Advertisement

ಹಿರಿಯರು ‘ಹೊಂದಾಣಿಕೆ’ ಮಾಡಿಕೊಂಡಿರುವುದು ನಿಜ..: ಸಿ.ಪಿ. ಯೋಗೀಶ್ವರ್

04:55 PM Jun 22, 2023 | Team Udayavani |

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ವೇಳೆ ಕೆಲ ಕ್ಷೇತ್ರಗಳಲ್ಲಿ ನಮ್ಮ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ ಅಂತಾ ನನಗೆ ಅನಿಸುತ್ತಿದೆ. ಆದರೆ, ಇದನ್ನು ಈಗ ಮಾತನಾಡಿದರೆ ನಾವು ಬೆಂಕಿ ಹಚ್ಚಿದಂತೆ ಆಗುತ್ತದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೀಶ್ವರ್‌ ಹೇಳಿದ್ದಾರೆ.

Advertisement

ಈ ಮೂಲಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಂಸದ ಪ್ರತಾಪ್‌ ಸಿಂಹ ಬಳಿಕ “ಹೊಂದಾಣಿಕೆ ರಾಜಕೀಯ’ದ ಬಗ್ಗೆ ಸಿಪಿವೈ ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಆಡಳಿತ ವ್ಯವಸ್ಥೆ ಸರಿಯಾಗಿರಲಿಲ್ಲ. ಸಚಿವ ಸಂಪುಟ ವಿಸ್ತರಣೆ ಮಾಡಲಿಲ್ಲ, ಸಚಿವ ಸ್ಥಾನಗಳನ್ನು ಖಾಲಿ ಬಿಡಲಾಯಿತು. ಇದರಿಂದ ಪಕ್ಷದಲ್ಲಿ ಆಂತರಿಕ ಬೇಗುದಿ ಸೃಷ್ಟಿಯಾಯಿತು ಎಂದರು.

ಇದನ್ನೂ ಓದಿ:Ram Charan and Upasana: ರಾಮ್‌ ಚರಣ್‌ – ಉಪಾಸನಾ ದಂಪತಿಯ ನವಜಾತ ಶಿಶುವಿನ ಫೋಟೋ ಲೀಕ್? ‌

ಅದಲ್ಲದೇ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲೂ ಹೊಂದಾಣಿಕೆಯಾಗಿದೆ. ಇದರ ಜೊತೆಗೆ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯಲೇ ಇಲ್ಲ. ಈ ಎಲ್ಲ ಅಂಶಗಳು ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಗಿದೆ. ನಮ್ಮ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಅನಿಸಿದೆ. ಅದರ ಬಗ್ಗೆ ಮಾತನಾಡಿದರೆ ಈಗ ಬೆಂಕಿ ಹಚ್ಚಿದಂತೆ ಆಗಲಿದೆ. ಈ ಬಗ್ಗೆ ಈಗ ಚರ್ಚೆ ಅನಗತ್ಯ. ಮುಂದಿನ ಚುನಾವಣೆ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.

Advertisement

ಲೋಕಸಭಾ ಚುನಾವಣೆಗೆ ಸ್ಪರ್ಧೆ: ಮುಂದಿನ ಲೋಕಸಭಾ ಚುನಾವಣೆ ಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಪ್ರತಿಕ್ರಿಯಿ ಸಿದ ಅವರು, ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಎನ್ನುವ ಯೋಚನೆ ನನಗೆ ಇದೆ. ಆದರೆ, ಅದು ಇನ್ನೂ ಅಂತಿಮವಾಗಿಲ್ಲ. ಅಂತಿಮವಾಗಿ ಎಲ್ಲವನ್ನೂ ಪಕ್ಷ ತೀರ್ಮಾನ ಮಾಡಲಿದೆ. ನಾನು ದಿಲ್ಲಿಯಲ್ಲಿ ಕೆಲವು ಪ್ರಮುಖ ನಾಯಕರನ್ನು ಭೇಟಿ ಮಾಡಿದ್ದು, ಲೋಕಸಭಾ ಚುನಾವಣೆಯ ಬಗ್ಗೆಯೂ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

ರಾಜಕೀಯ ಸಾಕಾಗಿದೆ ಎಂದ ಸಂಸದ ಡಿಕೆ ಸುರೇಶ್‌ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣಾ ರಾಜಕೀಯದ ಬಗ್ಗೆ ಡಿಕೆ ಸುರೇಶ್‌ ಯಾಕೆ ವೈರಾಗ್ಯದ ಮಾತುಗಳನ್ನು ಆಡಿದ್ದಾರೆ ಎಂಬುದು ಗೊತ್ತಿಲ್ಲ. ಅಷ್ಟು ಸುಲಭವಾಗಿ ರಾಜಕೀಯ ಬಿಡುವ ವ್ಯಕ್ತಿ ಅವರಲ್ಲ. ಡಿ.ಕೆ. ಸುರೇಶ್‌ ಅವರ ಹೇಳಿಕೆ ಹಿಂದೆ ಗೂಡಾರ್ಥ ಇದೆ. ಅವರ ಅಣ್ಣ ಡಿ.ಕೆ. ಶಿವಕುಮಾರ್‌ ಅವರನ್ನು ಸಿಎಂ ಮಾಡಲು ಪ್ರಯತ್ನಿಸಿರಬೇಕು. ದಿಲ್ಲಿಗಿಂತ ಕರ್ನಾಟಕದಲ್ಲಿ ಸಕ್ರಿಯರಾಗಲು ನಿರ್ಧರಿಸಬೇಕು ಅನಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next