Advertisement

ಜಲಮೂಲ ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ: ಉದಾಸಿ

05:04 PM Jul 26, 2018 | Team Udayavani |

ಹಾನಗಲ್ಲ: ನೀರು ಮತ್ತು ವಿದ್ಯುತ್‌ ಸಮರ್ಪಕವಾಗಿ ರೈತನಿಗೆ ತಲುಪಿದರೆ ಅತ್ಯುತ್ತಮವಾದ ಆಹಾರ ಪದಾರ್ಥಗಳನ್ನು ನೀಡಿ ತಾನೂ ನೆಮ್ಮದಿಯಿಂದ ಬದುಕಬಲ್ಲ ಎಂದು ಶಾಸಕ ಸಿ.ಎಂ.ಉದಾಸಿ ತಿಳಿಸಿದರು. ಬುಧವಾರ ಹಾನಗಲ್ಲಿನ ನಗರದ ಕುಡಿಯುವ ನೀರಿನ ಜಲಮೂಲವಾದ ಆನಿಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ನೀರಿಲ್ಲದೆ ಜೀವನವಿಲ್ಲ. ಬರ ಬಿದ್ದಾಗ ನೀರಿನ ಮಹತ್ವ ತಿಳಿಯುತ್ತದೆ. ಅಂತರ್ಜಲವನ್ನೂ ಕಾಯ್ದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಬೇಕು. ಅನಿಶ್ಚಿತವಾದ ಮಳೆ ಕಾರಣದಿಂದಾಗಿ ರೈತ ಸಮುದಾಯವಂತೂ ಸಂಕಟದಲ್ಲಿದೆ. ಸಂಕಟ ಬಂದಾಗ ಯೋಚಿಸುವುದಕ್ಕಿಂತ ಮೊದಲೆ ಇರುವ ಜಲಮೂಲವನ್ನು ಉಳಿಸಿಕೊಳ್ಳುವ ಕೆಲಸ ಮಾಡಿಕೊಳ್ಳಬೇಕು. ಮುಂದಿನ ಪೀಳಿಗೆಗೆ ನಮ್ಮ ಪ್ರಕೃತಿಯನ್ನು ಉತ್ತಮವಾಗಿ ಉಳಿಸಿ ಹೋಗುವತ್ತ ಚಿಂತನೆ ನಡೆಸಬೇಕಾಗಿದೆ ಎಂದರು.

Advertisement

7.5 ಕೋಟಿ ರೂ. ವೆಚ್ಚದಲ್ಲಿ ತಿಳವಳ್ಳಿಯಿಂದ ಹಾನಗಲ್ಲಿಗೆ ವಿದ್ಯುತ್‌ ಸಂಪರ್ಕದ ಹೊಸ ಮಾರ್ಗ ಕಲ್ಪಿಸಲಾಗುತ್ತದೆ. ಇದರಿಂದ ಹಾವೇರಿಯಿಂದ ವಿದ್ಯುತ್‌ ಸಂಪರ್ಕ ತಪ್ಪಿದರೂ, ಈ ಹೊಸ ತಿಳವಳ್ಳಿ ಮಾರ್ಗದಿಂದ ವಿದ್ಯುತ್‌ ಪಡೆಯಲು ಸಾಧ್ಯವಾಗಲಿದೆ ಎಂದು ಹೇಳಿದರು.

ಸಹಕಾರಿ ಯೂನಿಯನ್‌ ಹಾವೇರಿ ಜಿಲ್ಲಾಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಹಾನಗಲ್ಲ ನಗರಕ್ಕೆ ಆನಿಕೆರೆ ಒಂದು ಅತ್ಯುತ್ತಮವಾದ ಸಂಪನ್ಮೂಲ. ಪಟ್ಟಣಕ್ಕೆ ಬೇಸಿಗೆಯಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ನಿರ್ವಹಿಸಲು ಸಹಕಾರಿಯಾಗಿದೆ. ಆನಿಕೆರೆ ಕೇವಲ ಜಲಮೂಲವಾಗದೆ ಇದರ ಸುತ್ತ ಪ್ರಕೃತಿ ಸೌಂದರ್ಯವನ್ನು ಹೆಚ್ಚಿಸಲು ಮುಂದಾಗಿದ್ದಲ್ಲದೆ. ಸಾರ್ವಜನಿಕರಿಗಾಗಿ ಕೆರೆಯ ಏರಿಯ ಮೇಲೆ ಪಾದಚಾರಿ ಪಥ ನಿರ್ಮಿಸಲಾಗುತ್ತದೆ ಎಂದರು.

ನೀಲಮ್ಮ ಉದಾಸಿ, ಶಿವಗಂಗಕ್ಕ ಪಟ್ಟಣದ, ಪುರಸಭೆ ಅಧ್ಯಕ್ಷೆ ಹಸೀನಾಬಿ ನಾಯ್ಕನವರ, ಉಪಾಧ್ಯಕ್ಷ ಗಣೇಶ ಮೂಡ್ಲಿಯವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಾಲತೇಶ ಚಿಕ್ಕಣ್ಣನವರ, ಸದಸ್ಯರಾದ ಚನ್ನವೀರಸ್ವಾಮಿ ಹಿರೇಮಠ, ಜಾಫರಸಾಬ್‌ ಕೇಣಿ, ರವಿ ಕಲಾಲ, ತಾಹೇರಾಬಿ ಮುಲ್ಲಾ, ಯಲ್ಲವ್ವ ಕಂಚಿಗೊಲ್ಲರ, ರಾಜೇಶ್ವರಿ ಪಾಂಡುರಂಗಿ, ಭೋಜರಾಜ ಕರೂದಿ, ಎಚ್‌.ಎಚ್‌.ರವಿಕುಮಾರ, ತೋಟಗಾರಿಕಾ ಬೆಳೆಗಾರರ ಸಂಘದ ಬಾಳಾರಾಮ ಗುರ್ಲಹೊಸೂರ, ಶರತ್‌ಚಂದ್ರ ದೇಸಾಯಿ, ಮಹೇಶ ಅರಳೆಲಿಮಠ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next