Advertisement

ಇಟಲಿ ಆರ್ಥಿಕ ಹಿಂಜರಿತದ ಸಂಕಟ

03:01 PM May 01, 2020 | sudhir |

ಇಟಲಿ: ಇಟಲಿಗೆ ಇದೀಗ ಆರ್ಥಿಕ ಹಿಂಜರಿತದ ಸಂಕಟ ಶುರುವಾಗಿದ್ದು, 2020 ರ ಮೊದಲ ತ್ರೈ ಮಾಸಿಕದಲ್ಲಿ ಇಟಾಲಿಯನ್‌ ಜಿಡಿಪಿ ಶೇ.4.7ರಷ್ಟು ಕುಸಿದಿದೆ ಎಂದು ಇಟಾಲಿಯನ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟಾಟಿಸ್ಟಿಕ್ಸ್‌ ( ಐಎಸ್‌ಟಿಎಟಿ) ವರದಿ ಮಾಡಿದೆ. ಎರಡು ತ್ರೆ„ಮಾಸಿಕದಿಂದಲೇ ಅನಿಶ್ಚಿತ  ಬೆಳವಣಿಗೆಗಳು ಪ್ರಾರಂಭವಾಗಿದ್ದು, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕದಲ್ಲಿ ಶೇ.0.3ರಷ್ಟು ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.

Advertisement

1995ರ ನಂತರ ದೇಶದಲ್ಲಿ ಆಗಿರುವ ಅತ್ಯಂತ ಕೆಟ್ಟ ಆರ್ಥಿಕ ಬೆಳವಣಿಗೆ ಇದಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ದೇಶದೆಲ್ಲೆಡೆ ಜಾರಿ ಮಾಡಲಾದ ಲಾಕ್‌ಡೌನ್‌ ಕ್ರಮಗಳು ಆರ್ಥಿಕತೆಯ ಬೆಳವಣಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಐಎಸ್‌ಟಿಎಟಿ ಹೇಳಿದೆ.

ಯುರೋಪ್‌ ವಲಯದಲ್ಲಿ ಈ ಬೆಳವಣಿಗೆ ಆತಂಕ ಸೃಷ್ಟಿಸಿದೆ. ದಶಕಗಳ ಹಿಂದಿನ ಯುರೋಪ್‌ ಆರ್ಥಿಕ ಬಿಕ್ಕಟ್ಟಿನ ನಂತರ ಇಟಲಿ ಆರ್ಥಿಕ ಹಿಂಜರಿತಕ್ಕೆ ಒಳಗಾಗಿದ್ದು, ವ್ಯಾವಹಾರಿಕ ನಷ್ಟ ಅನುಭವಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next