Advertisement

ಕುವೆಂಪು ನೆನೆಯೋದೇ ನಮ್ಮೆಲ್ಲರ ಭಾಗ್ಯ

08:55 PM Jan 05, 2022 | Team Udayavani |

ಹಿರೇಕೆರೂರ: ಕುವೆಂಪು ಅವರದ್ದು ವೈಚಾರಿಕ ಪ್ರಜ್ಞೆಯೊಂದಿಗೆ ಪೂರ್ಣ ಅರಳಿದ ಬದುಕಾಗಿತ್ತು. ಅನುಭವದ ಆಳಕ್ಕೆ ಇಳಿದು ಕವಿಯಾಗಿ ಜಗತ್ತಿಗೆ ವಿಚಾರಧಾರೆಗಳನ್ನು ಹಂಚುವ ಮೂಲಕ ವಿಶ್ವಕ್ಕೆ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಮನುಕುಲದಲ್ಲಿ ಅಜರಾಮರರಾಗಿ ಉಳಿದ ಮಹಾನ್‌ ಸಂತನನ್ನು ನೆನೆಯುವುದೇ ನಮ್ಮೆಲ್ಲರ ಭಾಗ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

Advertisement

ಪಟ್ಟಣದ ಸಿಇಎಸ್‌ ವಿದ್ಯಾಸಂಸ್ಥೆಯ ಶಾಂತಿನಿಕೇತನ ಆವರಣದ ಡಾ|ಯು.ಎಸ್‌. ಅವಸ್ಥೆ ವೇದಿಕೆಯಲ್ಲಿ ಬಿ.ಆರ್‌. ತಂಬಾಕದ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹಮ್ಮಿ ಕೊಂಡಿದ್ದ ವಿಶ್ವಮಾನವ ದಿನಾಚರಣೆ ಹಾಗೂ ಶ್ರೀ ಬಿ.ಸಿ. ಪಾಟೀಲ ಶಾಸಕರ ಸ್ಥಳೀಯ ಪ್ರದೇ ಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಿದ ಸಾಂಸ್ಕೃತಿಕ ಭವನ ಹಾಗೂ ವಿದ್ಯಾರ್ಥಿ ಒಕ್ಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಕವಿ ಕುವೆಂಪು ಅವರ ಪುಸ್ತಕ ಗಳನ್ನು ಯುವ ಪೀಳಿಗೆ ಅಧ್ಯಯನ ಮಾಡಬೇಕು. ಅವರ ಕಾವ್ಯಗಳಲ್ಲಿರುವ ಮಾನವೀಯ ಮೌಲ್ಯ ಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಸಮಾಜದಲ್ಲಿ ಉತ್ತಮ ನಾಗರಿಕರಾಗಲು ನೆರವಾಗಲಿದೆ ಎಂದರು.

ಸಿಇಎಸ್‌ ವಿದ್ಯಾ ಸಂಸ್ಥೆ ಒಂದು ಬೃಹತ್‌ ಸಂಸ್ಥೆಯಾಗಿ ಬೆಳೆದಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಅತ್ಯಂತ ಶ್ಲಾಘನೀಯ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಟಿಎಪಿಎಂಎಸ್‌ ಅಧ್ಯಕ್ಷ ಎಸ್‌. ಎಸ್‌.ಪಾಟೀಲ ಮಾತನಾಡಿ, ಮಾನವ ತನ್ನ ಮನಸನ್ನು ವಿಶ್ವದಷ್ಟು ವಿಶಾಲವಾಗಿ ಇಟ್ಟುಕೊಳ್ಳಬೇಕು.

ಹೃದಯವಂತಿಕೆ, ಸಜ್ಜನಿಕೆ, ಅಭಿಮಾನ, ಪ್ರೀತಿ, ಸಹನೆ ಹಾಗೂ ಕರುಣೆ ಎಲ್ಲವೂ ಮುಖ್ಯ ಎನ್ನುವುದನ್ನು ತಮ್ಮ ಕಾವ್ಯಗಳ ಮೂಲಕ ಕುವೆಂಪು ಅವರು ಜಗತ್ತಿಗೆ ಪರಿಚಯಿಸಿದ್ದಾರೆ ಎಂದು ಸ್ಮರಿಸಿದರು. ಕುವೆಂಪು ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ|ಗುರುಪ್ರಸಾದ್‌ ಟಿ.ಆರ್‌., ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ರಚಿಸಿ ರಾಜ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದಾರೆ.

Advertisement

ಅವರಿಗೆ ಯುಗದ ಕವಿ ಹಾಗೂ ಜಗದ ಕವಿ ಎಂಬ ಬಿರುದುಗಳಿವೆ. ವಿಭಿನ್ನ ಆಯಾಮಗಳ ಮೂಲಕ ವಿಶ್ವ ಮಾನವ ಸಂದೇಶವನ್ನು ವಿಶ್ವಕ್ಕೆ ಪರಿಚಯಿಸಿದ ಮೊದಲ ಯುಗದ ಕವಿ ಎಂದು ಬಣ್ಣಿಸಿದರು. ಸಂಸ್ಥೆ ಅಧ್ಯಕ್ಷ ಎಸ್‌.ಬಿ ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್‌ ಕೆ.ಎ.ಉಮಾ, ಉಪಾಧ್ಯಕ್ಷ ಎಂ.ವಿ. ಹೊಂಬರಡಿ, ಆಡಳಿತಾ  ಧಿಕಾರಿ ಎಸ್‌.ವೀರಭದ್ರಯ್ಯ, ಪ್ರಾಚಾರ್ಯ ಡಾ|ಎಸ್‌.ಬಿ.ಚನ್ನಗೌಡರ, ಬಿ.ಟಿ.ಚಿಂದಿ, ಉಪನ್ಯಾಸಕರಾದ ವಿಜಯಕುಮಾರ ಮುದಿಗೌಡರ, ಪ್ರವೀಣ ಕುರವತ್ತೇರ, ಮೋಹನ್‌ ಕೆ.ಪಿ, ಹನುಮಂತಪ್ಪ ಎಸ್‌., ಲತಾ ಬಿ.ವೈ., ಎಸ್‌.ಎಸ್‌. ಹುಲಿನಕೊಪ್ಪ, ಜೀತೇಂದ್ರ ಎಚ್‌.ಬಿ., ಸಂಜು ಡಮ್ಮಳ್ಳಿ ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next