Advertisement
ಸುದ್ದಿಗಾರರೊಂದಿಗೆ ಮಾತನಾಡಿ ದಲಿತ ಮುಖ್ಯಮಂತ್ರಿ ಚರ್ಚೆಯ ವಿಷಯವಾಗಿ ಪ್ರತಿಕ್ರಿಯೆ ನೀಡಿದರು. ಆಸೆ ಆಕಾಂಕ್ಷೆಗಳಿರೋದು ಸಹಜ, ಅಂತಹ ಪರಿಸ್ಥಿತಿ ಬಂದಾಗ ಅವಕಾಶ ಎಲ್ಲರಿಗೂ ಆಗುತ್ತದೆ. ಎಲ್ಲರಿಗೂ ಸಿಎಂ ಆಗುವ ಅವಕಾಶ, ಅರ್ಹತೆ ಇದೆ. ಸದ್ಯ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಬಸನಗೌಡ ಪಾಟೀಲ ಯತ್ನಾಳ ಬಗ್ಗೆ ಬಿಜೆಪಿಯವರೇ ಎಚ್ಚರದಿಂದ ಇತಬೇಕೆ ಹೊರತು ಕಾಂಗ್ರೆಸ್ ಪಕ್ಷದವರಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರದ ತಿರುಗೇಟು ನೀಡಿದ್ದಾರೆ.
Related Articles
Advertisement
ಇಬ್ಬರ ಪಕ್ಷ ಬೇರೆ ಬೇರೆ ಇದ್ದರೂ ಯತ್ನಾಳ ನನ್ನ ಆತ್ಮೀಯರು, ಇಬ್ಬರ ಮಧ್ಯೆ ವಯಕ್ತಿತ ಸ್ನೇಹ ಚನ್ನಾಗಿದೆ ಎಂದ ಸಚಿವ ಸುಧಾಕರ್ , ನಮಗಿಂತ ಹೆಚ್ಚಾಗಿ ಸ್ವಪಕ್ಷೀಯರ ಮೇಲೆಯೇ ಹೆಚ್ಚು ಬಾಂಬ್ ಹಾಕುತ್ತಾರೆ. ಹೀಗಾಗಿ ಯತ್ನಾಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿರುವುದು ಕಾಂಗ್ರೆಸ್ ಪಕ್ಷದವರಲ್ಲ, ಅವರ ಸ್ವಪಕ್ಷೀಯರೇ ಎಂದು ಕುಟುಕಿದರು.
ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಪಕ್ಷದವು 50-60 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಪಕ್ಷದ ಅಭ್ಯರ್ಥಿಗೆ ಮತಹಾಕಿದ್ದಾರೆ. ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಯ ತಂತ್ರಗಾರಿಕೆ ವಿಫಲವಾಗಿದೆ ಎಂದರು.
ಇಂಥ ಮಾತಿನಿಂದಲೇ ಸಚಿವ ಸ್ಥಾನ ಕಳೆದುಕೊಂಡಿದ್ದರು
ನಾವು ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆ ಎಂದಿರುವ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಇಂಥ ಮಾತನಾಡಿಯೇ ಸಚಿವ ಸ್ಥಾನ ಕಳೆದುಕೊಂಡಿದ್ದರು. ಇದು ಮಾನಸಿಕ ಅಸಮತೋಲನದ ಪ್ರತೀಕ ಎಂದರು.
ಸಂವಿಧಾನ ಬದಲಿಸುವ ಮಾತನಾಡುತ್ತಿರುವ ಅನಂತರಕುಮಾರ ನಾಲ್ಕು ವರ್ಷಗಳಿಂದ ಎಲ್ಲಿ ಹೋಗಿದ್ದು, ಕಾಣೆಯಾಗಿದ್ದು ಏಕೆ. ಈ ಹಿಂದೆ ಇದೇ ರೀತಿ ಮಾತನಾಡಿ ಸಚಿವ ಸ್ಥಾನ ಕಳೆದುಕೊಂಡಿದ್ದ ಅನಂತಕುಮಾರ ಹೆಗಡೆ ಅವರಿಗೆ ಚುನಾವಣೆ ಸಂದರ್ಭದಲ್ಲಿ ಒಂದು ರೀತಿಯ ಕಾಯಿಲೆ ಬರುತ್ತದೆ ಎಂದು ಕುಟುಕಿದರು.
ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದ ಮೂಲ ಆಶಯ, ವ್ಯವಸ್ಥೆಯೇ ಅರ್ಥವಾಗಿಲ್ಲ. ಭಾವನಾತ್ಮಕವಾಗಿ ಸಮಾಜವನ್ನು ಒಡೆಯುವ ಮೂಲಕ ಮುಗ್ಧ ಜನರನ್ನು ದಾರಿ ತಪ್ಪಿಸುಯವ ಕೆಲಸ ಮಾಡುತ್ತಾರೆ. ಇದೆಲ್ಲ ಬಹಳ ದಿನ ನಡೆಯದು ಇಂಥದ್ದಕ್ಕೆಲ್ಲ ಅಂತ್ಯ ಇದ್ದೇ ಇರುತ್ತದೆ ಎಂದು ಹರಿಹಾಯ್ದರು.