Advertisement

ಭ್ರಷ್ಟರನ್ನು ಸ್ವಾಗತಿಸುತ್ತಿರುವುದು ದುರಂತ- ಭ್ರಷ್ಟರ ಪೂಜೆ ಮಾಡಬೇಡಿ; ಸಂತೋಷ್ ಹೆಗ್ಡೆ

09:52 AM Oct 27, 2019 | Team Udayavani |

ಬಳ್ಳಾರಿ: ಹಿಂದೆ ಜೈಲಿಗೆ ಹೋದವರನ್ನು ಜನರು ಚುನಾವಣೆಗಳಲ್ಲಿ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಅಂತಹವರನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪರೋಕ್ಷವಾಗಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ಶನಿವಾರ ಬಳ್ಳಾರಿಯಲ್ಲಿ ಮಾತನಾಡಿದ ಅವರು, ನಾವು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ. ಈ ವ್ಯವಸ್ಥೆ ಬದಲಾಗಬೇಕಿದೆ. ಜನರು ಬದಲಾಗಬೇಕಿದೆ. ಈಗ ಜನರಲ್ಲಿ ದುರಾಸೆ, ಅಧಿಕಾರದ ಆಸೆಯೂ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಕ್ಕೆ ಬಂದವರು ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಧಿಕಾರದಲ್ಲಿ ಇರುವವರು ಎಷ್ಟು ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು ವಿಶ್ಲೇಷಿಸಬೇಕಾಗಿದೆ. ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಯೂ ದುರ್ಬಲವಾಗಿದೆ ಎಂದರು.

ಭ್ರಷ್ಟಾಚಾರ ಇಂದು ಮಿತಿಮೀರಿ ಬೆಳೆಯುತ್ತಿದೆ. ಏಕವ್ಯಕ್ತಿ ಪೂಜೆಯನ್ನಾದರೂ ಮಾಡಿ, ಆದರೆ ಭ್ರಷ್ಟರ ಪೂಜೆಯನ್ನು ಮಾಡಬೇಡಿ ಎಂದು ಹೆಗ್ಡೆ ಈ ಸಂದರ್ಭದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next