Advertisement

ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ: ಅರ್ಲೇಕರ್

02:19 PM Jul 12, 2021 | Team Udayavani |

ಪಣಜಿ: ರಾಜ್ಯಪಾಲರು ಯಾವಾಗಲೂ ತಟಸ್ಥರಾಗಿರಬೇಕು. ಯಾವುದೇ ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ. ನನಗೆ ಯಾವುದೇ ಭಿನ್ನಾಭಿಪ್ರಾಯಗಳಿದ್ದರೆ ನಾನು ಅಲ್ಲಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಗೋವಾ ವಿಧಾನಸಭೆಯ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ಅಭಿಪ್ರಾಯಪಟ್ಟರು.

Advertisement

ಆರ್.ಎಸ್.ಎಸ್ ಮತ್ತು ಬಿಜೆಪಿ ಸಂಸ್ಕøತಿಯಲ್ಲಿ ನನಗೆ ವಹಿಸಿದ ಯಾವುದೇ ಜವಾಬ್ದಾರಿಯನ್ನು ಪೂರ್ಣ ಹೃದಯದಿಂದ ನಿರ್ವಹಿಸಲು ಕಲಿಸಿದೆ ಎಂದು ರಾಜೇಂದ್ರ ಅರ್ಲೇಕರ್ ನುಡಿದರು.

ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ಗೋವಾ ರಾಜ್ಯ ವಿಧಾನಸಭೆಯ ಮಾಜಿ ಸಭಾಪತಿ ರಾಜೇಂದ್ರ ಅರ್ಲೇಕರ್ ರವರು ಸೋಮವಾರ ಮಧ್ಯಾನ್ಹ ಶಿಮ್ಲಾಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪುಷ್ಪಗುಚ್ಛ ನೀಡಿ ಶುಭಕೋರಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ, ನಗರಾಭಿವೃದ್ದಿ ಸಚಿವ ಮಿಲಿಂದ ನಾಯ್ಕ, ದಕ್ಷಿಣ ಗೋವಾ ಮಾಜಿ ಸಂಸದ ನರೇಂದ್ರ ಸಾವೈಕರ್, ದಾಮೋದರ ನಾಯ್ಕ, ಕಾರ್ಲುಸ್ ಅಲ್ಮೆದಾ ಮತ್ತಿತರರು ಉಪಸ್ಥಿತರಿದ್ದು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಂಡಿರುವ ರಾಜೇಂದ್ರ ಅರ್ಲೇಕರ್ ರವರಿಗೆ ಶುಭಕೋರಿದರು. ನಂತರ ವಾಸ್ಕೊ ದಾಬೋಲಿಂ ವಿಮಾನ ನಿಲ್ದಾಣದ ಮೂಲಕ ಚಂದೀಗಢ ಮಾರ್ಗವಾಗಿ ಶಿಮ್ಲಾಕ್ಕೆ ಪ್ರಯಾಣ ಬೆಳೆಸಿದರು

Advertisement

Udayavani is now on Telegram. Click here to join our channel and stay updated with the latest news.

Next