Advertisement
ವಿಪರೀತ ಗಾಳಿಯಿಂದಾಗಿ ಸಮುದ್ರದಲ್ಲಿ ಅಬ್ಬರದ ಅಲೆಗಳು ಏಳುತ್ತಿದ್ದು, ಇದರಿಂದಾಗಿ ಸಮುದ್ರದ ಆಳದಲ್ಲಿರುವ ಕಪ್ಪು ಕೆಸರು ಮಿಶ್ರಿತ ನೀರು ಮೇಲೆ ಬಂದಿದೆ ಎನ್ನಲಾಗಿದೆ. ಇದರಿಂದ ಮೀನುಗಾರಿಕೆಗೆ ತೆರಳಿದ್ದವರು ಸಮುದ್ರವನ್ನು ಕಂಡು ಆಘಾತಗೊಂಡಿದ್ದಾರೆ. ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಗುರುವಾರ ಮೀನುಗಾರರು ಸಮುದ್ರಕ್ಕೆ ಇಳಿಯಲಿಲ್ಲ. ಮಲ್ಪೆ ಬಂದರಿನ ಬಹುತೇಕ ಆಳಸಮುದ್ರ ದೋಣಿಗಳು ಕಾರವಾರ ಸಹಿತ ಇತರ ಬಂದರುಗಳನ್ನು ಪ್ರವೇಶಿಸಿವೆ.
Related Articles
ಕಾಪು: ಕಾಪು ಬೀಚ್‌ನಲ್ಲಿ ಗುರುವಾರ ಮಧ್ಯಾಹ್ನ ದಿಢೀರನೆ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಸಮುದ್ರದಿಂದ ಎದ್ದ ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಬೀಚ್ ಪಕ್ಕದ ಅಂಗಡಿ, ಶೌಚಾಲಯ, ಸಮುದ್ರ ದಂಡೆ ಮತ್ತು ಕಲ್ಲು ಬೆಂಚುಗಳಿಗೆ ನೀರು ಅಪ್ಪಳಿಸಿದೆ.
Advertisement
ಲೈಟ್‌ಹೌಸ್ ಸುತ್ತಲಿನ ಬಂಡೆ, ಲೈಟ್‌ಹೌಸ್‌ನ ಬಂಡೆ ಮತ್ತು ದಡಕ್ಕೆ ಬೃಹತ್ ಅಲೆಗಳು ಅಪ್ಪಳಿಸುತ್ತಿದ್ದು ಲೈಟ್‌ನ ಸುತ್ತಲೂ ದ್ವೀಪ ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಡಲ ಅಬ್ಬರಕ್ಕೆ ಬೆದರಿದ ಸ್ಥಳೀಯ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಗೆ ತೆರಳಿದ್ದಾರೆ. ಬೀಚ್‌ಗೆ ಆಗಮಿಸಿದ ಪ್ರವಾಸಿಗರೂ ವಾಪಸ್ ಹೋಗಿದ್ದಾರೆ.
ಗಂಗೊಳ್ಳಿ: ತೀವ್ರ ಕಡಲ್ಕೊರೆತಗಂಗೊಳ್ಳಿ: ಗಂಗೊಳ್ಳಿಯ ಲೈಟ್‌ಹೌಸ್ ಸಮೀಪದ ಮಡಿ ಎಂಬಲ್ಲಿ ಗುರುವಾರ ಕಡಲ್ಕೊ ರೆತ ತೀವ್ರಗೊಂಡಿದೆ. ಕಡಲಿನ ಅಲೆಗಳ ಆರ್ಭಟಕ್ಕೆ ತೀರ ಪ್ರದೇಶದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಕೆಲವು ದಿನಗಳಿಂದ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಇದ್ದರೂ ಕಡಲ್ಕೊರೆತ ತೀವ್ರತೆ ಪಡೆದುಕೊಂಡಿದೆ. ತೀರದಲ್ಲಿ ನಿಲ್ಲಿಸಿರುವ ದೋಣಿಗಳು ಕಡಲ ಪಾಲಾಗುವ ಭೀತಿ ಎದುರಾಗಿದ್ದು, ಅವುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗುತ್ತಿದೆ.