Advertisement

ಚಾಮರಾಜನಗರಕ್ಕೆ ಬರುವುದು ನನ್ನ ಕರ್ತವ್ಯ: ಸಿಎಂ ಬೊಮ್ಮಾಯಿ

08:18 PM Oct 07, 2021 | Team Udayavani |

ಚಾಮರಾಜನಗರ: ನಾನು ಚಾಮರಾಜನಗರ ಜಿಲ್ಲೆಗೆ ಬರುವುದು ಬಹಳ ಚರ್ಚೆಯಾಗಿತ್ತು. ಅದರ ಅವಶ್ಯಕತೆಯಿಲ್ಲ. ಇಲ್ಲಿಗೆ ಬರುವುದು ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಗುರುವಾರ, ನಗರದ ಯಡಬೆಟ್ಟ ಬಳಿಯ ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆಗಳ ನೂತನ ಬೋಧನಾ ಆಸ್ಪತ್ರೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಚಾಮರಾಜನಗರ ಕರ್ನಾಟಕದ ಅವಿಭಾಜ್ಯ ಅಂಗ. ಇಲ್ಲಿನ ಜನರ ಕಲ್ಯಾಣ ಮಾಡುವುದು ನನ್ನ ಆದ್ಯ ಕರ್ತವ್ಯ. ನಾನು ಬಾರದೇ ಇದ್ದರೆ ನನ್ನ ಕರ್ತವ್ಯ ಲೋಪವಾಗುತ್ತಿತ್ತು. ನಾನು ಕರ್ತವ್ಯ ಲೋಪ ಮಾಡಲು ತಯಾರಿಲ್ಲ. ನನ್ನ ಕರ್ತವ್ಯ ಲೋಪವಾಗಬಾರದು. ಅವರವರ ನಂಬಿಕೆ ಅವರಿಗೆ ಬಿಟ್ಟಿದ್ದು. ನಾನು ಒಂದು ಮಾತಿನಲ್ಲಿ ನಂಬಿಕೆ ಇಟ್ಟಿದ್ದೇನೆ. ಒಳ್ಳೆಯ ಮನಸ್ಸಿನಲ್ಲಿ ಕೆಲಸ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ. ದೇವರ ಸೃಷ್ಟಿಯಲ್ಲಿ ಪ್ರತಿ ಘಳಿಗೆಯೂ ಒಳ್ಳೆಯದೇ. ಹಾಗಾಗಿ ಪ್ರತಿ ಸಮಯವೂ ಶುಭಕರವೇ ಎಂದು ಅವರ ಪ್ರತಿಪಾದಿಸಿದರು.

ವೈದ್ಯಕೀಯ ಸೇವೆ ನಿಂತಿರುವುದು ವಿಜ್ಞಾನದಿಂದ. ಇಂಥ ವೈದ್ಯಕೀಯ ಸಂಸ್ಥೆಗಳಿಂದ ವಿಜ್ಞಾನ ಆಧಾರಿತವಾದ ತರ್ಕಬದ್ಧವಾದ ಯುವ ಪೀಳಿಗೆಯನ್ನು ನಿರ್ಮಾಣ ಮಾಡುತ್ತಿದ್ದೇವೆ. ಇನ್ನೊಮ್ಮೆ ಚಾಮರಾಜನಗರಕ್ಕೆ ಬರುತ್ತೇನೆ. ಆಗ ಜಿಲ್ಲಾಧಿಕಾರಿ ಕಚೇರಿಗೆ ಬಂದು ಪ್ರಗತಿ ಪರಿಶೀಲನಾ ಸಭೆ ನಡೆಸುತ್ತೇನೆ.  ಚಾಮರಾಜನಗರದ ಸಮಗ್ರ ಅಭಿವೃದ್ಧಿಗೆ ಏನೇನು ಅನುದಾನ ನೀಡಬೇಕೋ ನೀಡುತ್ತೇನೆ. ಇಲ್ಲಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭಾಶಯ ಕೋರುತ್ತೇನೆ ಎಂದು ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next