Advertisement

ಖ್ಯಾತ ಯೂಟ್ಯೂಬರ್‌ಗಳ ನಿವಾಸದ ಮೇಲೆ ಐಟಿ ದಾಳಿ

09:28 PM Jun 23, 2023 | Team Udayavani |

ತಿರುವನಂತಪುರಂ: ಈ ವರೆಗೆ ಸಿನಿಮಾ ನಟ- ನಟಿಯರ ಮನೆಗಳ ಮೇಲೆ ಐಟಿ ದಾಳಿ ಆಗುತ್ತಿದ್ದದನ್ನು ನೋಡುತ್ತಿದ್ದೆವು. ಆದರೀಗ ಖ್ಯಾತ ಯೂಟ್ಯೂಬರ್‌ಗಳ ಮೇಲೂ ತೆರಿಗೆ ವಂಚನೆಯ ಗುಮಾನಿ ಮೂಡಿದೆ. ಈ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಕೇರಳದ ಆದಾಯ ತೆರಿಗೆ ಇಲಾಖೆಯು ನಟಿ ಪರ್ಲೆ ಮಾಣಿ ಸೇರಿದಂತೆ 10ಕ್ಕೂ ಅಧಿಕ ಖ್ಯಾತ ಯೂಟ್ಯೂಬರ್‌ಗಳ ಮನೆಗಳ ಮೇಲೆ ದಾಳಿ ನಡೆಸಿದೆ.

Advertisement

ಕೆಲ ಪ್ರಖ್ಯಾತ ಯೂಟ್ಯೂಬರ್‌ಗಳ ಕಾರ್ಯಚಟುವಟಿಕೆ, ಆದಾಯವನ್ನು ಗಮನಿಸಲಾಗಿತ್ತು. ಇತ್ತೀಚೆಗಿನ ದಿನಗಳಲ್ಲಿ ಅವರು ಕೊಂಡುಕೊಳ್ಳುತ್ತಿರುವ ಜಮೀನು, ಮನೆಗಳ ಬಗ್ಗೆ ಐಟಿ ಅಧಿಕಾರಿಗಳು ನಿಗಾ ವಹಿಸಿದ್ದರು. ಜತೆಗೆ ಈ ಯೂಟ್ಯೂಬರ್‌ಗಳ ಪೈಕಿ ಕೆಲವರು ಕೋಟಿಗಟ್ಟಲೆ ಆದಾಯ ಹೊಂದಿದ್ದು, ವಿದೇಶ ಪ್ರವಾಸವನ್ನೂ ನಡೆಸುತ್ತಿದ್ದುದ್ದನ್ನೂ ಗಮನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next