Advertisement

ಜನಾಶೀರ್ವಾದದಿಂದ ಸಿಎಂ ಆಗುವ ಅರ್ಹತೆ

12:38 PM Apr 29, 2018 | |

ಬನ್ನೂರು: ಸೋಸಲೆ ಜನರ ಆಶೀರ್ವಾದದಿಂದ ನಾನಿಂದು ರಾಜ್ಯಮಟ್ಟದ ನಾಯಕರಾಗಿ ಹೊರಹೊಮ್ಮಿದ್ದು, ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಯನ್ನು ಪಡೆದಿದ್ದೇನೆಂದು ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ.ಮಹದೇವಪ್ಪ ತಿಳಿಸಿದರು. ಪಟ್ಟಣದ ಸೋಸಲೆ ಹೋಬಳಿಯಲ್ಲಿ ಕಾಂಗ್ರೆಸ್‌ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ಕಾಂಗ್ರೆಸ್‌ ಪಕ್ಷ ಭ್ರಷ್ಟಾಚಾರ ಮುಕ್ತವಾದ, ಎಲ್ಲ ಜನರಿಗೂ ಅನುಕೂಲವಾದ, ಬಡತನ ಮುಕ್ತ ಸಮಾಜದ ನಿರ್ಮಾಣ ಮಾಡುವಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಉತ್ತಮ ಕೆಲಸವನ್ನು ಮಾಡುತ್ತಿದೆ. ಇದನ್ನು ಸಹಿಸಲಾಗದ ಅನ್ಯಪಕ್ಷಗಳು ಬೊಗಳೆ ಮಾತುಗಳನ್ನು ಆಡುತ್ತಿವೆ ಎಂದರು.

20 ಅಂಶಗಳ ಕಾರ್ಯಕ್ರಮ: ಬಿಜೆಪಿಗೆ ಅಧಿಕಾರ ಸಿಕ್ಕರೆ ಇಂದಿರಾ ಗಾಂಧಿಯವರು ತಂದ 20 ಅಂಶಗಳ ಕಾರ್ಯಕ್ರಮ ನಾಶವಾದಂತೆ. ಸಿದ್ದರಾಮಯ್ಯನವರು ಮಾಡಿರುವ ಅನ್ನಭಾಗ್ಯ ಇತರೆ ಭಾಗ್ಯಗಳ ನಾಶವಾದಂತೆ. ಯಾವುದೇ ಕಾರಣಕ್ಕೂ ಬಿಜೆಪಿಗೆ ಅಧಿಕಾರ ನೀಡಬಾರದು. ಎಲ್ಲ ಜನರಿಗೂ, ವರ್ಗದವರಿಗೂ ಅನುಕೂಲವಾದ ಸಂವಿಧಾನವನ್ನು ಬಿ.ಆರ್‌.ಅಂಬೇಡ್ಕರ್‌ ರಚನೆ ಮಾಡಿದ್ದು, ಬಿಜೆಪಿಗೆ ಅಧಿಕಾರ ದೊರೆತರೆ ಸಂವಿಧಾನವನ್ನು ಬದಲಾಯಿಸುತ್ತಾರೆಂದು ಆರೋಪಿಸಿದರು.

ಸೋಸಲೆ ಗ್ರಾಮದ ಜನರು ಕಳೆದ ಚುನಾವಣೆಯಲ್ಲಿ ಉತ್ತಮವಾದ ಮತವನ್ನು ಹಾಕಿದ್ದು, ಅದಕ್ಕೆ ಅನುಗುಣವಾಗಿ ಗ್ರಾಮವನ್ನು ಮಾದರಿ ಮಾಡಲು ಕೋಟಿ ರೂ.ಗಳ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಚುನಾವಣೆಯ ನಂತರ ಅಧಿಕಾರ ದೊರೆತರೆ ಅವೆಲ್ಲವನ್ನೂ ಪೂರ್ಣಗೊಳಿಸುತ್ತೇನೆ. ಮೇ 12ರಂದು ಕಡ್ಡಾಯವಾಗಿ ಮತವನ್ನು ಹಾಕಬೇಕು. ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಮತವನ್ನು ನೀಡಿ ರಾಜ್ಯದಲ್ಲಿ ಮತ್ತೂಮ್ಮೆ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ತರುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಆರ್‌. ಚೆಲುವರಾಜು, ಜಿಪಂ ಸದಸ್ಯ ಮಂಜುನಾಥನ್‌, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ವಜ್ರೆàಗೌಡ, ಯಾಚೇನಹಳ್ಳಿ ಪಿಎಸಿಸಿ ಸಂಘದ ಅಧ್ಯಕ್ಷ ವೈ.ಎನ್‌. ಶಂಕರೇಗೌಡ, ಆರ್‌. ಶಂಕರೇಗೌಡ, ಲಕ್ಷ್ಮೀನಾರಾಯಣ್‌, ಬಸವರಾಜು ಇದ್ದರು. ಬನ್ನೂರಿನ ಸುಭಾಷ್‌ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಶಂಕರ್‌ ಮನೆ ಮನೆಗೆ ತೆರಳಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡಿದರು. ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ಶಿವಣ್ಣ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next