Advertisement

ಹಿಮಾಲಯ ಶ್ರೇಣಿಯಲ್ಲಿ ಯೋಧರಿಂದ ಯೋಗ

12:18 PM Jun 21, 2022 | Team Udayavani |

ಹೊಸದಿಲ್ಲಿ: ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಉತ್ತರದ ಲಡಾಖ್‍ ನಿಂದ ಸಿಕ್ಕಿಂವರೆಗೆ ಇರುವ ಹಿಮಾಲಯ ಪರ್ವತದಲ್ಲಿ ಯೋಗಾಭ್ಯಾಸ ಮಾಡಿದರು.

Advertisement

ಈ ಕುರಿತು ಕೂ ಮಾಡಿರುವ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಯೋಗವೇ ರಕ್ಷಾಕವಚ! ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ ನ ಈ ಹಿಮವೀರರಿಗೆ ಲಡಾಖ್‌ ನಲ್ಲಿನ ಹವಾಮಾನವು ಪ್ರತಿಬಂಧಕವಾಗಿಲ್ಲ ಏಕೆಂದರೆ ಅವರು ಅಂತಾರಾಷ್ಟ್ರೀಯ ಯೋಗ ದಿನವನ್ನು ಹೆಮ್ಮೆಯಿಂದ ಆಚರಿಸುತ್ತಿದ್ದಾರೆ’ ಎಂದು ಬರೆದು ಕೊಂಡಿದ್ದಾರೆ.

ಇದನ್ನೂಓದಿ:ಮೈಸೂರು: ಆಯುಷ್ ಪ್ರದರ್ಶನ ಮಳಿಗೆ ಉದ್ಘಾಟಿಸಿದ ಪ್ರಧಾನಿ ಮೋದಿ

ಐಟಿಬಿಪಿ ಯೋಧರು ಹಲವಾರು ವರ್ಷಗಳಿಂದ ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಭಾರತ-ಚೀನಾ ಗಡಿಗಳ ವಿವಿಧ ಎತ್ತರದ ಹಿಮಾಲಯ ಶ್ರೇಣಿಗಳಲ್ಲಿ ಯೋಗವನ್ನು ಪ್ರಚಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಬಾರಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಅಂತಾರಾಷ್ಟ್ರೀಯ ಯೋಗ ದಿನದಂದು ಹಾಡನ್ನು ಅರ್ಪಿಸಿದ್ದಾರೆ. ಜೊತೆಗೆ ಐಟಿಬಿಪಿ ಯೋಧರು ಲಡಾಖ್‌ ನಲ್ಲಿ 17,000 ಅಡಿ ಎತ್ತರದಲ್ಲಿ ಯೋಗವನ್ನು ಪ್ರದರ್ಶಿಸಿದ್ದಾರೆ.

Koo App

ಪ್ರಪಂಚದಾದ್ಯಂತ 2022ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸುಮಾರು 25 ಕೋಟಿ ಜನರು ಭಾಗವಹಿಸಿದ್ದಾರೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲದೇ ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಯೋಗ ಗುರು ರಾಮದೇವ್ ಯೋಗ ಪ್ರದರ್ಶನ ನೀಡಿದ್ದರು. ಅನೇಕ ಮಕ್ಕಳು ಮತ್ತು ಇತರ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next