Advertisement

ಇಟಲಿಯಲ್ಲಿ Covid-19 ಮರಣಮೃದಂಗ: ಒಂದೇ ದಿನ ಸಾವಿರ ಮಂದಿ ಸಾವು, ಸೋಂಕಿತರ ಸಂಖ್ಯೆ 87ಸಾವಿರ!

09:29 AM Mar 29, 2020 | Nagendra Trasi |

ರೋಮ್: ಕೋವಿಡ್ 19 ಮಹಾಮಾರಿ ಇಟಲಿಯಲ್ಲಿ ಮರಣಮೃದಂಗ ಮುಂದುವರಿದಿದ್ದು ಶುಕ್ರವಾರದಂದು ಬರೋಬ್ಬರಿ ಒಂದು ಸಾವಿರ ಮಂದಿ ಸಾವನ್ನಪ್ಪಿದ್ದು, ಜಗತ್ತಿನಾದ್ಯಂತ ಈ ವೈರಸ್ ಹರಡುತ್ತಿರುವ ನಡುವೆಯೇ ಇಟಲಿಯಲ್ಲಿ ಕೋವಿಡ್ 19 ವೈರಸ್ ಅಟ್ಟಹಾಸ ಮಿತಿಮೀರಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇಟಲಿಯಲ್ಲಿ ಕೋವಿಡ್ 19 ವೈರಸ್ ದಾಳಿ ಇಟ್ಟು ಐದು ವಾರಗಳ ನಂತರ ದೇಶದಲ್ಲಿ ಕೋವಿಡ್ 19 ಪೀಡಿತರ ಸಂಖ್ಯೆ ದಾಖಲೆ ಎಂಬಂತೆ ಸುಮಾರು 87 ಸಾವಿರ ಪ್ರಕರಣಗಳು ದಾಖಲಾಗಿವೆ. ಕಳೆದ ಡಿಸೆಂಬರ್ ನಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಫ್ಲೂ ನಂತಹ ರೋಗ ಇದೀಗ ಜಗತ್ತನ್ನೇ ಬೆಚ್ಚಿಬೀಳಿಸಿದೆ ಎಂದು ವರದಿ ವಿವರಿಸಿದೆ.

ಇಟಲಿಯಲ್ಲಿ ಕೋವಿಡ್ 19 ವೈರಸ್ ನಿಂದ ಸಾವನ್ನಪ್ಪಿದವರ ಸಂಖ್ಯೆ 9ಸಾವಿರಕ್ಕೂ ಅಧಿಕ, ಕೋವಿಡ್ ಪೀಡಿತರ ಸಂಖ್ಯೆ 86,498. ಇದರಲ್ಲಿ ಗುಣಮುಖರಾದವರ ಸಂಖ್ಯೆ 10,950 ಎಂದು ವರದಿ ತಿಳಿಸಿದೆ. ದೇಶದಲ್ಲಿ ದಿನಂಪ್ರತಿ ಸರಾಸರಿ ಐದು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗುತ್ತಿದೆ ಎಂದು ಅಲ್ ಝಜೀರಾ ವರದಿ ಮಾಡಿದೆ.

ಮಾರ್ಚ್ 4ರ ನಂತರ ವೇಗ ಪಡೆದುಕೊಂಡ ಕೋವಿಡ್ 19 ಮಹಾಮಾರಿ ಇಟಲಿಯಲ್ಲಿ ದಿನಂಪ್ರತಿ ಸಾವನ್ನಪ್ಪುವವರ ಸಂಖ್ಯೆ 600ಕ್ಕೆ ದಾಟಿತ್ತು. ಇದೀಗ ಮಾರ್ಚ್ 27ರ ಒಂದೇ ದಿನ ಒಂದು ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next