ಹೊನ್ನಾಳಿ: ನಾನು ಬೇಡ ಜಂಗಮ ಹೆಸರಿನಲ್ಲಿ ಎಸ್ಸಿ ಪ್ರಮಾಣ ಪತ್ರ ಪಡೆದಿಲ್ಲ. ನನ್ನ ಸಹೋದರ 2012ರಲ್ಲಿ ನಾನು ವಿರೋಧ ಮಾಡಿದ್ದರೂ ನನ್ನ ಮಗಳ ಸಹಿ ಪಡೆದು ಪ್ರಮಾಣ ಪತ್ರ ಪಡೆದಿರುವುದು ನಿಜ.ಆದರೆ ಯಾವುದೇ ಸೌಲಭ್ಯ ಪಡೆದಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಪಕ್ಷದ ಮುಖಂಡರು ಶಾಸಕ ರೇಣುಕಾಚಾರ್ಯ ಎಸ್ಸಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಸದನದಲ್ಲಿ ಆರೋಪಿಸಿದ್ದರು. ನಾನು ಜಾತ್ಯತೀತ ವ್ಯಕ್ತಿ. ಇನ್ನೊಬ್ಬರ ಅನ್ನ ಕಸಿದುಕೊಳ್ಳುವ ನೀಚ ಬುದ್ಧಿ ನನಗಿಲ್ಲ.
ಇದನ್ನೂ ಓದಿ:ಸಿದ್ದರಾಮಯ್ಯ ಹೇಳಿಕೆ ತಿರುಚಿ, ಮಠಾಧೀಶರಿಗೆ ಬಿಜೆಪಿಯಿಂದಲೇ ಅವಮಾನ : ಆಂಜನೇಯ ಆರೋಪ
ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದೇನೆ ಎನ್ನುವ ವಿಷಯಕ್ಕೆ ಶಾಸನ ಸಭೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದೇನೆ ಎಂದರು.