Advertisement
ಜೂಡೊ, ಕರಾಟೆ, ಕ್ರಾವ್ ಮಾಗಾದಂತಹ ಸಮರ ಕಲೆ ಪ್ರಕಾರಗಳಿಂದ ಆಯ್ದ ಪಂಚಿಂಗ್, ಒದೆಯುವುದು, ಎತ್ತಿ ಬಿಸಾಕುವುದು, ಜಾಯಿಂಟ್ ಲಾಕ್ ಸೇರಿದಂತೆ 15ರಿಂದ 20 ರಕ್ಷಣಾ ತಂತ್ರಗಳ ಕುರಿತು ಮೂರು ತಿಂಗಳ ಕಾಲ ಬೇಸಿಕ್ ಟ್ರೈನಿಂಗ್ ಸೆಂಟರ್‌ನಲ್ಲಿ(ಬಿಟಿಸಿ) ಐಟಿಬಿಪಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ.
“ಐಟಿಬಿಪಿಯ ನಿವೃತ್ತ ಮಹಾ ನಿರ್ದೇಶಕ ಸಂಜಯ್ ಅರೋರಾ ನಿರ್ದೇಶನದಂತೆ ಕಳೆದ ವರ್ಷದಿಂದಲೇ ಸಿಬ್ಬಂದಿಗೆ ಈ ಬಗೆಯ ತರಬೇತಿ ನೀಡಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಸಿಬ್ಬಂದಿಗೆ ರಕ್ಷಣಾತ್ಮಕ ಹಾಗೂ ಆಕ್ರಮಣಕಾರಿ ಕೌಶಲಗಳನ್ನು ಕಲಿಸಲಾಗುತ್ತದೆ. ಎದುರಾಳಿ ಸೈನಿಕರನ್ನು ಹಣಿಯಲು ಮತ್ತು ಅಶಕ್ತಗೊಳಿಸಲು ಈ ಯುದ್ಧ ತಂತ್ರಗಳು ಸಹಕಾರಿಯಾಗಿವೆ,’ ಎಂದು ಐಟಿಬಿಪಿ ಐಜಿ ಈಶ್ವರ್ ಸಿಂಗ್ ದುಹಾನ್ ಹೇಳಿದರು. ಪ್ರತಿ 90 ದಿನಗಳಿಗೆ ಬದಲಿ ತುಕಡಿ ನಿಯೋಜನೆ:
“ಇನ್ನೊಂದೆಡೆ, ಗಡಿಗಳಲ್ಲಿ ಮತ್ತು ಅತಿ ಎತ್ತರದ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಸಿಬ್ಬಂದಿಯ ಕಾರ್ಯದಕ್ಷತೆ ಕುಗ್ಗದಂತೆ ತಡೆಯಲು ಯೋಜನೆ ರೂಪಿಸಲಾಗಿದೆ. ಪ್ರತಿ 90 ದಿನಗಳಿಗೆ ಬದಲಿ ತುಕಡಿಗಳನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ,’ ಎಂದು ತಿಳಿಸಿದರು.