Advertisement

ವಿಪಕ್ಷವಾಗಿ ಅವ್ಯವಹಾರ ಪ್ರಶ್ನಿಸುವುದು ಅನಿವಾರ್ಯ: ಸಿದ್ದರಾಮಯ್ಯ

09:15 PM Jul 09, 2020 | Sriram |

ಬೆಂಗಳೂರು: ಜನರಿಗೆ ಕಷ್ಟನಷ್ಟ ಉಂಟುಮಾಡುವ ಪ್ರಭುತ್ವದ ಜನವಿರೋಧಿ ನಡವಳಿಕೆಗಳಿಗೆ ಸಹಕರಿಸುವುದು ಜನದ್ರೋಹವಾಗುತ್ತದೆ. ಜವಾಬ್ದಾರಿಯುತ ವಿಪಕ್ಷವಾಗಿ ನಾವು ಜನರ ಪರ ಇದ್ದೇವೆಯೇ ಹೊರತು ಸರಕಾರದ ಪರ ಅಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಸಂಕಷ್ಟದ ಕಾಲದಲ್ಲಿ ಸಹಕಾರ ನೀಡುವುದು ವಿಪಕ್ಷದ ಜವಾಬ್ದಾರಿ ಎಂಬ ಕಾರಣಕ್ಕೆ ಮೂರು ತಿಂಗಳು ಸರಕಾರದ ಅಕ್ರಮ ಹಾಗೂ ವೈಫಲ್ಯಗಳನ್ನು ಬಹಿರಂಗವಾಗಿ ಪ್ರಶ್ನಿಸದೆ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆಯುವ ಮೂಲಕ ತಿಳಿಸಿದ್ದೆವು. ಆದರೂ ತಿದ್ದಿಕೊಳ್ಳದ ಕಾರಣ ಬಹಿರಂಗವಾಗಿ ಪ್ರಶ್ನಿಸುವುದು ಅನಿವಾರ್ಯವಾಗಿದೆ ಎಂದರು.

ಕೇಸರೀಕರಣ ಉದ್ದೇಶ
ಕೇಂದ್ರ ಸರಕಾರವು ಸಿಬಿಎಸ್‌ಸಿ ಪಠ್ಯ ಕ್ರಮದಲ್ಲಿ 11ನೇ ತರಗತಿಯ ರಾಜ್ಯಶಾಸ್ತ್ರ ವಿಷಯದಲ್ಲಿ ಪೌರತ್ವ, ಜಾತ್ಯತೀತತೆ ಹಾಗೂ ಒಕ್ಕೂಟ ವ್ಯವಸ್ಥೆಯ ಬಗೆಗಿನ ಮಾಹಿತಿಯನ್ನು ತೆಗೆದು ಹಾಕಿದ್ದು, ಆ ಪಕ್ಷ ಜಾತ್ಯತೀತ ವ್ಯವಸ್ಥೆ ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ ಎನ್ನುವುದನ್ನು ತೋರಿಸುತ್ತದೆ. ಜತೆಗೆ ಇದರ ಹಿಂದೆ ಕೇಸರಿಕರಣದ ಹುನ್ನಾರವೂ ಇದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next