Advertisement

ಇದು ಕನಕನ ಸ್ಪಷಾಲಿಟಿ

03:45 AM Mar 24, 2017 | |

“ಅವರು ಸಿನಿಮಾನ ತುಂಬಾ ಪ್ರೀತಿಸ್ತಾರೆ. ಶ್ರದ್ಧೆ ಮತ್ತು ಶ್ರಮ ಅವರಲ್ಲಿದೆ …
– ಹೀಗೆ ನಿರ್ದೇಶಕ ಆರ್‌.ಚಂದ್ರು ಅವರನ್ನು ಪ್ರೀತಿಯಿಂದ ಹೊಗಳಿದರು “ದುನಿಯಾ’ ವಿಜಯ್‌.

Advertisement

“ಅವರು ಡಬ್ಬಲ್‌ ಗುಂಡಿಗೆ ಇರುವಂತಹ ವ್ಯಕ್ತಿ. ದೂರದಿಂದ ಬೇರೆ ರೀತಿ ಕಾಣಾ¤ರೆ. ಹತ್ತಿರ ಹೋದರೆ ಅವರಲ್ಲಿ ಹೊಸ ಜಗತ್ತೇ ಕಾಣತ್ತೆ …’
– ಹೀಗೆ ನಟ “ದುನಿಯಾ ವಿಜಯ್‌’ ಅವರನ್ನು ಅಷ್ಟೇ ಪ್ರೀತಿಯಿಂದ ಹೊಗಳಿದರು ಆರ್‌.ಚಂದ್ರು.

ಈ ರೀತಿ ಪರಸ್ಪರ ಹೊಗಳಿಕೆಯ ಮಾತುಗಳಿಗೆ ಸಾಕ್ಷಿಯಾಗಿದ್ದು, “ಕನಕ’ ಚಿತ್ರದ ಪತ್ರಿಕಾಗೋಷ್ಠಿ. ಅದು ಮಿನರ್ವ ಮಿಲ್‌. ಅಲ್ಲಿ ಸ್ಟಂಟ್‌ ಮಾಸ್ಟರ್‌ ಡಿಫ‌ರೆಂಟ್‌ ಡ್ಯಾನಿ ದುನಿಯಾ ವಿಜಯ್‌ಗೆ ಫೈಟ್‌ ಸೀನ್‌ ವಿವರಿಸುತ್ತಿದ್ದರು. ಒಂದು ಸೀನ್‌ ಓಕೆ ಆಗುತ್ತಿದ್ದಂತೆಯೇ ಪತ್ರಕರ್ತರ ಮುಂದೆ “ಕನಕ’ ತಂಡ ಬಂದು ಕುಳಿತುಕೊಂಡಿತು.

ಮೊದಲು ಮಾತು ಶುರುಮಾಡಿದ್ದು “ದುನಿಯಾ’ ವಿಜಯ್‌. “ನಾನು ಈ ಸಿನಿಮಾ ಒಪ್ಪಲು ಮುಖ್ಯ ಕಾರಣ. ಕಥೆ. ಅಣ್ಣಾವ್ರ ಆದರ್ಶಗಳನ್ನು ಇಟ್ಟುಕೊಂಡು ಹೆಣೆದಿರುವ ಕಥೆ. ಎಲ್ಲರೂ ಅಣ್ಣಾವ್ರ ಆದರ್ಶ ಇಟ್ಟುಕೊಂಡು ಬದುಕಬೇಕು ಎಂದು ಹೇಳುವಂತಹ ಪಾತ್ರವದು. ಆಟೋ ಚಾಲಕನೊಬ್ಬ ಅಣ್ಣಾವ್ರ ಆದರ್ಶವನ್ನು ಮೈಗೂಡಿಸಿಕೊಂಡಿರುವಂತಹ ಪಾತ್ರ ಆಗಿದ್ದರಿಂದ ತುಂಬಾ ಖುಷಿಯಿಂದಲೇ ಮಾಡುತ್ತಿದ್ದೇನೆ. ನಿರ್ದೇಶಕ ಚಂದ್ರು ಅವರಿಗೆ ಸಿನಿಮಾ ಮೇಲೆ ಪ್ರೀತಿ ಇದೆ. ಅವರ ಜತೆ ಯಾವಾಗಲೋ ಸಿನಿಮಾ ಮಾಡಬೇಕಿತ್ತು. ಆದರೆ, ಈಗ ಕಾಲ ಕೂಡಿಬಂದಿದೆ. ಇಲ್ಲಿ ಒಳ್ಳೆಯ ಮನಸ್ಸುಗಳು ಸೇರಿವೆ. ಒಳ್ಳೆಯ ಸಿನಿಮಾ ಇದಾಗಲಿದೆ. ಇಡೀ ಸೆಟ್‌ನಲ್ಲಿ ಪಾಸಿಟಿವ್‌ ವೈಬ್ರೇಷನ್‌ ಇದೆ’ ಅಂದರು “ದುನಿಯಾ’ ವಿಜಯ್‌.

