ಹೊಸದಿಲ್ಲಿ/ಪಟ್ನಾ: ಆರ್‌ಜೆಡಿ ಸಹವಾಸ ಸಾಕಾಗಿ ಹೋಗಿತ್ತು, ಹೀಗಾಗಿಯೇ ಮಹಾಮೈತ್ರಿ ಮುರಿಯಬೇಕಾಯಿತು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರತಿಪಾದಿಸಿದ್ದಾರೆ. “”ಒಂದು ವೇಳೆ ಮಹಾಘಟಬಂಧನ್‌ನೊಳಗೇ ಇದ್ದು, ಆಡಳಿತ ಮುಂದುವರಿಸಿದ್ದರೆ ಭ್ರಷ್ಟಾಚಾರ ವಿಚಾರದಲ್ಲಿ ರಾಜಿಯಾಗುವ ಅಪಾ ಯವಿತ್ತು. ಹೀಗಾಗಿ ಮಹಾಘಟಬಂಧನ್‌ನಿಂದ ಹೊರಬಂದೆ,” ಎಂದು ಅವರು ಹೇಳಿದ್ದಾರೆ.
ಸೋಮವಾರ ಸಂಜೆ, ಪಟ್ನಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ನಿತೀಶ್, ಮಹಾಘಟಬಂಧನ್ ಬಿಟ್ಟದ್ದು ಏಕೆ ಎಂಬ ಬಗ್ಗೆ ಉತ್ತರ ನೀಡಿದ್ದಾರೆ. ಅಲ್ಲದೆ, ಸೋಮವಾರ ಬೆಳಗ್ಗೆಯಷ್ಟೇ ತಮ್ಮ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಶರದ್ ಯಾದವ್ ಅವರಿಗೂ ಉತ್ತರ ನೀಡಿದ್ದಾರೆ. ಆರ್‌ಜೆಡಿ ನಾಯಕರಾದ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ದ್ದರೂ ಅವರು ತಮ್ಮ ಮೇಲಿನ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಲಿಲ್ಲ. ಬದಲಾಗಿ ನಿತೀಶ್‌ಕುಮಾರ್ ಪೊಲೀಸರೋ ಅಥವಾ ಸಿಬಿಐನ ವರೋ ಎಂದು ವ್ಯಂಗ್ಯ ಮಾಡಿದ್ದರು. ಹೀಗಾಗಿ ವಿಧಿ ಇಲ್ಲದೇ ಮೈತ್ರಿ ತ್ಯಜಿಸಬೇಕಾಯಿತು ಎಂದಿದ್ದಾರೆ.
ಅಲ್ಲದೆ ನನ್ನ ಈ ಪಕ್ಷ ರಚಿತವಾಗಿರುವುದು ಕೇವಲ ಬಿಹಾರಕ್ಕಾಗಿ. ಬೇರೆ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ನಾನೇಕೆ ನೋಡಲಿ. ಇದು ನನ್ನ ಜವಾಬ್ದಾರಿಯೂ ಅಲ್ಲ. ಯಾರಿಗೆ ಗೊತ್ತು, ಇನ್ನೂ ಕೆಲವು ಸಮಸ್ಯೆಗಳು ಇತ್ಯರ್ಥ ವಾಗಲೂಬಹುದು ಎಂದು ಹೇಳಿದ್ದಾರೆ.
ಮೋದಿಗೆ ಸರಿಸಾಟಿ ಯಾರೂ ಇಲ್ಲ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡಿದ ಅವರು, 2019ರಲ್ಲಿ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ ದ್ದಾರೆ. ಅವರೊಬ್ಬ ಅಗಾಧ ನಾಯಕ. ಇವರನ್ನು ಸೋಲಿಸಲು ನನ್ನಿಂದಲೂ ಸಾಧ್ಯವಿಲ್ಲ. ಹೀಗಾಗಿ 2019ರಲ್ಲಿ ಅವರದ್ದೇ ಗೆಲುವು ಎಂದು ಹೇಳಿದ್ದಾರೆ.
ಕೋರ್ಟ್‌ನಲ್ಲಿ ಜಯ: ಈ ಮಧ್ಯೆ, ನಿತೀಶ್‌ಕುಮಾರ್ ಅವರು ಬಿಜೆಪಿ ಬೆಂಬಲದೊಂದಿಗೆ ಸರಕಾರ ರಚಿಸಿದ್ದನ್ನು ಪ್ರಶ್ನಿಸಿ ಪಾಟ್ನಾ ಹೈಕೋ ರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಜಾ ಮಾಡಲಾ ಗಿದೆ. ಈಗಾಗಲೇ ವಿಧಾನಸಭೆಯಲ್ಲಿ ನಿತೀಶ್‌ಕುಮಾರ್ ಬಹುಮತ ಸಾಬೀತು ಪಡಿಸಿರುವುದರಿಂದ ಈಗ ವಿಚಾರಣೆ ನಡೆಸಿದರೆ ಏನೂ ಪ್ರಯೋಜನವಿಲ್ಲ. ಹೀಗಾಗಿ, ಅರ್ಜಿಯನ್ನು ವಜಾ ಮಾಡುತ್ತಿದ್ದೇವೆ ಎಂದು ಹೈಕೋರ್ಟ್ ಹೇಳಿದೆ. ಒಂದು ಅರ್ಜಿಯನ್ನು ಆರ್‌ಜೆಡಿ ಶಾಸಕ ಸಲ್ಲಿಸಿದ್ದರೆ, ಮತ್ತೂಂದನ್ನು ಸಮಾಜವಾದಿ ಪಕ್ಷದ ಶಾಸಕರೊಬ್ಬರು ಸಲ್ಲಿಸಿದ್ದರು.
ಸಿಎಂ ವಿರುದ್ಧ ಶರದ್ ಕಿಡಿ
ಇದೇ ಮೊದಲ ಬಾರಿಗೆ ಜೆಡಿಯು - ಬಿಜೆಪಿ ಮರುಮೈತ್ರಿ ಬಗ್ಗೆ ಮಾತನಾಡಿರುವ ಜೆಡಿಯು ಹಿರಿಯ ನಾಯಕ ಶರದ್ ಯಾದವ್, ನಿತೀಶ್ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ದುರದೃಷ್ಟಕರ ನಡೆಯಾಗಿದ್ದು, ಒಪ್ಪಿಕೊಳ್ಳಲಾಗುತ್ತಿಲ್ಲ. ಬಿಹಾರದ ಜನತೆ ಕೂಡ ಇದನ್ನು ಒಪ್ಪುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರದಲ್ಲಿ ಮಹಾ ಘಟಬಂಧನ್ ಮುರಿಯುತ್ತೆ ಎಂದು ಮೂರ್‍ನಾಲ್ಕು ತಿಂಗಳ ಮೊದಲೇ ರಾಹುಲ್ ಅವರಿಗೆ ಗೊತ್ತಿದ್ದರೆ, ಮತ್ಯಾಕೆ ಹಿಂದಿನ ಭೇಟಿ ವೇಳೆ ಅವರು ನನ್ನೊಂದಿಗೆ ಈ ವಿಚಾರ ಪ್ರಸ್ತಾವಿಸಿಲ್ಲ?
ನಿತೀಶ್ ಕುಮಾರ್, ಬಿಹಾರ ಮುಖ್ಯಮಂತ್ರಿ