Advertisement

ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತಿದೆ: ಪ್ರಧಾನಿ ಮೋದಿ

12:56 PM Feb 02, 2022 | Team Udayavani |

ನವದೆಹಲಿ : ಆತ್ಮನಿರ್ಭರ ಅರ್ಥವ್ಯವಸ್ಥೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರನ್ನು ಉದ್ದೇಶಿಸಿ ವರ್ಚುಯಲ್ ಭಾಷಣವನ್ನು ಮಾಡಿ, ಭಾರತದ ಬಗೆಗಿನ ವಿಶ್ವದ ಬದಲಾದ ದೃಷ್ಟಿಕೋನದೊಂದಿಗೆ, ನಮ್ಮ ಆರ್ಥಿಕತೆಯನ್ನು ಬಲಪಡಿಸುವ ಮೂಲಕ ದೇಶವನ್ನು ತ್ವರಿತ ಗತಿಯಲ್ಲಿ ಮುನ್ನಡೆಸುವುದು ನಮಗೆ ಅತ್ಯಗತ್ಯವಾಗಿದೆ ಎಂದರು.

Advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟನ್ನು ಅದರ ವಿಶಾಲತೆಯನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತವಾಗಿ ವಿವರಿಸಿದರು. ಇಂದು ನಾನು ಬಜೆಟ್‌ನ ಪ್ರಮುಖ ಅಂಶಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತೇನೆ ಎಂದರು.

ಸಾವಯವ ಕೃಷಿಯತ್ತ ಗಮನಹರಿಸಿ ಭಾರತೀಯ ಕೃಷಿಯನ್ನು ಆಧುನೀಕರಿಸುವ ಬಗ್ಗೆಯೂ ಬಜೆಟ್ ಗಮನಹರಿಸಿದೆ. ಇದರಿಂದ ಕೃಷಿ ಲಾಭದಾಯಕವಾಗಲಿದೆ. ಕಿಸಾನ್ ಡ್ರೋನ್‌ಗಳು ಮತ್ತು ಇತರ ಯಂತ್ರೋಪಕರಣಗಳು ರೈತರಿಗೆ ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗಲಿವೆ ಎಂದರು.

ಗಡಿಭಾಗದ ಗ್ರಾಮಗಳ ಅಭಿವೃದ್ಧಿಗೂ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ಗಡಿಭಾಗದಲ್ಲಿರುವ ಶಾಲೆಗಳಲ್ಲಿ ಎನ್‌ಸಿಸಿ ಕೇಂದ್ರಗಳನ್ನು ತರಲಾಗುವುದು ಎಂದರು.

ಬಜೆಟ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. 7 ವರ್ಷಗಳ ಹಿಂದೆ, ಭಾರತದ GDP 1 ಲಕ್ಷ 10,000 ಕೋಟಿ ರೂ.ಗಳಷ್ಟಿತ್ತು ಆದರೆ ಇಂದು ಅದು ಸುಮಾರು 2 ಲಕ್ಷದ 30,000 ಕೋಟಿ ರೂ. ದೇಶದ ವಿದೇಶೀ ವಿನಿಮಯ ಮೀಸಲು ಕೂಡ $200 ಶತಕೋಟಿಯಿಂದ $630 ಶತಕೋಟಿಗೆ ಏರಿದೆ. ಇವೆಲ್ಲವೂ ನಮ್ಮ ಸರ್ಕಾರದ ಪರಿಣಾಮಕಾರಿ ನೀತಿಗಳಿಂದ ಸಾಧ್ಯವಾಗಿದೆ ಎಂದರು.

Advertisement

ಸ್ವಾವಲಂಬಿ ಮತ್ತು ಆಧುನಿಕ ಭಾರತವನ್ನು ಮಾಡುವುದು ನಮಗೆ ಬಹಳ ಮುಖ್ಯ. ಭಾರತವನ್ನು ಆಧುನಿಕತೆಯ ದಿಕ್ಕಿನಲ್ಲಿ ಮುನ್ನಡೆಸಲು ಈ ಬಜೆಟ್ ಹಲವಾರು ಪ್ರಮುಖ ನಿಬಂಧನೆಗಳನ್ನು ಹೊಂದಿದೆ. ಕಳೆದ 7 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳಿಂದ ಭಾರತದ ಆರ್ಥಿಕತೆ ನಿರಂತರವಾಗಿ ವಿಸ್ತರಿಸುತ್ತಿದೆ ಎಂದರು.

ಇಲ್ಲಿ ಕೋವಿಡ್ ಸಾಂಕ್ರಾಮಿಕದ ನಂತರದ ಹೊಸ ವಿಶ್ವ ಕ್ರಮದ ಸಾಧ್ಯತೆಯಿದೆ. ಇಂದು ಭಾರತವನ್ನು ನೋಡುವ ಪ್ರಪಂಚದ ದೃಷ್ಟಿಕೋನವು ಬಹಳಷ್ಟು ಬದಲಾಗಿದೆ. ಈಗ, ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತಿದೆ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ವೀಕ್ಷಿಸಿದರು. ಈ ವೇಳೆ ಸಚಿವ ಗೋವಿಂದ ಕಾರಜೋಳ, ಶಾಸಕರಾರ ರಾಜಕುಮಾರ ಪಾಟೀಲ್ ತೇಲ್ಕೂರ, ಎನ್, ರವಿಕುಮಾರ್, ವಿಜಯೇಂದ್ರ ಮತ್ತು ಇತರರು ಉಪಸ್ಥಿತರಿದ್ದರು.

ಮೋದಿ ಅವರ ಭಾಷಣವನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ನಿವಾಸದಲ್ಲಿ ವೀಕ್ಷಿಸಿದರು

Advertisement

Udayavani is now on Telegram. Click here to join our channel and stay updated with the latest news.

Next