Advertisement

ಮದುವೆಯಾದ ಮೇಲೆ ಬಹಳ ಜವಾಬ್ದಾರಿ ಬಂದಿದೆ: ಕೊಹ್ಲಿ

11:25 PM May 27, 2019 | Team Udayavani |

ಮುಂಬಯಿ: ವಿರಾಟ್‌ ಕೊಹ್ಲಿ ಅವಕಾಶ ಸಿಕ್ಕಿದಾಗಲೆಲ್ಲ ಪತ್ನಿಯನ್ನು ಹೊಗಳುವುದು ಮಾಮೂಲಿ. ಅಲ್ಲದೇ ಯಾವುದೇ ಪ್ರಮುಖ ಕ್ರಿಕೆಟ್‌ ಪ್ರವಾಸವಿದ್ದಾಗ ಕೊಹ್ಲಿ, ಪತ್ನಿಯನ್ನು ಜತೆಗೆ ಕರೆದೊಯ್ಯುವುದೂ ಸಹಜ ವಿದ್ಯಮಾನದಂತಾಗಿದೆ. ಇದೀಗ ಇಂಥದೇ ಒಂದು ಮಾಮೂಲಿ ಬೆಳವಣಿಗೆಯಲ್ಲಿ, ಕೊಹ್ಲಿ ತಮ್ಮ ಪತ್ನಿಯನ್ನು ಮತ್ತೆ ಹೊಗಳಿದ್ದಾರೆ.

Advertisement

“ಒಬ್ಬ ವ್ಯಕ್ತಿಯಾಗಿ, ನಾಯಕನಾಗಿ ನಾನು ಅನುಷ್ಕಾಳಿಂದ ಬಹಳ ಕಲಿತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. “ನನ್ನ ಪ್ರಕಾರ ಮದುವೆಯಾದ ಒಬ್ಬ ವ್ಯಕ್ತಿ ಬಹಳ ಜವಾಬ್ದಾರಿಯುತನಾಗಿ ಬದಲಾಗುತ್ತಾನೆ. ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಾನೆ. ನಾನು ಮದುವೆಯಾದ ಮೇಲೆ ಬಹಳ ಬದಲಾಗಿದ್ದೇನೆ. ನನ್ನ ನಾಯಕತ್ವದಲ್ಲೂ ಇದು ಬಹಳ ಪರಿಣಾಮ ಬೀರಿದೆ’ ಎಂದು ಪರೋಕ್ಷವಾಗಿ ಅನುಷ್ಕಾರನ್ನು ಹೊಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next