರ ಪ್ರಮುಖರು ಪಾಲ್ಗೊಳ್ಳುತ್ತಿದ್ದಾರೆ.

ಪಂದ್ಯಾವಳಿಯು US $25000 ಬಹುಮಾನ ಹೊಂದಿದ್ದು, ಪಂದ್ಯಾವಳಿಗೆ ಕಳೆದ ಒಂದು ತಿಂಗಳಿನಿಂದ‌ ಸಿದ್ದತೆ ಗಳು ನಡೆದಿವೆ.‌ನ. 25 ರಂದೇ ಕ್ರೀಡಾಪಟುಗಳು ಕಲಬುರಗಿ ಗೆ ಆಗಮಿಸಲಿದ್ದಾರೆ. ಮೂರನೇ ಬಾರಿಗೆ ಈ ಟೆನ್ನಿಸ್ ಪಂದ್ಯಾವಳಿ ನಡೆಯುತ್ತಿದೆ. ಈ ಹಿಂದೆ 2002ರಲ್ಲಿ ಎಸ್.‌ಎಂ. ಕೃಷ್ಣ ಅವಧಿಯಲ್ಲಿ ಹಾಗೂ 2015 ರಲ್ಲಿ ಎರಡನೇ ಬಾರಿಗೆ ನಡೆದಿದ್ದರೆ ಈಗ ಮೂರನೇ ಬಾರಿಗೆ ನಡೆಯುತ್ತಿದೆ.‌ ಒಟ್ಟಾರೆ ಈ ಪಂದ್ಯಾವಳಿ ಹೊಸ ಮೈಲುಗಲ್ಲು ಸ್ಥಾಪಿಸಲಿದೆ.

ಎಲ್ಲ ಸಿದ್ದತೆ: ಪಂದ್ಯಾವಳಿಗೆ ಎಲ್ಲ ಸಿದ್ದತೆ ಗಳು ಮುಗಿದಿದ್ದು, ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿಶ್ವದರ್ಜೆಯ ಆಟಗಾರರ ಆಟವನ್ನು ನೋಡುವ ಮೂಲಕ ನಮ್ಮ ಮಕ್ಕಳು ಪ್ರೇರಣೆ ಪಡೆಯಲಿ ಎನ್ನುವುದು ಸರ್ಕಾರದ ಆಶಯವಾಗಿದೆ ಎಂದು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ತಿಳಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಕರ್ನಾಟಕ ಲಾನ್ ಟೆನ್ನಿಸ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಪ್ರಿಯಾಂಕ್ ಖರ್ಗೆ ಅವರ ಆಸಕ್ತಿ ಮೇರೆಗೆ ಪಂದ್ಯಾವಳಿ ನಡೆಯುತ್ತಿದೆ. ಅರ್ಹತಾ ಸುತ್ತಿನ ಪಂದ್ಯಗಳು 26 ಮತ್ತು 27 ರಂದು ನಡೆಯಲಿವೆ. ಪಂದ್ಯಾವಳಿಯಲ್ಲಿ 32 ಆಟಗಾರರು ಸಿಂಗಲ್ಸ್ ಪಂದ್ಯ ಆಡಲಿದ್ದರೆ, 16 ಜೋಡಿಗಳು ತಮ್ಮ ಸಾಮಥ್ರ್ಯ ಒರೆಗೆ ಹಚ್ಚಲುವೆ ಎಂದು ವಿವರಣೆ ನೀಡಿದರು.

Advertisement

ಇದನ್ನೂ ಓದಿ: Qatar: 8 ಮಂದಿ ಭಾರತೀಯರ ಮರಣದಂಡನೆ ವಿರುದ್ಧ ಭಾರತದ ಮೇಲ್ಮನವಿ ಸ್ವೀಕರಿಸಿದ ಕತಾರ್

Advertisement

Udayavani is now on Telegram. Click here to join our channel and stay updated with the latest news.

Next