Advertisement
ಸಾ ಮಾನ್ಯವಾಗಿ ವಯಸ್ಸು 50 ದಾಟುತ್ತಿದ್ದಂತೆ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಲಕ್ಷಣಗಳು ಕಂಡು ಬರುತ್ತವೆ, ಇದನ್ನು ಮೆನೋಪಾಸ್ ಎಂದು ಕರೆಯುತ್ತಾರೆ. ಮೆನೋಪಾಸ್ ಒಂದು ಸಹಜ ಪ್ರಕ್ರಿಯೆ.
ಆದರೆ ಮೆನೋಪಾಸ್ ಎನ್ನುವುದು ಒಂದು ಕಾಯಿಲೆಯಲ್ಲ, ಪ್ರತಿ ಮಹಿಳೆಯ ಜೀವಿತಾ ವಧಿ ಯಲ್ಲಿ ನಡೆಯುವ ಒಂದು ನೈಸರ್ಗಿಕ ಪ್ರಕ್ರಿಯೆ. ಅಂದರೆ ನಿಧಾನಕ್ಕೆ ಅಂಡಾ ಶಯದ ಕಾರ್ಯ ನಿಲ್ಲಿಸುವ ಪ್ರಕ್ರಿಯೆ. ಈ ಹಂತದಲ್ಲಿ ಕೆಲವರಿಗೆ 15 ದಿನಗಳಿಗೊಮ್ಮೆ ಮುಟ್ಟಾದರೆ ಮತ್ತೆ ಕೆಲವರಿಗೆ 2-3 ತಿಂಗಳು ಮುಟ್ಟಾಗುವುದೇ ಇಲ್ಲ, ಈ ರೀತಿ ಆಗುತ್ತಾ ಕೆಲವು ತಿಂಗಳಿನಲ್ಲಿ ಮುಟ್ಟಿನ ಪ್ರಕ್ರಿಯೆ ಸಂಪೂರ್ಣ ನಿಂತು ಹೋಗಿರುತ್ತದೆ.
Related Articles
ಅಕಾಲಿಕ ಮೆನೋಪಾಸ್‌ಗೆ ಜೀವನಶೈಲಿ ಕಾರಣಮೆನೋಪಾಸ್ 45 ವರ್ಷ ಕಳೆದ ಮೇಲೆ ಉಂಟಾದರೆ ಅದು ಸಹಜವಾದ ಪ್ರಕ್ರಿಯೆ, ಆದರೆ ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ಈ ಸಮಸ್ಯೆ ಕಂಡು ಬರುತ್ತದೆ, ಇದು ಸಹಜವಲ್ಲ. ಅಕಾಲಿಕ ಮೆನೋಪಾಸ್‌ಗೆ ಜೀವನಶೈಲಿ ಪ್ರಮುಖ ಕಾರಣವಾಗಿದೆ. ಆಧುನಿಕ ಜೀವನ ಶೈಲಿ, ಕೃತಕ ಗರ್ಭಧಾರಣೆ, ರಾಸಾಯನಿಕಗಳು, ವಿಷಯುಕ್ತ ಆಹಾರ (ರಾಸಾಯನಿಕ ರಸಗೊಬ್ಬರ ಹಾಗೂ ಕೀಟನಾಶಕ ಬಳಸಿದ ಆಹಾರ) ಸೇವನೆ ಇವೆಲ್ಲ ಅಕಾಲಿಕ ಮೆನೋಪಾಸ್‌ಗೆ ಪ್ರಮುಖ ಕಾರಣಗಳಾಗಿವೆ.
Advertisement
ಬಂಜೆತನಕ್ಕೆ ಕಾರಣವಾಗಬಹುದುಅಕಾಲಿಕ ಮೆನೋಪಾಸ್ ಅನೇಕ ಮಹಿಳೆ ಯರಲ್ಲಿ ಬಂಜೆತನ ಉಂಟಾಗಲು ಪ್ರಮುಖ ಕಾರಣವಾಗಿದೆ. ಶಿಕ್ಷಣ, ಉದ್ಯೋಗ ಅಂತ ವಯಸ್ಸು 30 ದಾಟಿದರೂ ಮದುವೆಯತ್ತ ಆಸಕ್ತಿ ತೋರದ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಈ ರೀತಿ ಅಕಾಲಿಕ ಮೆನೋಪಾಸ್ ಉಂಟಾದರೆ ಮದುವೆ ಬಳಿಕ ಮಕ್ಕಳಾಗದಿರುವ ಸಮಸ್ಯೆ ಎದುರಾಗುತ್ತದೆ. ಕೆಲವರಿಗೆ ಅಕಾಲಿಕ ಮೆನೋಪಾಸ್ ವಂಶಪಾರಂಪರ್ಯವಾಗಿಯೂ ಬರುತ್ತದೆ. ದೇಹದಲ್ಲಾಗುವ ಬದಲಾವಣೆ
ಮೆನೋಪಾಸ್ ಅನಂತರ ಅಂಡಾಶಯದ ಗಾತ್ರ ಕಡಿಮೆಯಾಗಿ ಅಂಡಾಣು ಉತ್ಪತ್ತಿ ಆಗುವುದಿಲ್ಲ. ಪರಿಣಾಮ ಗರ್ಭನಾಳ ನಿಶ್ಯಕ್ತವಾಗಿ ಗರ್ಭಕೋಶದ ಗಾತ್ರ ಕಡಿಮೆ ಯಾಗುವುದು. ಯೋನಿಯಲ್ಲಿ ಪಿಎಚ್ ಪ್ರಮಾಣ ಕಡಿಮೆಯಾಗುವುದು. ಆರೋಗ್ಯಕರ ಜೀವನಶೈಲಿ ಪಾಲಿಸದಿದ್ದರೆ ಮೆನೋಪಾಸ್ ಬಳಿಕ ಮೈಬೊಜ್ಜಿನ ಸಮಸ್ಯೆ ಉಂಟಾಗುವುದು. ಹಿಂದೆ ಹೆಣ್ಣುಮಕ್ಕಳಿಗೆ 50 ರಿಂದ 55 ಋತುಬಂಧ ಕಾಲ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಋತುಬಂಧ 35 ವರ್ಷಕ್ಕೆ ಕಾಣಿಸಿಕೊಳ್ಳುತ್ತಿದೆ. ಋತುಚಕ್ರ ನಿಲ್ಲುವ ಹಂತದಲ್ಲಿ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ನಿಗದಿತ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಕೊಂಡರೆ ಉತ್ತಮ.
