ಬೆಂಗಳೂರು: ಆದಾಯ ತೆರಿಗೆ ಬಾಕಿ, ಆದಾಯ ಮರೆಮಾಚಿರುವ ಆರೋಪದ ಮೇಲೆ ಐಟಿ ಅಧಿಕಾರಿಗಳು ಎಂಬೆಸ್ಸಿ ಕಚೇರಿಗಳ ಮೇಲೆ ರಾಜ್ಯಾದ್ಯಂತ ಏಕಕಾಲದಲ್ಲಿ 50 ಕ್ಕೂ ಹೆಚ್ಚು ಕಡೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ಎಂಬೆಸ್ಸಿ ಗ್ರೂಪ್ ನ ಎಂ ಡಿ ಜಿತು ವಿರ್ವಾನಿ, ನಿರ್ದೇಶಕ ನರಪತ್ ಸಿಂಗ್ ಚರೋರಿಯಾ ಅವರ ಮನೆಗಳು ಹಾಗೂ ಪ್ಲಾಟ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ರಾಜ್ಯಾದ್ಯಂತ ಇರುವ ಎಂಬೆಸ್ಸಿ ಕಚೇರಿಗಳ ಮೇಲೂ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗೆ ಇ.ಡಿ. ಸಮನ್ಸ್ ಜಾರಿ, ಕಾಂಗ್ರೆಸ್ ಆಕ್ರೋಶ
ಐಟಿ ರಿಟರ್ನ್ಸ್ ಸಲ್ಲಿಕೆಗಿಂತ ಹೆಚ್ಚಿನ ಆದಾಯ ಹೊಂದಿರುವುದನ್ನು ಪತ್ತೆ ಮಾಡಿ, ಮನೆಗಳ ಮೇಲೆ ಸರ್ಚ್ ವಾರೆಂಟ್ ತಂದು ಈ ರೇಡ್ ನಡೆಸಲಾಗಿದ್ದು, ಸುಮಾರು 600 ಕ್ಕೂ ಹೆಚ್ಚು ಅಧಿಕಾರಿಗಳ ತಂಡಗಳು ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದೆ.
ಗೋವಾ – ಕರ್ನಾಟಕ ಅಧಿಕಾರಿಗಳ ತಂಡದಿಂದ ಏಕಕಾಲಕ್ಕೆ ದಾಳಿ ಮಾಡಿ, ಲೆಕ್ಕಪತ್ರಗಳ ಶೋಧನೆ ನಡೆಸುತ್ತಿದ್ದಾರೆ.