Advertisement

ಉಡುಪಿಯ ಯುವ ಜನತೆಯ ಉದ್ಯೋಗ ಸೃಷ್ಟಿಗೆ ಐ ಟಿ ಪಾರ್ಕ್‌ ಪ್ರಥಮ ಆದ್ಯತೆ : ಯಶ್‌ಪಾಲ್‌ 

12:47 PM May 01, 2023 | Team Udayavani |

ಉಡುಪಿ : ವಿದ್ಯಾವಂತರ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಉಡುಪಿಯ ಯುವ ಜನತೆಗೆ ಸ್ಥಳೀಯವಾಗಿಯೇ ಉದ್ಯೋಗಾವಕಾಶ ಸೃಷ್ಟಿಗೆ ಪ್ರಥಮ ಆದ್ಯತೆ ನೀಡುವುದಾಗಿ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಹೇಳಿದರು.
ಮಣಿಪಾಲ ಇಂಡಸ್ಟಿÅಯಲ್‌ ಏರಿಯಾದಲ್ಲಿ ವಿವಿಧ ಘಟಕಗಳಿಗೆ ಭೇಟಿ ನೀಡಿ ಸಿಬಂದಿಗಳಲ್ಲಿ ಮತ ಯಾಚನೆ ಮಾಡಿ ಮಾತನಾಡಿದರು.

Advertisement

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಿಂದ ಉಡುಪಿಯಲ್ಲಿ ಐ ಟಿ ಪಾರ್ಕ್‌ ಸ್ಥಾಪನೆಗೆ ವಿಶೇಷ ಕಾರ್ಯ ಯೋಜನೆ ರೂಪಿಸಿದ್ದು ಈ ಮೂಲಕ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯ ಐ ಟಿ ಹಬ್‌ ಆಗಿ ರೂಪಿಸಲಿದ್ದೇವೆ ಎಂದರು.

ಶಿಕ್ಷಣ, ವೈದ್ಯಕೀಯ ಹಾಗೂ ಕೈಗಾರಿಕಾ ವಲಯ, ರಿಯಲ್‌ ಎಸ್ಟೇಟ್‌ ಮತ್ತು ಕರಾವಳಿಯ ಆರ್ಥಿಕತೆಯಲ್ಲಿ ಬಹು ದೊಡ್ಡ ಪಾತ್ರವಹಿಸುವ ಮೀನುಗಾರಿಕೆಯ ಅಭಿವೃದ್ಧಿಗಾಗಿ ಪ್ರತ್ಯೇಕ ಮೀನುಗಾರಿಕಾ ಕೈಗಾರಿಕಾ ವಲಯ ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಬದ್ದವಾಗಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 100 ಕ್ಕೂ ಮಿಕ್ಕಿ ಐಟಿ ಕ್ಷೇತ್ರದ ಸ್ಟಾರ್ಟ್‌ ಅಪ್‌ ಕಂಪೆನಿಗಳು ಕಾರ್ಯಾಚರಿಸುತ್ತಿದ್ದು ಮುಂದಿನ ದಿನಗಳಲ್ಲಿ ಯುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಜತೆ ಜತೆಗೆ ಪ್ರವಾಸೋದ್ಯಮದ ಮೂಲಕ ಸ್ವ ಉದ್ಯೋಗದ ಕಲ್ಪನೆಗೂ ಶಕ್ತಿ ತುಂಬಲು ಡಬಲ್‌ ಇಂಜಿನ್‌ ಸರ್ಕಾರದ ಮೂಲಕ ಯೋಜನೆ ರೂಪಿಸಲಾಗುವುದು ಎಂದರು.

ಶಾಸಕ ರಘುಪತಿ ಭಟ್‌ ಅವರು ಮಾತನಾಡಿ, ಉಡುಪಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ಗರಿಷ್ಠ ಮಟ್ಟದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ಬಿಜೆಪಿ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಅವರನ್ನು ಗೆಲ್ಲಿಸುವ ಮೂಲಕ ಶಕ್ತಿ ತುಂಬಲು ಮನವಿ ಮಾಡಿದರು.

