Advertisement

ಐಟಿ ದಾಳಿ; ಸಿಎಂ ಸಂಬಂಧಿಯ 2 ಬ್ಯಾಂಕ್ ಲಾಕರ್ ನಲ್ಲಿ 6 ಕೋಟಿ ಹಣ ಪತ್ತೆ!

09:00 AM Apr 06, 2019 | Team Udayavani |

ಬೆಂಗಳೂರು:ಕಳೆದ ಮಾರ್ಚ್ 28ರಂದು ಆದಾಯ ತೆರಿಗೆ ಇಲಾಖೆ ದಾಳಿಗೊಳಗಾಗಿದ್ದ ಸಿಎಂ ಕುಮಾರಸ್ವಾಮಿ ಅವರ ಸಂಬಂಧಿ, ಉದ್ಯಮಿ ಡಿಟಿ ಪರಮೇಶ್ವರ್ ಅವರ ಎರಡು ಲಾಕರ್ ಗಳಲ್ಲಿ ಬರೋಬ್ಬರಿ ಆರು ಕೋಟಿ ರೂಪಾಯಿ ಹಣ ಪತ್ತೆಯಾಗಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಹಾಲಿ ಸಿಎಂ ಕುಮಾರಸ್ವಾಮಿ ಅವರ ಸಂಬಂಧಿಯಾಗಿರುವ, ಶಿವಮೊಗ್ಗದ ಉದ್ಯಮಿ ಡಿಟಿ ಪರಮೇಶ್ ನಿವಾಸದ ಮೇಲೆ ಐಟಿ ಅಧಿಕಾರಿಗಳು ಕಳೆದ ತಿಂಗಳು ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲದೇ ಈ ಸಂದರ್ಭದಲ್ಲಿ ಬ್ಯಾಂಕ್ ಗಳಲ್ಲಿ ಲಾಕರ್ ಇದ್ದಿರುವುದು ತನಿಖೆ ವೇಳೆ ಬಹಿರಂಗವಾಗಿತ್ತು.

ಈ ಹಿನ್ನೆಲೆಯಲ್ಲಿ ಲಾಕರ್ ತೆಗೆಯಲು ಕೀ ಬೇಕೆಂದು ಅಧಿಕಾರಿಗಳು ಕೇಳಿದ್ದಾಗ ಅದು ಕಳೆದು ಹೋಗಿರುವುದಾಗಿ ಪರಮೇಶ್ ಹೇಳಿದ್ದು, ತದನಂತರ ಐಟಿ ಅಧಿಕಾರಿಗಳು ಲಾಕರ್ ಒಪನ್ ಮಾಡಿಸಿದಾಗ ಆರು ಕೋಟಿ ರೂಪಾಯಿ ಹಣ ಪತ್ತೆಯಾಗಿದೆ.

ಹಾಸನ, ಮಂಡ್ಯ, ಮೈಸೂರುಗಳಲ್ಲಿ ಜೆಡಿಎಸ್ ಮುಖಂಡರು, ಗುತ್ತಿಗೆದಾರರು, ಇಂಜಿನಿಯರ್ಸ್ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸುಮಾರು 10 ಕೋಟಿ ರೂ.ಗೂ ಅಧಿಕ ಹಣ ಪತ್ತೆಯಾಗಿದಂತಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಖಾಸಗಿ ಚಾನೆಲ್ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next