Advertisement

ಹಣ ವಸೂಲಿಗೆ ಐಟಿ ದಾಳಿ: ಮೊಯ್ಲಿ

06:25 AM Sep 10, 2018 | |

ಚಿಕ್ಕಬಳ್ಳಾಪುರ: ಯುಪಿಎ ಸರ್ಕಾರದಲ್ಲಿ ರೂಪಿಸಿದ್ದ ಪೆಟ್ರೋಲಿಯಂ ನೀತಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸದೆ ನಿರ್ಲಕ್ಷಿéಸಿರುವ ಪರಿಣಾಮ ಇಂದು ದೇಶದ ಖಜಾನೆಗೆ ಕಳೆದ ನಾಲ್ಕೂವರೆ ವರ್ಷದಲ್ಲಿ 16 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕೇಂದ್ರದ ಪೆಟ್ರೋಲಿಯಂ ಖಾತೆ ಮಾಜಿ ಸಚಿವ ಎಂ. ವೀರಪ್ಪ ಮೊಯ್ಲಿ ಆರೋಪಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಪಕ್ಷಕ್ಕೆ ಹಣ ವಸೂಲಿ ಮಾಡಿಕೊಳ್ಳಲು, ಕಾಂಗ್ರೆಸ್‌ ಪಕ್ಷದ ಮುಖಂಡರು ಹಾಗೂ ಉದ್ಯಮಿಗಳ ಮೇಲೆ ಕೇಂದ್ರ ಸರ್ಕಾರ ದಾಳಿ ಮಾಡಿಸುತ್ತಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಜಕೀಯವಾಗಿ ತಮಗೆ ವಿರೋಧ ಇರುವವರನ್ನು ಬಿಜೆಪಿಗೆ ಸೆಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಡಿ, ಐಟಿ ಹಾಗೂ ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ಅಸOಉವಾಗಿ ಬಳಸಿಕೊಳ್ಳುತ್ತಿದೆ. ದೇಶದ ಇತಿಹಾಸದಲ್ಲಿ ಇಂತಹ ಪ್ರಕರಣಗಳು ಎಂದೂ ನಡೆದಿಲ್ಲ. ಕೇಂದ್ರಸರ್ಕಾರ ದೇಶದ ಜನರ ಮೇಲೆ ದೌರ್ಜನ್ಯ  ನಡೆಸುತ್ತಿದೆ ಎಂದು ಆರೋಪಿಸಿದರು.

2030ರೊಳಗೆ ದೇಶಕ್ಕೆ ಅವಶ್ಯಕವಾಗುವಷ್ಟು ತೈಲ ಉತ್ಪನ್ನಗಳನ್ನು ದೇಶದಲ್ಲಿ ಉತ್ಪಾದನೆ ಮಾಡಿಕೊಳ್ಳಬೇಕು ಎಂದು ಹಿಂದಿನ ಯುಪಿಎ ಸರ್ಕಾರ ನೂತನ ಪೆಟ್ರೋಲಿಯಂ ನೀತಿಯನ್ನು ರೂಪಿಸಿತ್ತು. ಆದರೆ, ಕೇಂದ್ರ ಸರ್ಕಾರ ಆ ನೀತಿಯನ್ನು ನಿರ್ಲಕ್ಷಿéಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next