Advertisement

ಈ ಸಂದರ್ಭದಲ್ಲಿ ನಗರ ಸಭಾ ಸದಸ್ಯೆ ಕಲ್ಪನಾ ಸುಧಾಮ, ಉಡುಪಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿನೇಶ್‌ ಅಮೀನ್‌, ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಚಿನ್‌ ಪೂಜಾರಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಜಿಲ್ಲೆಯ ಸಹಕಾರಿಗಳ ಪ್ರತಿನಿಧಿಯಾಗಲಿ
ಕರಾವಳಿ ಜಿಲ್ಲೆಗಳ ಆರ್ಥಿಕ ವ್ಯವಸ್ಥೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ ಗಳಿಗೆ ಸರಿ ಸಮನಾಗಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರವಹಿಸಿದೆ. ಅವಿಭಜಿತ ದಕ್ಷಿಣ ಕನ್ನಡದ ಜಿಲ್ಲೆಯ ಮೀನು ಮಾರಾಟ ಫೆಡರೇಷನ್‌ ಮತ್ತು ಮಹಾಲಕ್ಷ್ಮೀ ಕೊ ಆಪರೇಟಿವ್‌ ಬ್ಯಾಂಕ್‌ನ ಅಧ್ಯಕ, ಯಶಸ್ವಿ ಸಹಕಾರ ಮುಖಂಡ ಸಹಕಾರ ರತ್ನ ಯಶ್‌ ಪಾಲ್‌ ಸುವರ್ಣ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ಜಿಲ್ಲೆಯ ಸಹಕಾರಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಜಿಲ್ಲೆಯ ಸಹಕಾರಿಗಳ ಪ್ರತಿನಿಧಿಯಾಗಿ ಸಹಕಾರಿ ಕ್ಷೇತ್ರದ ಸಮಸ್ಯೆ, ಬೇಡಿಕೆಗಳಿಗೆ ವಿಧಾನ ಸಭೆಯಲ್ಲಿ ಧ್ವನಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸವಿದೆ. ಜಿಲ್ಲೆಯ ಸಹಕಾರಿಗಳ ಕನಸಾದ ಸಹಕಾರಿ ಇಲಾಖೆ ಸಂಬಂಧಿಸಿದ ಎಲ್ಲಾ ಕಚೇರಿ ಹಾಗೂ ತರಬೇತಿ ಕೇಂದ್ರವನ್ನೊಳಗೊಂಡ ಜಿಲ್ಲಾಧಿಕಾರಿ ಕಚೇರಿಯ ಮಾದರಿಯಲ್ಲಿ ಮಿನಿ ಸಹಕಾರಿ ಸೌಧ ನಿರ್ಮಾಣ, ಸಹಕಾರ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಸೃಷ್ಟಿ ಹಾಗೂ ಸಹಕಾರಿ ಕ್ಷೇತ್ರದ ಆಧುನೀಕರಣ ಹಾಗೂ ಬಲವರ್ಧನೆಗೆ ಸರ್ಕಾರದ ಯೋಜನೆಗಳ ಅನುಷ್ಟಾನದ ಮೂಲಕ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಭರವಸೆ ಯಶ್‌ಪಾಲ್‌ ಸುವರ್ಣ ಅವರ ಮೇಲಿದೆ.
ಮಂಜುನಾಥ ಎಸ್‌. ಕೆ. ನಿರ್ದೇಶಕರು
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು

ಕೈಗಾರಿಕಾ ವಲಯಕ್ಕೆ ಪ್ರೋತ್ಸಾಹದ ನಿರೀಕ್ಷೆ
ಉಡುಪಿ ಕ್ಷೇತ್ರದಲ್ಲಿ ಕೈಗಾರಿಕೆಗಳ ಮೂಲಕ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಪರಿಸರ ಸ್ನೇಹಿ ಕೈಗಾರಿಕಾ ವಲಯ ನಿರ್ಮಿಸಿ ವಿಶೇಷವಾಗಿ ಐ ಟಿ ಪಾರ್ಕ್‌, ಜವಳಿ ಪಾರ್ಕ್‌ ಹಾಗೂ ಮೀನುಗಾರಿಕೆ ಕ್ಷೇತ್ರದಲ್ಲಿ ಹೂಡಿಕೆಗೆ ಹೆಚ್ಚಿನ ಅವಕಾಶ ಕಲ್ಪಿಸುವ ಬಗ್ಗೆ ಯಶ್‌ಪಾಲ್‌ ಸುವರ್ಣ ಅವರು ವಿಶೇಷ ಮುತುವರ್ಜಿ ವಹಿಸುವ ವಿಶ್ವಾಸವಿದ್ದು, ಯುವ ಉದ್ಯಮಿಗಳ ಮೂಲಕ ಹೊಸ ಉದ್ಯೋಗ ಅವಕಾಶ ಸೃಷ್ಟಿಯಾಗಲಿದೆ.
ಅಂಡಾರ್‌ ದೇವಿಪ್ರಸಾದ್‌ ಶೆಟ್ಟಿ, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next