ಆ ಬಳಿಕ ನಿರ್ದೇಶಕ ಚಂದ್ರು ಅವರ ಮಾತಿನ ಸರದಿ. “”ಕನಕ’ ಶುರುವಾಗಿ ಏಳು ದಿನಗಳು ಕಳೆದಿವೆ. ವಿಜಯ್‌ ಅವರ ಜತೆ ಕೆಲಸ ಮಾಡುತ್ತಿರೋದು ಒಳ್ಳೆಯ ಅನುಭವ ಕೊಡುತ್ತಿದೆ. ನಾನು ತೆಲುಗಿನ ಸ್ಟಾರ್‌ನಟರು ಮೂರು ಮೂರು ರೋಪ್‌ ಕಟ್ಟಿಕೊಂಡು ಸ್ಟಂಟ್‌ ಮಾಡಿದ್ದನ್ನು ನೋಡಿದ್ದೇನೆ. ಆದರೆ, ವಿಜಯ್‌ ಸರ್‌, ಗಾಳಿಯಲ್ಲಿ ಜಂಪ್‌ ಮಾಡಿ ಹೊಡೆಯುವ ಶಾಟ್‌ಗೆ ಯಾವುದೇ ರೋಪ್‌ ಇಲ್ಲದೆಯೇ ರಿಸ್ಕ್ ತಗೊಂಡು ಮಾಡಿದ್ದಾರೆ. ನಿಜಕ್ಕೂ ಅವರು ಡಬ್ಬಲ್‌ ಗುಂಡಿಗೆ ಇರುವಂತಹ ವ್ಯಕ್ತಿ. ಅವರನ್ನು ದೂರದಿಂದ ನೋಡಿದರೆ ಬೇರೆ ರೀತಿ ಕಾಣುತ್ತಾರೆ. ಹತ್ತಿರಕ್ಕೆ ಹೋದರೆ ಅವರಲ್ಲಿ ಹೊಸ ಜಗತ್ತು ಕಾಣುತ್ತೆ. ಅವರೇನೆಂಬುದು ಅರ್ಥ ಆಗುತ್ತೆ’ ಅಂತ ಸಣ್ಣದ್ದೊಂದು ಕಥೆಯ ಮೊರೆ ಹೋದರು ಚಂದ್ರು.

