Advertisement

ಹುಂಜ ಕೂಗಿದ್ದಕ್ಕೆ ಮಾಲಿಕನಿಗೆ 14 ಸಾವಿರ ದಂಡ ಹಾಕಿದ ಪೊಲೀಸರು !

06:10 PM Aug 16, 2020 | Mithun PG |

ಇಟಲಿ: ಮುಂಜಾನೆ ತನ್ನ ಮನೆಯ ಹುಂಜ ಕೂಗಿದಕ್ಕೆ 83 ವರ್ಷದ ವೃದ್ಧರೊಬ್ಬರು 14 ಸಾವಿರ ದಂಡ ಕಟ್ಟಿದ ಘಟನೆ  ಲೊಂಬಾರ್ಡಿಯಾ ಪಟ್ಟಣದ ಕ್ಯಾಸ್ಟಿರಾಗ ವಿಡಾರ್ಡೋ ಎಂಬಲ್ಲಿ ನಡೆದಿದೆ.

Advertisement

ಏಂಜಲೋ ಬೊಲೆಟ್ಟಿ ಎಂಬ 83 ವರ್ಷದ ವೃದ್ಧರೊಬ್ಬರು ತಮ್ಮ ಮನೆಯಲ್ಲಿ ಹುಂಜವೊಂದನ್ನು ಸಾಕಿದ್ದರು. ಈ ಹುಂಜ ದಿನಾ ಬೆಳಗ್ಗೆ 4:30ಕ್ಕೆ ಕೂಗುತ್ತಿತ್ತು. ಹುಂಜ ಕೂಗುವುದು ಸಾಮಾನ್ಯವಾದರೂ ಏಂಜಲೋ ಅವರ ನೆರೆಮನೆಯ ಕೆಲವರಿಗೆ ಇದು ಸಹಿಸಲು ಅಸಾಧ್ಯವಾಗಿತ್ತು. ಹಲವು ಬಾರಿ ಈ ಕುರಿತು ಮನವಿ ಮಾಡಿ ಕೋಳಿಯಿಂದ ನಿದ್ದೆ ಹಾಳಾಗುತ್ತಿದೆ ಎಂದಿದ್ದರು.

ಅದಾಗ್ಯೂ ಏಂಜಲೋ ಅವರಿಗೆ ಏನೂ ಮಾಡಲು ಸಾಧ್ಯವಿಲ್ಲದ್ದರಿಂದ, ನೆರೆಮನೆಯವರು ನೇರ ಹೋಗಿ ಪೊಲೀಸರಿಗೆ ದೂರು ಕೊಟ್ಟಿದ್ದರು. ಪರಿಣಾಮವೆಂಬಂತೆ ಸಾಕುಪ್ರಾಣಿ/ಪಕ್ಷಿಗಳನ್ನು ನೆರೆಮನೆಯಿಂದ 100 ಮೀ ದೂರದಲ್ಲಿಡಬೇಕು ಎಂಬ ಅಲ್ಲಿನ ಕಾನೂನಿನನ್ವಯ ಪೊಲೀಸರು ಎಂಜೆಲೋ ಬೊಲೆಟ್ಟಿ ಅವರಿಗೆ 166ಯುರೋ (14ಸಾವಿರ) ದಂಡ ವಿಧಿಸಿದ್ದಾರೆ.

ಈ ನಿಯಮ ನನಗೆ ಆಶ್ಚರ್ಯ ತಂದಿದೆ. ಇಷ್ಟು ದೂರ ಅಂತರ ಇರಬೇಕು ಎಂದು ಮೋದಲೇ ಹೇಳಬಹುದಿತ್ತು ಎಂದು ಎಂಜಲೋ ಇಟಾಲಿಯನ್ ಪತ್ರಿಕೆಗಳಿಗೆ ನೋವಿನಿಂದಲೇ ಹೇಳಿದ್ದಾರೆ. ಆದರೇ ನೆರೆಮನೆಯವರು ಹೇಳುವ ಪ್ರಕಾರ ಹುಂಜವು ಬೆಳಗ್ಗೆ 4:30 ರಿಂದ ಕೂಗಲು ಆರಂಭಿಸಿದರೇ 6 ಗಂಟೆಯವರೆಗೂ ಕೂಗುವುದನ್ನು ಮುಂದುವರೆಸುತ್ತಿತ್ತು. ಇದರಿಂದ ನಿದ್ರಾಭಂಗವಾಗುತ್ತಿದ್ದರಿಂದ ಸಾಕಷ್ಟು ಬಾರಿ ದೂರು ನೀಡಲಾಗಿತ್ತು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next