Advertisement

Karkala: ಜಲ್ಲಿ ಕ್ರಷರ್‌, ಫ್ಲ್ಯಾಟ್ ಮೇಲೆ ಐಟಿ ದಾಳಿ

12:15 AM Jan 03, 2024 | Team Udayavani |

ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಗುಂಡ್ಯಡ್ಕ ಬಳಿ ಕಾರ್ಯನಿರ್ವಹಿಸುವ ಜಲ್ಲಿ ಕ್ರಷರ್‌ ಮತ್ತು ಕಾರ್ಕಳದ ಸ್ಟೇಟ್‌ ಬ್ಯಾಂಕ್‌ ಸಮೀಪದಲ್ಲಿರುವ ಕ್ರಷರ್‌ನ ಮಾಲಕರಿಗೆ ಸೇರಿದ ಫ್ಲ್ಯಾಟ್ , ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

Advertisement

ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದಾರೆ ಹಾಗೂ ಕ್ರಷರ್‌ನ ಸಿಬಂದಿ ದಿನೇಶ್‌ ಶೆಟ್ಟಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಗುತ್ತಿಗೆದಾರ ಸುಜಯ ಶೆಟ್ಟಿ ಅವರ ಮನೆ ಮೇಲೂ ದಾಳಿ ನಡೆದಿದೆ. ಅಕ್ರಮ ಗಣಿಗಾರಿಕೆ, ತೆರಿಗೆ ವಂಚನೆ ವಿಚಾರವಾಗಿ ಇದ್ದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಿಂದ 3 ತಂಡಗಳಲ್ಲಿ ಅಧಿಕಾರಿಗಳು ಆಗಮಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next