Advertisement

“ಪ್ರಶಾಂತವಾದ ಜಾಗದಲ್ಲಿ ಕಥೆ ಚರ್ಚೆ ಮಾಡೋಕೆ ಅಂತ ಮುತ್ತತ್ತಿ ಫಾರೆಸ್ಟ್‌ ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದೆವು. ಆಗ ದುನಿಯಾ ವಿಜಯ್‌, ಅಲ್ಲಿದ್ದ ಫಾರೆಸ್ಟ್‌ ಗಾರ್ಡ್‌ನ ಕರೆದು, “ಇಲ್ಲಿ, ಹೆಚ್ಚಾಗಿ ಹುಲಿ, ಚಿರತೆ  ಎಲ್ಲಿ ಓಡಾಡುತ್ತವೆ. ಆ ಜಾಗ ಯಾವುದು’ ಅಂತ ಕೇಳಿದರು. ಆಗ, ಆತ ಒಂದು ಕಾಡಿನ ಮೂಲೆಯತ್ತ ಬೆರಳು ತೋರಿಸಿ, “ಅಲ್ಲಿ ಹೆಚ್ಚು ಚಿರತೆ ಓಡಾಡುತ್ತವೆ. ಆದರೆ, ಅಲ್ಲಿಗೆ ಹೋಗುವಂತಿಲ್ಲ ಅಂತ ಹೇಳಿ ಮಂದೆ ಹೋದ. ಆಗ ವಿಜಿ ಸರ್‌, ಇವತ್ತು ರಾತ್ರಿ ನಾವು ಹುಲಿ, ಚಿರತೆ ಓಡಾಡುವ ಜಾಗದಲ್ಲೇ ಮಲಗ್ತಿàವಿ. ಆ ಜಾಗದಲ್ಲಿದ್ದರೆ ಹೊಸ ಫೀಲ್‌ ಆಗುತ್ತೆ ಅಂದರು. ನನಗೆ ಆಗ ಭಯ ಆಗಿದ್ದು ನಿಜ. ಆದರೂ, ಆಯ್ತು ಅಂತ ಹೇಳಿದೆ. ರಾತ್ರಿ 11 ಕ್ಕೆ ರೆಡಿಯಾದ್ವಿ. ಆಗ ಒಬ್ಬ ಫಾರೆಸ್ಟ್‌ ಗಾರ್ಡ್‌ ಬಂದು, ಸಾರ್‌ ಇವತ್ತು ಅಮವಾಸ್ಯೆ ಅಲ್ಲಿಗೆ ಹೋಗೋದು ಬೇಡ ಅಂತ ಹೇಳಿದ. ಹಾಗಾಗಿ, ಅಲ್ಲಿ ಹೋಗಿ ಮಲಗುವುದು ತಪ್ಪಿತು. ವಿಜಿ ಸರ್‌ಗೆ ಇಂಥಾ ಧೈರ್ಯವೂ ಇದೆ. ಅದಕ್ಕೆ ಹೇಳಿದ್ದು ಅವರೊಂದಿಗೆ ಇದ್ದರೆ ಬೇರೆ ಜಗತ್ತು ಕಾಣುತ್ತೆ ಅಂತ’ ಎಂದು ಹೇಳಿದರು ಚಂದ್ರು.

ಡಿಫ‌ರೆಂಟ್‌ ಡ್ಯಾನಿ ಅವರು “ದುನಿಯಾ’ ಸಿನಿಮಾದಲ್ಲಿ ವಿಜಯ್‌ ಜತೆ ಮಾಡಿದ ಕೆಲಸ ನೆನಪಿಸಿಕೊಂಡರು. “ಉಗ್ರಂ’ ಮಂಜು ಕೂಡ ವಿಜಯ್‌ ಅವರನ್ನು ಹೊಗಳಿದರು. “ಮೊದಲು ನಾನು ಸೆಟ್‌ ವರ್ಕ್‌ ಮಾಡುವಾಗ, ಕೆಲವರು ಹೋಗೋ ಬಾರೋ ಅನ್ನುತ್ತಿದ್ದರು. ಆಗ, ವಿಜಯ್‌ ಅವರು ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುತ್ತಿದ್ದರು. ಅದು ಅವರ ದೊಡ್ಡಗುಣ’ ಅಂದರು “ಉಗ್ರಂ’ ಮಂಜು. ಕ್ಯಾಮೆರಾಮೆನ್‌ ಸತ್ಯ ಹೆಗಡೆ “ಕನಕ’ ಬಗ್ಗೆ ಹೆಚ್ಚೇನೂ ಮಾತಾಡಲಿಲ್ಲ. ಅಷ್ಟೊತ್ತಿಗೆ ಮಾತುಕತೆಗೂ ಬ್ರೇಕ್‌ ಬಿತ್ತು.

Advertisement

Udayavani is now on Telegram. Click here to join our channel and stay updated with the latest news.

Next