Advertisement

82 ವರ್ಷಗಳ‌ ಹಿಂದಿನ ಅಜೇಯ ದಾಖಲೆ ಸರಿದೂಗಿಸಿದ ಇಟಲಿ

11:26 PM Jun 21, 2021 | Team Udayavani |

ರೋಮ್‌: ಯೂರೋ ಕಪ್‌ ಫ‌ುಟ್‌ಬಾಲ್‌ ಪಂದ್ಯಾವಳಿಯಲ್ಲಿ ವೇಲ್ಸ್‌ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದ ರಾಬರ್ಟೊ ಮ್ಯಾನ್ಸಿನಿ ಸಾರಥ್ಯದ ಇಟಲಿ 82 ವರ್ಷಗಳ ರಾಷ್ಟ್ರೀಯ ದಾಖಲೆಯೊಂದನ್ನು ಸರಿದೂಗಿಸಿದೆ. ಈ ಜಯದೊಂದಿಗೆ ಇಟಲಿ ಸತತ 30 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಂತಾಯಿತು.

Advertisement

1935-1939ರ ನಡುವಿನ ಅವಧಿಯಲ್ಲೂ ಇಟಲಿ ಸತತ 30 ಪಂದ್ಯಗಳಲ್ಲಿ ಸೋಲು ಕಾಣದೆ ಮೆರೆದಾಡಿತ್ತು. ಅಂದು ಇಟಲಿ ಸತತ 2 ವಿಶ್ವಕಪ್‌ ಗೆಲ್ಲುವುದರ ಜತೆಗೆ 1936ರ ಒಲಿಂಪಿಕ್ಸ್‌ ಚಾಂಪಿಯನ್‌ ಕೂಡ ಆಗಿತ್ತು. ವಿಟೋರಿಯೊ ಪೋಝೊ ಅಂದಿನ ಕೋಚ್‌ ಆಗಿದ್ದರು.

ಇನ್ನೊಂದು ಪಂದ್ಯದಲ್ಲಿ ಅಜೇಯವಾಗಿ ಉಳಿದರೆ ಮ್ಯಾನ್ಸಿನಿ ಸಾರಥ್ಯದ ಇಟಲಿ ನೂತನ ದಾಖಲೆ ಸ್ಥಾಪಿಸಲಿದೆ. ಆದರೆ ಮುಂದಿನದು ನಾಕೌಟ್‌ ಪಂದ್ಯವಾದ್ದರಿಂದ ಇಟಲಿ ಗೆಲುವು ಕಾಣುವುದು ಅನಿವಾರ್ಯ.

ವೇಲ್ಸ್‌ ಎದುರಿನ ಪಂದ್ಯದ ಏಕೈಕ ಗೋಲ್‌ ಮ್ಯಾಟಿಯೊ ಪೆಸಿನ ಅವರಿಂದ ಸಿಡಿಯಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next