Advertisement

ತಾಪಮಾನ ಹೆಚ್ಚಳ: ದಕ್ಷಿಣ ಅಂಟಾರ್ಟಿಕಾದಲ್ಲಿ ಸಾಕ್ಷಿ!

08:07 PM May 01, 2022 | Team Udayavani |

ನವದೆಹಲಿ: ಜಾಗತಿಕ ತಾಪಮಾನದಿಂದಾಗಿ ಭೂಮಿಯ ತುತ್ತತುದಿಗಳಲ್ಲೊಂದಾದ ದಕ್ಷಿಣ ಅಂಟಾರ್ಟಿಕಾದಲ್ಲಿ ಗಂಟೆಗಟ್ಟಲೆ ಮಳೆ ಸುರಿಯಲಾರಂಭಿಸಿದೆ.

Advertisement

ಹೀಗೆಂದು ನವದೆಹಲಿಯ ಸಂಶೋಧಕ ರೋಜಿಟಾ ಸಿಂಗ್‌ ಹೇಳಿದ್ದಾರೆ. ಅವರು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಯೋಜನೆಗಳ (ಯುಎನ್‌ಡಿಪಿ) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆ್ಯಕ್ಸೆಲೆರೇಟರ್‌ ಲ್ಯಾಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಂಟಾರ್ಟಿಕಾದಲ್ಲಿ ಆಗಾಗ ಮಳೆ ಸುರಿಯುವುದು ಸಾಮಾನ್ಯವಾದರೂ ಅದು ಮಂಜಿನ ರೂಪದಲ್ಲಿ ಸುರಿಯುತ್ತದೆ. ಆದರೆ, ಇತ್ತೀಚೆಗೆ ಸಂಶೋಧಕರ ತಂಡದೊಂದಿಗೆ ಅಲ್ಲಿಗೆ ಭೇಟಿ ನೀಡಿದ್ದಾಗ ಅಲ್ಲಿ ನೀರಿನ ಹನಿಗಳ ಮಳೆ ಸುರಿದಿದೆ. ಇದಕ್ಕೆ, ಭೂಮಿಯ ತಾಪಮಾನ ಹೆಚ್ಚಾಗುತ್ತಿರುವುದೇ ಕಾರಣ.

ತಾಪಮಾನ ಹೆಚ್ಚಾಗಿರುವುದರಿಂದ ಮಳೆ ಹನಿಗಳು ಘನೀಕೃತಗೊಂಡು ಮಂಜಿನ ರೂಪದಲ್ಲಿ ಬೀಳದೇ ನೀರಿನ ರೂಪದಲ್ಲೇ ಅಂಟಾರ್ಟಿಕಾದಲ್ಲಿ ಧರೆಗಿಳಿಯುತ್ತದೆ ಎಂದರೆ ಅದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next