Advertisement
ನಗರದಲ್ಲಿ ಶನಿವಾರ ಟ್ರಾಮಾಕೇರ್ ಸೆಂಟರ್ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಸರಕಾರಿ ಆರೋಗ್ಯ ಸೇವೆ ಬಡವರಿಗೆ ಮತ್ತು ಅಶಕ್ತರಿಗೆ ತಲುಪುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಆರೋಗ್ಯ ಸೇವೆಯ ಉತ್ತಮ ಸೌಲಭ್ಯ ಜನರಿಗೆ ಸಿಗಬೇಕಾದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನೀಡುವ ವೆಚ್ಚದ ಕುರಿತು ಸರಿಯಾದ ಮಾಹಿತಿಯನ್ನು ರೋಗಿಗಳಿಗೆ ಮತ್ತು ರೋಗಿಯ ಸಂಬಂಧಿಗಳಿಗೆ ತಿಳುವಳಿಕೆ ನೀಡಿ, ತದನಂತರ ಚಿಕಿತ್ಸೆ ಆರಂಭಿಸಬೇಕು. ಇಂತಹದೇ ಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಆರೋಗ್ಯ ಸೇವೆಯಲ್ಲಿರುವ ಸಿಬ್ಬಂದಿ ಮತ್ತು ವೈದ್ಯರು ಮಾಡಬೇಕು ಎಂದರು.
Related Articles
Advertisement
ಶೀಘ್ರವೇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ
ಈಗಾಗಲೇ ಜಯದೇವ ಆಸ್ಪತ್ರೆಯೆಂದು ವಿಸ್ತರಿಸಲಾಗುತ್ತಿದೆ. ಅದರೊಂದಿಗೆ ಶೀಘ್ರದಲ್ಲಿಯೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೂಡ ನಾವು ಆರಂಭಿಸಲು ಈಗಾಗಲೇ ಹಣಕಾಸು ಇಲಾಖೆಯ ಅನುಮೋದನೆ ಪಡೆಯಲಾಗಿದೆ. ಇನ್ನಷ್ಟೇ ಕೆಲಸ ಆರಂಭಿಸಬೇಕಾಗಿದೆ. ಅಂದುಕೊಂಡಂತೆ ಎಲ್ಲವೂ ಆದರೆ ಜೂನ್ ಒಳಗಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಾರ್ಯರಂಭ ಮಾಡಲಿದೆ ಎಂದರು.
ಅದಲ್ಲದೆ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿಗೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಘಟಕವನ್ನು ಕೂಡ ನಾವು ಆರಂಭಿಸಲು ಯೋಜಿಸಿದ್ದೇವೆ. ಅದಲ್ಲದೆ ಈಗಾಗಲೇ ಬರ್ನ್ ಯುನಿಟ್ಗಾಗಿ 15 ಕೋಟಿ ವೆಚ್ಚದಲ್ಲಿ ಕ್ಯಾಬಿನೆಟ್ ಅನುಮತಿಯನ್ನು ಪಡೆಯಲಾಗಿದೆ ಎಂದರು.
ನಾನು ಹಿಂದಿನ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ ಮಧ್ಯದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಸರ್ಕಾರ ಬಂದಿತ್ತು. ಈಗ ಪುನಃ ನನಗೆ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನವೇ ಸಿಕ್ಕಿದೆ ಇದರಿಂದಾಗಿ ನನಗೆ ಕಲ್ಯಾಣ ಭಾಗದಲ್ಲಿ ಆರೋಗ್ಯ ಸೇವೆಗಳ ಕುರಿತು ಹೆಚ್ಚು ಆಸಕ್ತಿ ಮತ್ತು ತುರಿಸಿನಿಂದ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತಿದೆ. ಅಂದುಕೊಂಡಂತೆ ಅಲ್ಪಕಾಲಾವಧಿಯಲ್ಲಿ ಜಯದೇವ ವಿಸ್ತರಣೆ, ಟ್ರಾಮಾ ಸೆಂಟರ್, ಕಿದ್ವಾಯಿ ಹಾಗೂ ಒತರೆ ಕೆಲಸ ಪೂರ್ಣಗೊಳಿಸಲು ಕೆಲಸ ಮಾಡಿದ ಡಾಕ್ಟರ್ ಬಾಲಾಜಿ ರೈ ಹಾಗೂ ಡಾಕ್ಟರ್ ಸಂದೀಪ್ ಸೇರಿದಂತೆ ಕಲ್ಬುರ್ಗಿ ಜಿಮ್ಸ್ ನಿರ್ದೇಶಕರಾದ ಉಮೇಶ್ ಹಾಗೂ ಜಿಮ್ಸ ಅಧೀಕ್ಷಕ ಶಿವಕುಮಾರ್ ಕಾರ್ಯವನ್ನು ಅಭಿನಂದಿಸುತ್ತೇನೆ ಎಂದರು.
ಇದಲ್ಲದೆ 50 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಹಾಗೂ ಎರಡು ನೂರು ಹಾಸಿಗೆಯ ತಾಯಿ ಮಕ್ಕಳ ಪ್ರತ್ಯೇಕ ಆಸ್ಪತ್ರೆಯನ್ನು ಕೂಡ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಿಸಲಾಗುವುದು. ಶ್ರೀಮಂತರು ಎಲ್ಲೂ ಬೇಕಾದರೂ ಅಲ್ಲಿ ತಮಗೆ ಇಷ್ಟವಾದ ರೀತಿಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಬಡವರು ಹಾಗೂ ಅಶಕ್ತರು ಮಾತ್ರ ಸರ್ಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ. ಆದ್ದರಿಂದ ಅವರ ನಂಬಿಕೆ ಹಾಗೂ ಅವರ ಜೀವ ಉಳಿಸುವುದು. ಸರ್ಕಾರದ ಭಾಗವಾಗಿ ನನ್ನ ಆದ್ಯ ಕರ್ತವ್ಯವೆಂದು ನಾನು ಕಲ್ಬುರ್ಗಿ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಉತ್ತಮ ಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಕಾರ್ಯದಲ್ಲಿ ನನಗೆ ಸಹಕಾರ ನೀಡಿದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ ಎಂದರು.
ಈ ವೇಳೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕ್ನೂರ್, ಚಂದ್ರಶೇಖರ್ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್, ಕಮಿಷನರ್ ಚೇತನ್ ಆರ್, ಎಸ್ ಪಿ ಶ್ರೀನಿವಾಸಲು ಅಡೂರ್ ಹಾಗೂ ಜಿಮ್ಸ್ ಸಿಬ್ಬಂದಿ ಇದ್ದರು.