Advertisement

ಒಂದು ರಾಮ ಮಂದಿರ ಕಟ್ಟಲು 500 ವರ್ಷ ಬೇಕಾಯ್ತು: ಮುತಾಲಿಕ್‌

09:38 PM Dec 06, 2022 | Team Udayavani |

ಕೊಪ್ಪಳ: ದೇಶದಲ್ಲಿ ಒಂದು ಮಂದಿರ ಕಟ್ಟಲು 500 ವರ್ಷ ಬೇಕಾಯಿತು ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.

Advertisement

ಭಾಗ್ಯನಗರದಲ್ಲಿ ರಾಮಮಂದಿರಕ್ಕೆ ಭೇಟಿ ನೀಡಿ, ಬಾಬರಿ ಮಸೀದಿ ಧ್ವಂಸ ಮಾಡಿದ ದಿನದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ್‌ ಪರಿನಿರ್ವಾಣ ದಿನದ ನಿಮಿತ್ತ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬಾಬರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ಶೌರ್ಯದಿನ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ 3000 ಅನಧಿಕೃತ ಚರ್ಚ್‌ಗಳಿವೆ.

ಅವುಗಳನ್ನು ತೆರವುಗೊಳಿಸಬೇಕು. ಬಿಜೆಪಿಯವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದರೂ ಮತಾಂತರ ನಿಂತಿಲ್ಲ. ಕೇವಲ ಕಾನೂನು ಮಾಡಿದರೆ ಸಾಲದು. ಅದನ್ನು ಸಮರ್ಪಕ ಜಾರಿ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದ ಎರಡು ರಾಜ್ಯಗಳ ರಾಜಕೀಯಕ್ಕೆ ಬಳಕೆಯಾಗುತ್ತಿದೆ.

ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮಹಾರಾಷ್ಟ್ರದಲ್ಲಿ ಸಹೋದರತ್ವದಿಂದ ಇದ್ದಾರೆ. ಆದರೆ ಕರ್ನಾಟಕದ ಬಿಜೆಪಿ, ಮಹಾರಾಷ್ಟ್ರ ಬಿಜೆಪಿಯವರು ರಾಜಕೀಯ ಮಾಡುತ್ತಿರುವುದಕ್ಕೆ ಧಿಕ್ಕಾರವಿದೆ ಎಂದರು.

ರಾಜ್ಯದಲ್ಲಿ ಮೊದಲು ಕನ್ನಡ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಕ್ರೈಸ್ತ ಕಾನ್ವೆಂಟ್‌ಗೆ ಮಕ್ಕಳನ್ನು ಕಳುಹಿಸುವುದನ್ನು ಬಿಡಬೇಕು. 500 ವರ್ಷಗಳಿಂದ ಕಟ್ಟಿದ ಬಾಬರಿ ಮಸೀದಿ ಧ್ವಂಸ ಮಾಡಿದೆ. ಅಲ್ಲಿ ನಮ್ಮ ಕೆಲಸ ಮುಗಿಯಿತು ಎಂದು ಹಿಂದೂಗಳು ಕೈ ಬಿಟ್ಟಿದ್ದಾರೆ. ನಾವು ಒಗ್ಗಟ್ಟಿನಿಂದ ಇರಬೇಕು. ಹಲಾಲ್‌ ಕಟ್‌ಗಾಗಿ ತೆಗೆದುಕೊಂಡ ಹಣ ಹಿಂದುಗಳ ವಿರುದ್ಧ ಬಳಕೆಯಾಗುತ್ತಿದೆ.

Advertisement

ಹಲಾಲ್‌ ಕಟ್‌ ಹಣ ದೇಶದ್ರೋಹಕ್ಕೆ ಬಳಕೆಯಾಗುತ್ತಿದೆ. ಅದಕ್ಕಾಗಿ ಕಾಟಿಕ್‌ ಸಮಾಜದವರು ತಾವೇ ಅಂಗಡಿಗಳ ಆರಂಭಿಸಿ ಜಟಕಾ ಕಟ್‌ ಮಾಡಬೇಕು. ಜ್ಞಾನವ್ಯಾಪಿ ಮಸೀದಿ ಸೇರಿ ಹಲವು ಕಡೆ ಹಿಂದು ದೇವಾಲಯಗಳನ್ನು ಅತಿಕ್ರಮಿಸಲಾಗಿದೆ. ಇಲ್ಲಿಯ ಮುಸ್ಲಿಂ ತಾವು ಭಾರತೀಯರು ಅದಕ್ಕಾಗಿ ಸ್ವಇಚ್ಛೆಯಿಂದ ದೇವಸ್ಥಾನಕ್ಕೆ ಬಿಡಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next