Advertisement

ನಾಗಮಂಗಲ: ಚಲುವರಾಯಸ್ವಾಮಿ ಆಪ್ತ ಉದ್ಯಮಿ ಮನೆ- ಕಚೇರಿ ಮೇಲೆ ಐಟಿ ದಾಳಿ

10:37 AM Feb 23, 2022 | Team Udayavani |

ಮಂಡ್ಯ: ನಾಗಮಂಗಲ ಪಟ್ಟಣದಲ್ಲಿರುವ ಸ್ಟಾರ್ ಗ್ರೂಪ್ ಮಾಲೀಕ ಹಾಗೂ ಮಾಜಿ ಸಚಿವ ಚಲುವರಾಯಸ್ವಾಮಿ ಆಪ್ತ ಅಮಾನುಲ್ಲಾ ಮುರ್ತುಜಾ ಅವರ ಮನೆ ಹಾಗೂ ಕಚೇರಿಗಳ ಮೇಲೆ ಬುಧವಾರ ಬೆಳ್ಳಂಬೆಳಿಗ್ಗೆ ಏಕ ಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.

Advertisement

ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್, ಮಂಡ್ಯ ರಸ್ತೆಯಲ್ಲಿರುವ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಸಮಾಜಕ್ಕೆ ಬೇಕಿರುವುದು ಧರ್ಮದ ಶಾಂತಿ ಸಂದೇಶವೇ ಹೊರತು ಕೊಚ್ಚು,ಕೊಲ್ಲು ಸಂಸ್ಕಾರವಲ್ಲ: ದಿನೇಶ್

ಸ್ಟಾರ್ ಹ್ಯಾಚರೀಸ್ ಗ್ರೂಪ್ ಮಾಲೀಕರಾಗಿರುವ ಅಮಾನುಲ್ಲಾ ಮುರ್ತುಜಾ ಮನೆ ಹಾಗೂ ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ 20 ವಾಹನಗಳಲ್ಲಿ ಆಗಮಿಸಿ 10ಕ್ಕೂ ಹೆಚ್ಚು ಕಡೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.

ಅಮಾನುಲ್ಲಾ ಮುರ್ತುಜಾ ನಾಗಮಂಗಲದಲ್ಲಿ ಕೋಳಿ ಸಾಕಾಣಿಕೆ, ಕೋಳಿ ಮೊಟ್ಟೆ, ಕೋಳಿ ಆಹಾರ ತಯಾರಿಕೆ ಘಟಕ ಹಾಗೂ ಹೋಲ್ ಸೇಲ್ ಮಾರಾಟಗಾರರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next