ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಚೆಲುವರಾಯಸ್ವಾಮಿ ಅವರ ಆಪ್ತರ ಮನೆ ಮೇಳೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಭಾನುವಾರ ಮುಂಜಾನೆ 4.30ರ ವೇಳೆಗೆ 6 ಕಾರುಗಳಲ್ಲಿ ಬೆಂಗಳೂರು ಹಾಗೂ ಮೈಸೂರಿನಿಂದ ಬಂದ 30ಕ್ಕೂ ಹೆಚ್ಚು ಅಧಿಕಾರಿಗಳ ತಂಡ ತಡರಾತ್ರಿ ತಾಲೂಕಿನ ಸುಖಧರೆ ಗ್ರಾಮದ ಚಲುವರಾಯಸ್ವಾಮಿ ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಮುಂಬೈನಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿರುವ ಲಕ್ಷಿ$¾àನಾರಾಯಣ್‌ಗೌಡ, ಬೆಟ್ಟೇಗೌಡ, ನಾರಾಯಣಗೌಡ, ಗ್ರಾಪಂ ಮಾಜಿ ಉಪಾಧ್ಯಕ್ಷ ಧನಂಜಯ ಅವರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚುನಾವಣೆಗಾಗಿ ಅಕ್ರಮ ದಾಸ್ತಾನು ಮಾಡಿದ್ದ ಆರೋಪದ ಮೇರೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ 30 ಸಾವಿರ ರೂ. ನಗದು ಹಣ ಮತ್ತು ಬೆಳ್ಳಿ ಪದಾರ್ಥಗಳು ಸಿಕ್ಕಿವೆ. ಕೆಲ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ನಗದು ಹಣ ವಾಪಸ್ ಕೊಟ್ಟು ತೆರಳಿದ್ದಾರೆಂದು ತಿಳಿದುಬಂದಿದೆ.
ವಿರೋಧಿಗಳ ಷಡ್ಯಂತ್ರ ಆರೋಪ:
ಚೆಲುವರಾಯಸ್ವಾಮಿ ಪರ ಕೆಲಸ ಮಾಡುತ್ತಿದ್ದೇನೆಂಬ ಕಾರಣಕ್ಕೆ ವಿರೋಧ ಪಕ್ಷದವರು ಷಡ್ಯಂತ್ರ ನಡೆಸಿ ಐಟಿ ದಾಳಿ ಮಾಡಿಸಿದ್ದಾರೆ. ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ತಾವು ಯಾವುದೇ ರೀತಿಯ ಅಕ್ರಮ ಆಸ್ತಿ, ನಗದು ಹಣ ಹೊಂದಿಲ್ಲ. ಹೀಗಾಗಿ ಇಂತಹ ದಾಳಿಗೆ ತಾನು ಹೆದರುವುದಿಲ್ಲ ಎಂದು ಉದ್ಯಮಿ ಲಕ್ಷಿ$¾àನಾರಾಯಣ್ ಪ್ರತಿಕ್ರಿಯಿಸಿದ್ದಾರೆ.