Advertisement

ಸ್ತನ ಕ್ಯಾನರ್‌ ಪ್ರಮಾಣ ಹೆಚುತ್ತಿರುವುದು ಆತಂಕಕಾರಿ

12:57 PM Nov 15, 2021 | Team Udayavani |

ಕೆಂಗೇರಿ: ಇತ್ತೀಚಿನ ದಿನಗಳಲ್ಲಿ ಮಹಿಳೆ ಯರಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ಸೀನಿ ಯರ್‌ ಸರ್ಜಿಕಲ್‌ ಅಂಕೋಲಾಜಿಸ್ಟ್‌ ಡಾ.ಮೋನಿಕಾ ಪನ್ಸಾರಿ ಹೇಳಿದರು.

Advertisement

ಯಶವಂತಪುರ ಕ್ಷೇತ್ರದ ಉತ್ತರಹಳ್ಳಿ ಮುಖ್ಯ ರಸ್ತೆಯ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ಯಲ್ಲಿ ಕ್ಯಾನ್ಸರ್‌ ಕ್ರೌಡ್‌ಫ‌ಂಡಿಂಗ್‌ ಸಹಭಾಗಿತ್ವದಲ್ಲಿ ಮಹಿಳೆಯರ ನೂತನ ಕ್ಯಾನ್ಸರ್‌ ಆರೈಕೆ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಇದು ಸಂಪೂರ್ಣ ಮಹಿಳಾ ವೈದ್ಯರು ಹಾಗೂ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಣೆ ಮಾಡುವ ಮಹಿಳೆಯ ಕ್ಯಾನ್ಸರ್‌ ಆರೈಕೆ ಕೇಂದ್ರ’ವಾಗಿದೆ. ಪ್ರತಿ 8 ಮಹಿಳೆ ಯರಲ್ಲಿ ಒಬ್ಬರು ಮಹಿಳೆಗೆ ಸ್ತನ ಕ್ಯಾನ್ಸರ್‌ ಬರುತ್ತಿದ್ದು, ಆರಂಭಿಕ ಹಂತದಲ್ಲಿಯೇ ಅದನ್ನು ಪತ್ತೆ ಮಾಡಿ ಸೂಕ್ಷ ಚಿಕಿತ್ಸೆ ಪಡೆದರೆ ಬದು ಕುಳಿಯುವ ಪ್ರಮಾಣ ಶೇಕಡ 95 ರಷ್ಟಿದೆ.

ಗ್ರಾಮೀಣ ಪ್ರದೇಶದ ಜನರಿಗೆ ಹೊಲಿಸಿ ನೋಡಿದರೆ ಸಾಮಾನ್ಯವಾಗಿ ನಗರ ಪ್ರದೇಶದಲ್ಲಿನ ಮಹಿಳೆಯರು ಬೇಗನೇ ಅಂದರೆ ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಮಾಡಿಕೊಂಡು ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಇದಕ್ಕೆ ಪ್ರಮುಖ ಕಾರಣ ಗ್ರಾಮೀಣ ಪ್ರದೇಶದ ಜನರಿಗೆ ಸ್ತನ ಕ್ಯಾನ್ಸರ್‌ ಬಗ್ಗೆ ಅರಿವಿನ ಕೊರತೆ ಇರುವುದು ಎಂದು ಹೇಳಿದರು.

ಇದನ್ನೂ ಓದಿ:- ತುಮಕೂರು: ವಾಚ್ ಮ್ಯಾನ್ ನನ್ನು ಭೀಕರವಾಗಿ ಕೊಲೆಗೈದು ಬ್ಯಾಂಕ್ ದರೋಡೆ ಮಾಡಿದ ಕಳ್ಳರು.!

