Advertisement
ಕೇಂದ್ರ ಸರ್ಕಾರ ಚುನಾವಣೆ ಸಂದರ್ಭದಲ್ಲಿಯೇ ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಟ್ಟು ದಾಳಿ ಮಾಡುತ್ತಿದ್ದು, ಲೋಕಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸೇರಿ ಎರಡೂ ಪಕ್ಷಗಳ ನಾಯಕರೂ ಕೇಂದ್ರದ ವಿರುದಟಛಿ ಹರಿಹಾಯ್ದರು.
ಸಂವಿಧಾನದ ಕಗ್ಗೊಲೆ ಎಂದರು.
Related Articles
ಇಲ್ಲದಿದ್ದರೆ, ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
Advertisement
ಐಟಿ ಮುಖ್ಯಸ್ಥರು ಬಿಜೆಪಿ ಏಜೆಂಟ್
ರಾಜ್ಯದ ಆದಾಯ ತೆರಿಗೆ ಇಲಾಖೆ ಮುಖ್ಯಸ್ಥರು ಬಿಜೆಪಿಯ ಏಜೆಂಟ್ ರೀತಿಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನಿವೃತ್ತಿಯ ನಂತರ ರಾಜ್ಯಪಾಲರನ್ನಾಗಿ
ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿಪ್ರತಿಪಕ್ಷ ಗಳ ನಾಯಕರ ಮನೆಗಳ ಮೇಲೆ
ದಾಳಿ ನಡೆಸುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದರು.
ಐಟಿ ದಾಳಿ ವಿರೋಧಿಸಿ ನಡೆದ ಪ್ರತಿ ಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ
ಅವರು, ರಾಜಕೀಯ ಪ್ರೇರಿತ ಐಟಿ ದಾಳಿಯಿಂದ ಕಾಂಗ್ರೆಸ್ ಜೆಡಿಎಸ್
ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡಿದೆ. ಸಂವಿಧಾನ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಪ್ರಧಾನಿ ಮೋದಿ ಹೊರಟಿದ್ದಾರೆ ಎಂದರು. ಗುರುವಾರ ನಡೆಯುವ ಐಟಿ ದಾಳಿಯ ಬಗ್ಗೆ ಬುಧವಾರವೇ ಹೇಳಿದ್ದೆ. ಬಿಜೆಪಿ
ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಂಬೈನಲ್ಲಿ ಎಷ್ಟು ಫ್ಲಾಟ್
ಖರೀದಿ ಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಅವರು ಅಕ್ರಮವಾಗಿ ಸಂಪಾದನೆ
ಮಾಡಿರುವ ದಾಖಲೆಗಳು ನನ್ನ ಬಳಿ ಇವೆ ಎಂದು ಕರ್ನಾಟಕ ಹಾಗೂ ಗೋವಾ
ಆದಾಯ ತೆರಿಗೆ ಇಲಾಖೆ ಮುಖ್ಯ ಆಯುಕ್ತ ಬಾಲಕೃಷ್ಣನ್ ಅವರ ವಿರುದ್ಧ
ವಾಗ್ಧಾಳಿ ನಡೆಸಿದರು. ಬಿಜೆಪಿಯವರು ಶಾಸಕರಿಗೆ 20-30 ಕೋಟಿ ರೂ. ನೀಡಿ ಖರೀದಿಗೆ ಮುಂದಾಗಿ
ದ್ದಾಗ ಐಟಿ ಅಧಿಕಾರಿಗಳು ಮಲಗಿದ್ರಾ ? ಬಿಜೆಪಿ ನಾಯಕರ ಮೇಲೆ ಬಂದ ಎಷ್ಟು
ದೂರುಗಳನ್ನು ಆಧರಿಸಿ ದಾಳಿ ನಡೆಸಿದ್ದಾರೆ? ಸ್ಥಳೀಯ ನಾಯಕರಿಗೆ ಅಮಿತ್ ಶಾ ಪಟ್ಟಿ
ಕಳುಹಿಸುತ್ತಾರೆ. ಅದನ್ನು ಐಟಿ ಇಲಾಖೆಗೆ ಕಳುಹಿಸಿ ದಾಳಿ ನಡೆಸುತ್ತಾರೆ. ಬುಧವಾರ
ನಮ್ಮ ಪ್ರತಿಸ್ಪರ್ಧಿ ಐಟಿ ದಾಳಿಯ ಬಗ್ಗೆ ಭಾಷಣ ಮಾಡಿದ್ದರು ಎಂದು ಸುಮಲತಾ
ಅವರ ವಿರುದ್ಧ ಆರೋಪ ಮಾಡಿದರು. ರಾಜ್ಯದ ರಾಜಕೀಯ ಕರಾಳದಿನ: ಡಿಸಿಎಂ ಪರಮೇಶ್ವರ್
ರಾಜ್ಯದಲ್ಲಿ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ಮಾಡಿರುವುದು ರಾಜ್ಯ ರಾಜಕೀಯದಲ್ಲಿ ಕರಾಳ ದಿನ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಐದು ವರ್ಷದಿಂದ ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಂದಿಕೊಂಡು ಆಡಳಿತ ನಡೆಸಬೇಕು. ನರೇಂದ್ರ ಮೋದಿ ರಾಜ್ಯಗಳ ಅಭಿವೃದಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ. ಕಳೆದ 72 ವರ್ಷಗಳಲ್ಲಿ ಒಕ್ಕೂಟ ವ್ಯವಸ್ಥೆ
ಸರಿಯಾಗಿ ನಡೆದುಕೊಂಡು ಬಂದಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಐಟಿ, ಸಿಬಿಐ, ಇಡಿಗಳನ್ನು ರಾಜಕೀಯ ಅಸ್ತ್ರ ಉವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಒಗ್ಗಟ್ಟಿನ ಪ್ರತಿಭಟನೆ ಮೊದಲು ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರು. ನಂತರ ಎರಡೂ ಪಕ್ಷಗಳ ನಾಯಕರು ಒಗ್ಗಟ್ಟಿನಿಂದ ವಿರೋಧಿಸಿದರೆ, ದೇಶಕ್ಕೂ ಸಂದೇಶ ರವಾನೆಯಾಗುತ್ತದೆ ಎಂದು ತೀರ್ಮಾನಿಸಿ ಆದಾಯ ತೆರಿಗೆ ಇಲಾಖೆಯ ಕಚೇರಿ ಎದುರು ಪ್ರತಿಭಟನೆಗೆ
ನಿರ್ಧರಿಸಿದರು.