Advertisement

ಭ್ರಷ್ಟಾಚಾರ, ವಂಶ ರಾಜಕೀಯ ಭಾರತ ತೊರೆಯುವ ಸಮಯ ಬಂದಿದೆ..: ಪ್ರಧಾನಿ ಮೋದಿ

04:32 PM Aug 06, 2023 | Team Udayavani |

ಹೊಸದಿಲ್ಲಿ: ಇಂದು ರೈಲ್ವೇಯ ಮೆಗಾ ಪುನರುಜ್ಜೀವನ ಕಾರ್ಯಕ್ರಮದಲ್ಲಿ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದು, “ಭ್ರಷ್ಟಾಚಾರ, ವಂಶ ರಾಜಕೀಯ ಮತ್ತು ತುಷ್ಟೀಕರಣವು ಭಾರತವನ್ನು ತೊರೆಯುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.

Advertisement

ಕ್ವಿಟ್ ಇಂಡಿಯಾ ಚಳವಳಿಯಿಂದ ಪ್ರೇರಿತರಾಗಿ, ಇಡೀ ದೇಶವು ಈಗ ಭ್ರಷ್ಟಾಚಾರ, ರಾಜವಂಶ, ಓಲೈಕೆ ಭಾರತವನ್ನು ತೊರೆಯಬೇಕು ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

508 ರೈಲ್ವೆ ಸ್ಟೇಷನ್ ಗಳ ಪುನರುಜ್ಜೀವನಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿದ ಪ್ರಧಾನಿ ಮೋದಿ ಅವರು, ವಿಪಕ್ಷಗಳು ದೇಶದಲ್ಲಿ ನಕಾರಾತ್ಮಕ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದರು.

ಇದನ್ನೂ ಓದಿ:ಇಂಡಸ್ಟ್ರಿಯಲ್ಲಿ ಡ್ರಗ್‌ ಸೇವನೆ: ಹಾಳಾಗಿರುವುದು ನಾವಲ್ಲ.. ನಟ ಸನ್ನಿ ಡಿಯೋಲ್‌ ಹೇಳಿದ್ದೇನು?

‘ನಾವೂ ಕೆಲಸ ಮಾಡುವುದಿಲ್ಲ, ಮಾಡುವವರಿಗೂ ಬಿಡುವುದಿಲ್ಲ’ ಎಂಬ ರೀತಿಯಲ್ಲಿ ವಿಪಕ್ಷಗಳು ಗುಂಪು ವರ್ತಿಸುತ್ತಿದೆ ಎಂದು ಮೋದಿ ಹೇಳಿದರು.

Advertisement

ಋಣಾತ್ಮಕ ರಾಜಕೀಯದಿಂದ ಮೇಲೆದ್ದು, ಅಭಿವೃದ್ಧಿಗೆ ಆದ್ಯತೆ ನೀಡಿ ಮಿಷನ್ ಮೋಡ್‌ ನಲ್ಲಿ ಸಕಾರಾತ್ಮಕ ರಾಜಕಾರಣದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದರು.

ಇಂದು ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿದೆ. ಅಭಿವೃದ್ಧಿಯ ಗುರಿಯತ್ತ ಸಾಗುತ್ತಿರುವ ಭಾರತವು ಅಮೃತ ಕಾಲದ ಆರಂಭದಲ್ಲಿದೆ. ಹೊಸ ಶಕ್ತಿ, ಹೊಸ ಸ್ಫೂರ್ತಿ ಮತ್ತು ಹೊಸ ಸಂಕಲ್ಪಗಳಿವೆ. ಈ ಉತ್ಸಾಹದಲ್ಲಿ, ಭಾರತೀಯ ರೈಲ್ವೇ ಇತಿಹಾಸದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next