Advertisement
ಹವಾಮಾನ ತಜ್ಞರ ಪ್ರಕಾರ ಈಗಾಗಲೇ ಸೃಷ್ಟಿಯಾದ “ಅಸಾನಿ’ ಚಂಡಮಾರುತ ಸದ್ಯ ಕ್ಷೀಣಿಸುತ್ತಿದ್ದು, ಬಳಿಕ ವಾತಾವರಣದಲ್ಲಿ ಗರಿಷ್ಠ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ವಾತಾ ವರಣದ ಒತ್ತಡಕಡಿಮೆಯಾಗಿ ಹಿಂದೂಮಹಾಸಾಗರದಲ್ಲಿ ಒತ್ತಡ ಹೆಚ್ಚಾಗಲಿದೆ. ಗಾಳಿಯ ವೇಗದಿಂದಾಗಿ ಮುಂಗಾರು ಮಾರುತ ವೇಗವಾಗಿ ಕರಾವಳಿ ಭಾಗಕ್ಕೆ ಪ್ರವೇಶ ಪಡೆಯುವ ನಿರೀಕ್ಷೆ ಇದೆ. ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿದರೆ ಮುಂದೆ ಆಗಮಿಸುವ ಮುಂಗಾರು ಮಾರುತದ ಪ್ರಭಾವ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಆದರೆ ಈ ಬಾರಿ ಮುಂಗಾರು ಆಗಮನದ ವೇಳೆ ಚಂಡಮಾರುತವೂ ಪ್ರಭಾವ ಬೀರುವ ಸಾಧ್ಯತೆ ಇದ್ದು, ಮುಂಗಾರು ವಾಡಿಕೆಯಂತೆ ಪ್ರವೇಶ ಪಡೆದು ಬಿರುಸು ಪಡೆಯುವ ನಿರೀಕ್ಷೆ ಇದೆ.
Related Articles
ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಇದ್ದ ಉರಿ ಸೆಕೆ ತುಸು ಕಡಿಮೆಯಾಗಿದ್ದು, ಚಂಡಮಾರುತದ ಪರಿಣಾಮ ಕ್ಷೀಣಿಸಿದ ಬಳಿಕ ಗರಿಷ್ಠ ಉಷ್ಣಾಂಶ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಸದ್ಯ ಗರಿಷ್ಠ ಉಷ್ಣಾಂಶ ಮಧ್ಯಾಹ್ನ ವೇಳೆ ಸುಮಾರು 35 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಮಂಗಳೂರಿನಲ್ಲಿ 37.5 ಡಿ.ಸೆ. ಈವರೆಗೆ ಎಪ್ರಿಲ್‌ನಲ್ಲಿ ದಾಖಲಾದ ದಾಖಲೆಯ ಸರಾಸರಿ ಗರಿಷ್ಠ ತಾಪಮಾನ 2019ರ ಎಪ್ರಿಲ್‌ನಲ್ಲಿ 36.9 ಡಿ.ಸೆ., 2020ರಲ್ಲಿ 37.5 ಡಿ.ಸೆ., 2021ರಲ್ಲಿ 36.4 ಡಿ.ಸೆ. ದಾಖಲೆಯ ತಾಪಮಾನ ದಾಖಲಾಗಿತ್ತು.
Advertisement
“ಅಸಾನಿ’ ಚಂಡಮಾರುತ ಕ್ಷೀಣಿಸುತ್ತಿದೆ. ಮುಂಬರುವ ದಿನಗಳಲ್ಲಿ ಗರಿಷ್ಠ ಉಷ್ಣಾಂಶ ಏರಿಕೆ ಸಾಧ್ಯತೆ ಇದೆ. ಇದು ಮುಂಗಾರು ಆಗಮನಕ್ಕೆ ಪೂರಕವಾಗಬಹುದು. ಪ್ರಾಥಮಿಕ ಹಂತದ ಮಾಹಿತಿಯಂತೆ ಜೂನ್ ಮೊದಲ ವಾರದಲ್ಲಿ ಮುಂಗಾರು ಮಾರುತ ಅಪ್ಪಳಿಸಿ, ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ.– ಡಾ| ರಾಜೇಗೌಡ,
ಕೃಷಿ ವಿ.ವಿ. ಹವಾಮಾನ ವಿಜ್ಞಾನಿ – ನವೀನ್ ಭಟ್ ಇಳಂತಿಲ