Advertisement
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ತಮ್ಮ ಉಪಸ್ಥಿತಿಯಲ್ಲಿ ಜರಗಿದ ಸಾರ್ವಜನಿಕ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಆಯುಕ್ತೆ ರೂಪಾ ಶೆಟ್ಟಿ ಅವರ ವಿರುದ್ಧ ಪುರಸಭೆ ಅಧ್ಯಕ್ಷೆ ಜಯಂತಿ ಬಲಾ°ಡ್ ಸಲ್ಲಿಸಿದ ದೂರು ಅರ್ಜಿಯನ್ನು ವಜಾಗೊಳಿಸಿದ ಲೋಕಾ ಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರು, ದೂರುದಾರೆ ಜಯಂತಿ ಅವರು ಬಾರದೆ ವಕೀಲರನ್ನು ಕಳುಹಿಸಿಕೊಟ್ಟ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೂರು ಸಮ್ಮತವಾಗಿದ್ದರೆ ಸ್ವತಃ ಹಾಜ ರಿರಬೇಕಿತ್ತು. ಮೇಲಾಗಿ ಇದು ಸಾರ್ವಜನಿಕರ ಅಹವಾಲು ಆಲಿಸುವ ಕಾರ್ಯ ಕ್ರಮ; ಪಂಚಾಯತಿ, ರಾಜ ಕೀಯಕ್ಕೆ ವೇದಿಕೆಯಲ್ಲ. ಆಯುಕ್ತರ ವಿರುದ್ಧ ಅಧ್ಯಕ್ಷರೇ ದೂರು ನೀಡುವು ದಾದರೆ ಅವರು ಅಧ್ಯಕ್ಷರಾಗಿರುವುದು ಸರಿಯಲ್ಲ. ಆಯುಕ್ತರು ಕೆಲಸ ಮಾಡದಿದ್ದರೆ ಅವರ ವಿರುದ್ಧ ಕೌನ್ಸಿಲ್‌ನಲ್ಲಿ ನಿರ್ಣಯ ಕೈಗೊಳ್ಳಲಿ. ಅಧಿಕಾರಿಗಳ ವಿರುದ್ಧ ನೀಡುವ ದೂರು ಸುಳ್ಳಾಗಿದ್ದರೆ ಅಂತಹ ದೂರುದಾರರ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ. ಲೋಕಾಯುಕ್ತ ಸಂಸ್ಥೆಯನ್ನು ಲಘುವಾಗಿ ಪರಿಗಣಿಸಬೇಡಿ ಎಂದರು.
ಡಿಸಿ ಶಶಿಕಾಂತ್ ಸೆಂಥಿಲ್, ಎಡಿಸಿ ಕುಮಾರ್, ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ, ಜಿ.ಪಂ. ಸಿಇಒ ಡಾ| ಎಂ.ಆರ್. ರವಿ ಮತ್ತಿತರರಿದ್ದರು.
Related Articles
ಲೋಕಾಯುಕ್ತ ನ್ಯಾ| ಪಿ. ವಿಶ್ವನಾಥ ಶೆಟ್ಟಿ ಅವರ ನೇತೃತ್ವ ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ 2.30ಕ್ಕೆ ಸಾರ್ವ ಜನಿಕ ದೂರುಗಳ ವಿಚಾ ರಣೆ ಹಾಗೂ ವಿಲೇವಾರಿ ಸಭೆ ಆರಂಭ ಗೊಂಡಿದ್ದು ರಾತ್ರಿ 8.30ರವರೆಗೂ ಮುಂದುವರಿದಿತ್ತು. ಒಟ್ಟು 77 ಅರ್ಜಿ ಗಳನ್ನು ಇತ್ಯರ್ಥ ಮಾಡಲಾಯಿತು.
Advertisement