ಬೆಂಗಳೂರು: ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಛ ಹೂವಿನ ಹಾರಗಳನ್ನು ನೀಡಬಾರದು ಎನ್ನುವುದು ಸರಿಯಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಆರ್.ಕೆ.ನಲ್ಲೂರು ಪ್ರಸಾದ್ ಹೇಳಿದರು.
ಬಿ.ಎಂ.ಶ್ರೀ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಪ್ರೇಮಾ ಭಟ್ ಅವರಿಗೆ “ಡಾ. ವಿಜಯಾ ಸುಬ್ಬರಾಜ್ ಗಣ್ಯ ಲೇಖಕಿ ಪ್ರಶಸ್ತಿ’ ಹಾಗೂ ಸಾಹಿತಿ ಚಿದಾನಂದ ಸಾಲಿ ಅವರಿಗೆ “ಪ್ರೊ.ಸೂ. ವೆಂ.ಆರಗ ವಿಮರ್ಷಾ ಪ್ರಶಸ್ತಿ’ಯನ್ನು ಪ್ರದಾನ ಮಾಡಿ ಮಾತನಾಡಿ¨ ಅವರು, ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಹೂಗುಚ್ಛ ಹೂವಿನ ಹಾರಗಳನ್ನು ಬಳಸಬಾರದೆಂಬ ಸರ್ಕಾರದ ಆದೇಶಹೊರಡಿಸಿದೆ. ಈ ನೆಲವನ್ನೇ ನಂಬಿ ರೈತರು ಬೆಳೆಯುವ ಹೂವು ಕೂಡ ಪುಸ್ತಕದಷ್ಟೇ ಮುಖ್ಯ. ಹೂವಿನ ಹಾರಹೂಗುಚ್ಛ ನಿಷೇಧಿಸಲು ರೈತರು ಸರ್ಕಾರಕ್ಕೆ ಕಂದಾಯ ಕಟ್ಟುತ್ತಿಲ್ಲವೇ ಎಂದು ಪ್ರಶ್ನಿಸಿದರು.
ನಾವು ಪುಸ್ತಕ ವಿರೋಧಿಗಳು ಇಲ್ಲ. ಸಭೆ ಸಮಾರಂಭಗಳಲ್ಲಿ ಎರಡೆರಡು ಪುಸ್ತಕಗಳನ್ನು ಬೇಕಾದರೂ ನೀಡಲಿ. ಆದರೆ,ಹೂಗುಚ್ಛ ಹೂವಿನ ಹಾರಗಳನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ನೀಡಬಾರದು ಎನ್ನುವುದು ಮಾತ್ರ ಸರಿಯಾದ ನಿರ್ಧಾರವಲ್ಲ ಎಂದರು.ಕನ್ನಡ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಪ್ರತಿಷ್ಠಾನಗಳು ಮಾಡುತ್ತಿರುವುದು ಖುಷಿಯ ವಿಚಾರವಾಗಿದೆ. ಆ ಮೂಲಕ ಕನ್ನಡ ಸಾಹಿತ್ಯ ಬೆಳವಣಿಗೆಗೆ ಪ್ರೋತ್ಸಾಹ ಕಲ್ಪಿಸಿದಂತಾಗಿದೆ ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಡಿ.ಮಂಗಳಾ ಪ್ರಿಯದರ್ಶಿನಿ ಮಾತನಾಡಿ, ದೊಡ್ಡ ಸಾಹಿತ್ಯ ಕೃತಿಗಳನ್ನು ರಚನೆ ಮಾಡುವುದಕಿಂತಲೂ ಸಣ್ಣ
ಕತೆಗಳನ್ನು ಬರೆಯುವುದು ನಿಜಕ್ಕೂ ಕಷ್ಟದಕೆಲಸವಾಗಿದೆ. ಪ್ರೇಮಾ ಭಟ್ ಅವರುಕತೆಗಳನ್ನು ಕಲಾತ್ಮಕವಾಗಿ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಚಿದಾನಂದ ಸಾಲಿ ಅವರು ಕಥೆ, ಕವಿತೆ, ಗಜಲ್, ನಾಟಕ, ಪ್ರಬಂಧ, ಸಂದರ್ಷನ, ಸಂಶೋಧನೆ, ವಿಮರ್ಶೆಯಂತಹ ಹಲವಾರು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.ಈ ಪ್ರಶಸ್ತಿ ಅವರಿಗೆ ಸಲ್ಲಬೇಕಾದುದ್ದೆ ಆಗಿದೆ ಎಂದರು. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್.ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.