Advertisement
ಇನ್ನು 7.5 ಲಕ್ಷ ರೂ.ಗಳವರೆಗಿನ ಕೌಶಲ್ಯ ಸಾಲಕ್ಕೆ ಪ್ರತಿ ವರ್ಷ 25 ಸಾವಿರ ವಿದ್ಯಾರ್ಥಿಗಳಿಗೆ ಗ್ಯಾರಂಟಿ ನೀಡುವುದರಿಂದ ವಿದ್ಯಾರ್ಥಿಗಳು ಓದುವ ಸಮಯದಲ್ಲಿಯೇ ಸ್ವಂತವಾಗಿ ಏನನ್ನಾದರೂ ಮಾಡಲು ಪ್ರಯತ್ನಿಸುತ್ತಾರೆ. ಇದರ ಜೊತೆಗೆ ಉದ್ಯೋಗ ಭದ್ರತೆಗೆ 2-3 ಉದ್ಯೋಗ ಭದ್ರತೆ ಯೋಜನೆಯನ್ನು ಪ್ರಕಟಿಸಿದ್ದಾರೆ. 3 ತಿಂಗಳ ಸಂಬಳವನ್ನು ಕಂತಿನ ಮೂಲಕವೇ ಸರ್ಕಾರವೇ ನೀಡುತ್ತದೆ. ಇದರ ಜೊತೆಗೆ ಇಪಿಎಫ್ ನಿಧಿಯನ್ನು ಸರ್ಕಾರವೇ ಎರಡು ವರ್ಷ ನೀಡುವುದು ಉತ್ತಮ ಕ್ರಮಗಳಾಗಿವೆ.ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಗೆ ಆಯವ್ಯಯದಲ್ಲಿ ಏನನ್ನೂ ನೀಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇದು ತಪ್ಪು ಅಭಿಪ್ರಾಯ. ಸರ್ಕಾರ ಎನ್‌ಇಪಿ ಜಾರಿಗೆ ಏನೆಲ್ಲಾ ಮಾಡಬಹುದು, ಬಜೆಟ್‌ನಲ್ಲಿ ಏನು ಕೊಡಬಹುದು ಅದನ್ನೆಲ್ಲ ಕೊಟ್ಟಿದೆ. ಶಿಕ್ಷಣದ ದೃಷ್ಟಿಯಿಂದ ಅತ್ಯುತ್ತಮವಲ್ಲದಿದ್ದರೂ ಇದೊಂದು ತೃಪ್ತಿಕರ ಬಜೆಟ್ ಎಂಬುದು ನನ್ನ ಅಭಿಪ್ರಾಯ.