-ಡಾ| ಅಪರ್ಣಾ,
ಪ್ರಸೂತಿ ಶಾಸ್ತ್ರ ವಿಭಾಗ,
ಎಸ್‌ಡಿಎಂ ಆಯುರ್ವೇದ ಕಾಲೇಜು, ಉದ್ಯಾವರ ಮೆನೋಪಾಸ್‌ನ
ಲಕ್ಷಣಗಳೇನು
-ಅನಿಯಮಿತ ಮುಟ್ಟು, ಅಧಿಕ ರಕ್ತಸ್ರಾವ, ಕಡಿಮೆ ರಕ್ತಸ್ರಾವ, ವಯಸ್ಸು 30 ದಾಟಿದ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸುತ್ತಿದ್ದರೂ ಗರ್ಭಿಣಿಯಾಗದಿದ್ದರೆ ರಕ್ತಪರೀಕ್ಷೆ ಹಾಗೂ ಅಲ್ಟ್ರಾಸೌಂಡ್ ಮಾಡಿಸಿಕೊಂಡರೆ ಮೆನೋಪಾಸ್ ಉಂಟಾಗಿದೆಯೇ ಎಂದು ತಿಳಿಯಬಹುದು.
-ಇನ್ನು ಸಹಜ ಪ್ರಕ್ರಿಯೆಯಲ್ಲಿ ಸಾಮಾನ್ಯವಾಗಿ ತುಂಬಾ ಸೆಕೆಯಾಗುವುದು, ಮೈ ಬೆವರಿ ಉದ್ವೇಗ ಹೆಚ್ಚಾಗುವುದು, ವಿನಾಕಾರಣ ಬೇಸರ ಅನಿಸುವುದು, ಪದೇ ಪದೆ ಮೂತ್ರವಿಸರ್ಜನೆ, ವಿಪರೀತ ತಲೆನೋವು, ನಿದ್ರೆ ಬಾರದಿರುವುದು, ಮಾನಸಿಕ ಕಿರಿಕಿರಿ, ಖನ್ನತೆ ಕಾಣಿಸಿಕೊಳ್ಳುವುದು.
– ಹೊಟ್ಟೆಯ ಭಾಗದಲ್ಲಿ ಚರ್ಮ ಸುಕ್ಕಾಗುವುದು.
-ಲೈಂಗಿಕಕ್ರಿಯೆಯ ಸಂದರ್ಭದಲ್ಲಿ ನೋವು ಉಂಟಾಗುವುದು.
– ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು.
-ತುಂಬಾ ಖನ್ನತೆಗೆ ಒಳಗಾಗುತ್ತಾರೆ, ಹೀಗೆ ಉಂಟಾದರೆ ಸೂಕ್ತ ಚಿಕಿತ್ಸೆ ನೀಡಿದರೆ ಸರಿಯಾಗುವುದು. ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
-ಆಹಾರಕ್ರಮ ಹೀಗಿರಲಿ
ಮೆನೋಪಾಸ್ ಸಮಯದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದ ರಿಂದ ಆಹಾರದ ಮೂಲಕ ಆ ಕೊರತೆ ಉಂಟಾಗದಂತೆ ನೋಡಿಕೊಳ್ಳಿ. ಹಾಲು, ಮೊಸರು, ಮಜ್ಜಿಗೆಯ ಬಳಕೆಯನ್ನು ಹೆಚ್ಚಿಸಿ, ನುಗ್ಗೆಸೊಪ್ಪನ್ನು ತಿನ್ನಿ. ಅಡುಗೆಯಲ್ಲಿ ಕರಿಬೇವು ಬಳಸಿ, ಇದು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ. ತಾಜಾ ಸೊಪ್ಪು, ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ. ಮೈ ತೂಕ ಹೆಚ್ಚದಿರಲು ಆಹಾರಕ್ರಮದ ಕಡೆ ಗಮನ ಕೊಡಿ, ಮೈ ತೂಕ ಹೆಚ್ಚಿದರೆ ಮಂಡಿ ನೋವಿನ ಸಮಸ್ಯೆ ಉಂಟಾಗುವುದು. ನಾರಿನಂಶ, ವಿಟಮಿ®Õ…, ಖನಿಜಾಂಶಗಳು ಅಧಿಕವಿರುವ ಆಹಾರ ಆಹಾರ ಕ್ರಮದಲ್ಲಿರಲಿ. ಮೀನು, ಕಾಳುಗಳು, ಬಟಾಣಿ, ಬೀನ್ಸ್ ಇವುಗಳನ್ನು ಆಹಾರದಲ್ಲಿ ಬಳಸುವವರಿಗೆ ಅಕಾಲಿಕ ಮೆನೋಪಾಸ್ ಉಂಟಾಗುವುದಿಲ್ಲ. -ಅಕಾಲಿಕ ಮೆನೋಪಾಸ್ ಆದಾಗ ಹೀಗೆ ಮಾಡಿ
ಶಸ್ತ್ರಚಿಕಿತ್ಸೆಯ ಮೂಲಕ ಅಂಡಾಶಯವನ್ನು ತೆಗೆಸಿದಾಗ ಮೆನೋ ಪಾಸ್ ಆಗಬಹುದು. ಅದೇ ರೀತಿ ಗರ್ಭಪಾತ, ಕೃತಕ ಗರ್ಭಧಾರಣೆ, ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಂಡಾಗ ಅಕಾಲಿಕ ಮೆನೋಪಾಸ್ ಉಂಟಾಗುವುದು. ಹಾರ್ನೋನ್‌ಗಳ ವ್ಯತ್ಯಾಸದಿಂದ ದೇಹದ ತೂಕ ಹೆಚ್ಚಾಗುವುದು ಅಥವಾ ತುಂಬಾ ಕಡಿಮೆಯಾಗುವುದು ಉಂಟಾಗುತ್ತದೆ. ಕೆಲವರಿಗೆ ಈ ಕಾರಣದಿಂದ ಖನ್ನತೆ ಸಮಸ್ಯೆ ಉಂಟಾಗುತ್ತದೆ.ಈ ರೀತಿ ಉಂಟಾದಾಗ ಅವರಿಗೆ ಮನೆಯವರು ಸರಿಯಾದ ಆರೈಕೆ ಮಾಡಿದರೆ ಬೇಗನೆ ಚೇತರಿಸಿಕೊಳ್ಳುತ್ತಾರೆ. -ಮನೆಯವರ ಸಹಕಾರವಿರಲಿ
ಅಕಾಲಿಕ ಅಥವಾ ನೈಸರ್ಗಿಕವಾಗಿ ಮೆನೋಪಾಸ್ ಉಂಟಾದಾಗ ಮಹಿಳೆಗೆ ಮನೆಯಲ್ಲಿ ಪತಿ ಹಾಗೂ ಮಕ್ಕಳ ಆರೈಕೆ ಬೇಕಾಗುತ್ತದೆ. ಈ ಸಮಯದಲ್ಲಿ ತನ್ನನ್ನು ಪ್ರೀತಿಸುವವರು ಯಾರೂ ಇಲ್ಲ ಅಂತ ಅನಿಸಬಹುದು, ಹಾಗಾಗಿ ಸೂಕ್ತ ಕಾಳಜಿ ತೋರಿಸಿದರೆ ಆ ಭಾವನೆ ಯನ್ನು ಇಲ್ಲವಾಗಿಸಬಹುದು. ಈ ಸಮಯದಲ್ಲಿ ಭಾವನಾತ್ಮಕವಾಗಿ ಬೆಂಬಲ ನೀಬೇಕೆ ಹೊರತು ಈ ವಯಸ್ಸಿನಲ್ಲಿ ಇವೆಲ್ಲ ಸಹಜ ಅಂತ ಮನೆಯವರು ಅಸಡ್ಡೆ ಮಾಡಬಾರದು. -ಆರೋಗ್ಯ ತಪಾಸಣೆ ಮಾಡಿಸಿ
ಈ ಸಮಯದಲ್ಲಿ ಥೈರಾಯ್ಡ್, ಗರ್ಭಕೋಶದ ಸಮಸ್ಯೆಯಿದ್ದರೆ ಪತ್ತೆ ಹಚ್ಚಲು ಸಹಾಯವಾಗುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡಬೇಕು, ಸ್ವಲ್ಪ ಹೊತ್ತು ಸೂರ್ಯನ ಬಿಸಿಲಿನಲ್ಲಿ ನಿಲ್ಲುವುದರಿಂದ ವಿಟಮಿನ್ ಡಿ ದೊರೆಯುತ್ತದೆ. ಇದರಿಂದ ಮೂಳೆಗಳು ಬಲವಾಗುತ್ತವೆ. ಸುಶ್ಮಿತಾ ಜೈನ್