ರೋಮ್: ನಮ್ಮಲ್ಲಿ ಅಂಗಾಂಗವನ್ನು ರವಾನಿಸಲು ಜೀರೋ ಟ್ರಾಫಿಕ್ ದಾರಿ ಹಾಗೂ ಆಂಬ್ಯುಲೆನ್ಸ್ ಬಳಕೆಯಾಗುತ್ತದೆ. ಇಟಲಿಯಲ್ಲಿ ಪೊಲೀಸರು ಕಿಡ್ನಿ ರವಾನಿಸಲು ದುಬಾರಿ ಕಾರನ್ನು ಬಳಸಿರುವ ವಿಚಾರ ವೈರಲ್ ಆಗಿದೆ.
ಮಂಗಳವಾರ (ಡಿ.20 ರಂದು) ಎರಡು ಕಿಡ್ನಿಗಳನ್ನು ಇಟಲಿಯ ಈಶಾನ್ಯದಲ್ಲಿರುವ ಪಡುವಾ, ಮೊಡೆನಾದಿಂದ ನಂತರ ರೋಮ್‌ನ ಆಸ್ಪತ್ರೆಗಳಿಗೆ ಪೊಲೀಸರು ಲ್ಯಾಂಬೋರ್ಗಿನಿ ಹುರಾಕನ್ ಕಾರನ್ನು ಬಳಸಿಕೊಂಡು ಆಸ್ಪತ್ರೆಗೆ ರವಾನಿಸಿದ್ದಾರೆ.
300kmh (190mph) ಮತ್ತು 3.2 ಸೆಕೆಂಡುಗಳಲ್ಲಿ 0-100 ಕೆಎಂಎಚ್ ನಿಂದ ಹೋಗುವ ಸಾಮರ್ಥ್ಯವನ್ನು ಹೊಂದಿರುವ ಲ್ಯಾಂಬೋರ್ಗಿನಿ ಹುರಾಕನ್ ಐಷಾರಾಮಿ ಇಟಾಲಿ ಪೊಲೀಸರಿಗೆ ಕಾರು ತಯಾರಕರು 2017 ರ ಉಡುಗೊರೆಯಾಗಿ ನೀಡಿದ್ದಾರೆ.
ಈ ಕಾರನ್ನು ಉತ್ತರ ಇಟಲಿಯ ಬೊಲೊಗ್ನಾದಲ್ಲಿ ಹೆದ್ದಾರಿ ಗಸ್ತಿಗೆ ,ಸಾಮಾನ್ಯ ಪೊಲೀಸ್ ಕಾರ್ಯಾಚರಣೆಗೆ ಬಳಸಲಾಗುತ್ತದೆ. ತೀರ ಅಗತ್ಯವಿದ್ದಾಗ ಯಾರಿಗಾದರೂ ರಕ್ತ ಅಥವಾ ಅಂಗಾಂಗ ರವಾನೆ ಮಾಡಲು ಇದ್ದಾಗ ಈ ಕಾರನ್ನು ಬಳಸಲಾಗುತ್ತದೆ.
ನೂರಾರು ಕೀ.ಮಿ ದೂರ ಸಾಗಿ ಕಿಡ್ನಿಯನ್ನು ರವಾನಿಸಿರುವ ಲ್ಯಾಂಬೋರ್ಗಿನಿ ಪೊಲೀಸ್ ಕಾರು ಬಳಕೆಯಾದ ಬಗ್ಗೆ ಪೊಲೀಸ್ ಪೇಜ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ.