Advertisement

ಐಟಿಸಿ ನೂತನ ಅಧ್ಯಕ್ಷರಾಗಿ ಸಂಜೀವ್‌ ಪುರಿ ನೇಮಕ; ಶೇ.18 ಏರಿದ ಕಂಪೆನಿ ಲಾಭ

09:58 AM May 14, 2019 | Sathish malya |

ಮುಂಬಯಿ : ತನ್ನ 72ರ ಹರೆಯದಲ್ಲಿ ಕಳೆದ ಶನಿವಾರ ನಿಧನ ಹೊಂದಿದ್ದ ವೈ ಸಿ ದೇವೇಶ್ವರ್‌ ಅವರಿಂದ ತೆರವಾದ ಸ್ಥಾನಕ್ಕೆ ಐಟಿಸಿ ನಿರ್ದೇಶಕರ ಮಂಡಳಿಯು ಸಂಜೀವ್‌ ಪುರಿ ಅವರನ್ನು ಮೇ 13ರಿಂದ ಜಾರಿಗೆ ಬಂದಿರುವಂತೆ ITC ಕಂಪೆನಿಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರನ್ನಾಗಿ ನೇಮಿಸಿದೆ.

Advertisement

ಇಂದು ಸೋಮವಾರ ಐಟಿಸಿ 2019ರ ಸಾಲಿನ ತನ್ನ ನಾಲ್ಕನೇ ತ್ತೈಮಾಸಿಕ ಫ‌ಲಿತಾಂಶವನ್ನು ಪ್ರಕಟಿಸಿದ್ದು ಶೇ.18ರ ಏರಿಕೆಯೊಂದಿಗೆ 3,482 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷ ಕಂಪೆನಿಯು 2,932.70 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು.

ಇದೇ ವೇಳೆ ಐಟಿಸಿ ತನ್ನ ಶೇರುದಾರರಿಗೆ ತಲಾ ಶೇರಿನ ಮೇಲೆ 5.75 ರೂ. ಡಿವಿಡೆಂಡ್‌ ಪ್ರಕಟಿಸಿದೆ. ಇಂದು ಐಟಿಸಿ ಶೇರಿನ ಬೆಲೆ ಶೇ.0.59ರ ಏರಿಕೆಯನ್ನು ದಾಖಲಿಸಿ 299.45 ರೂ. ಮಟ್ಟಕ್ಕೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next