Advertisement

ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ಸಿಇಒ ಡಾ. ಸಂದೀಪ್‌ ಕುಮಾರ್‌ ಮಾತನಾಡಿ, ರೋಗದ ಕಾರಣವನ್ನು ಗುರುತಿಸುವುದು ಅತ್ಯಂತ ಕಷ್ಟಕರ, ಆದಾಗ್ಯೂ ಜಡವಾದ ಜೀವನ ಶೈಲಿ, ಮದ್ಯ ಸೇವನೆ, ಯುವಕರಲ್ಲಿ ಸ್ತೂಲಕಾಯತೆ ಮತ್ತು ಕಳಪೆ ಆಹಾರ ಸೇವನೆ ಸೇರಿದಂತೆ ಈ ರೋಗಕ್ಕೆ ಹಲವಾರು ಅಪಾಯಕಾರಿ ಅಂಶಗಳಿವೆ. ಭಾರತದಲ್ಲಿ ರೋಗದ ಬಗ್ಗೆ ಇರುವ ಅರಿವಿನ ಕೊರತೆ, ತಡವಾಗಿ ರೋಗನಿರ್ಣಯ ಮತ್ತು ತಪಾಸಣೆಯಿಂದಾಗಿ ಸ್ತನ ಕ್ಯಾನ್ಸರ್‌ನಿಂದ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ ಎಂದರು.

ಬೆಳಗ್ಗೆ 7 ಗಂಟೆಗೆ ರಾಜರಾಜೇಶ್ವರಿ ನಗರ ಮಹಾದ್ವಾರದಿಂದ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯ ವೈದ್ಯರ ತಂಡ, ಪ್ರಮುಖ ಆರೋಗ್ಯ ಆರೈಕೆ ಹಣಕಾಸು ಫ್ಲಾಟ್‌ಪಾರ್ಮ್ ಆಗಿರುವ ಇಂಪ್ಯಾಕ್ಟ್ ಗುರು.ಕಾಂ ಸಹಭಾಗಿತ್ವದಲ್ಲಿ “”ಪಿಂಕ್‌ ರೈಡ್‌” ಹೆಸರಿನಲ್ಲಿ ಸೈಕ್ಲಾಥ್ಲಾನ್‌ ಅನ್ನು ಏರ್ಪಡಿಸಲಾಗಿತ್ತು. ಆರ್‌.ಆರ್‌.ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಸಾಗಿ ಕೆಂಗೇರಿ ಉತ್ತರಹಳ್ಳಿ ರಸ್ತೆಯ ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆಯಲ್ಲಿ ಸಮಾವೇಶಗೊಂಡಿತು.

ಕ್ಯಾನ್ಸರ್‌ ಆರೈಕೆ ಕೇಂದ್ರದ ಉದ್ಘಾಟನೆಯನ್ನು ಚಿತ್ರನಟಿ ಮತ್ತು ಡಬ್ಬಿಂಗ್‌ ಕಲಾವಿದೆ ಸುನೇತ್ರ ಪಂಡಿತ್‌ ನೆರವೇರಿಸಿದರು.ಖ್ಯಾತ ರಂಗಕರ್ಮಿ ನಯನ ಸೂಡ, ನಿರ್ಮಾ ಪಕಿ ಜಯಶ್ರೀ ರಾಜ್‌, ಚಿತ್ರ ಕಲಾವಿದ, ರೋಟರಿ ಬನಶಂಕರಿ ಅಧ್ಯಕ್ಷ ರೋಹಿತ್‌ ನಾಗೇಶ್‌, ರೇಡಿಯೇಷನ್‌ ಆಂಕೋಲಜಿಸ್ಟ್‌ ಡಾ.ಮಾತಂಗಿ, ಮೆಡಿಕಲ್‌ ಆಂಕೋಲಜಿಸ್ಟ್‌ ಡಾ.ರಾಜೀವ್‌, ಕ್ಯಾನ್ಸರ್‌ನಿಂದ ಗುಣಮುಖರಾದವರು, ಸೈಕ್ಲಿಂಗ್‌ ಗುಂಪುಗಳು, ಬೈಕರ್‌ ಗಳು ಸೇರಿದಂತೆ 400ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next